Donald Trump: ಚೀನಾ ಜೊತೆಗಿನ ಅಮೆರಿಕದ ತೆರಿಗೆ ಯುದ್ಧ ಶೀಘ್ರದಲ್ಲೇ ಅಂತ್ಯ?

ಚೀನಾ ಜೊತೆಗೆ ತೆರಿಗೆ ಜಿದ್ದಿಗೆ ಬಿದ್ದಿರುವ ಅಮೆರಿಕ, ಹೊಸ ಹೊಸ ಸಮಸ್ಯೆ ಸೃಷ್ಟಿಸುತ್ತಿದೆ ಎಂಬ ಆರೋಪ ಇದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಕೈಗೊಂಡಿರುವ, ಜಾರಿಗೆ ತರುತ್ತಿರುವ ಹೊಸ ಹೊಸ ನಿಯಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಮಾಡುವುದೇ ಕಷ್ಟ ಎನ್ನುವಂತೆ ಮಾಡಿದೆ. ಹೀಗಿದ್ದಾಗಲೇ, ಚೀನಾ ಜೊತೆಗಿನ ಅಮೆರಿಕದ ತೆರಿಗೆ ಯುದ್ಧಕ್ಕೆ ಶೀಘ್ರದಲ್ಲೇ ಅಂತ್ಯ ಹಾಡಲು ಡೊನಾಲ್ಡ್ ಟ್ರಂಪ್ ಸಿದ್ಧರಾಗಿದ್ದಾರಾ??

ಒಂದು ದಿನ ಶೇಕಡಾ 100 ರಷ್ಟು ತೆರಿಗೆ... ಇನ್ನೊಂದು ದಿನ ಶೇಕಡಾ 245 ರಷ್ಟು ತೆರಿಗೆ ಹಾಕುವ ಎಚ್ಚರಿಕೆ... ಹೀಗೆಲ್ಲಾ ಟ್ರಂಪ್ ಆಡಳಿತದ ಅಧಿಕಾರಿಗಳು ಕಾನೂನು ಉಲ್ಲಂಘನೆಯ ಮಾಡಿ, ತಮ್ಮ ಮನಸ್ಸಿಗೆ ಬಂದಂತೆಲ್ಲಾ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಸರ್ಕಾರವನ್ನ ಕಾನೂನು ಉಲ್ಲಂಘನೆ ಆರೋಪದಡಿ ಗುರಿಪಡಿಸಲು ಎಲ್ಲಾ ಅವಕಾಶ ಇದೆ ಎಂದು ಅಂತಾ ಚರ್ಚೆಯನ್ನ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲೇ ಚೀನಾ ಜೊತೆಗಿನ ತಿಕ್ಕಾಟವನ್ನು ಕೊನೆಗಾಣಿಸಲು ಡೊನಾಲ್ಡ್ ಟ್ರಂಪ್ ಸಿದ್ಧರಾಗಿರುವ ಮುನ್ಸೂಚನೆ ಸಿಕ್ಕಿದೆ!

Trump Signals Possible End to Tit-for-Tat China Tariffs

ತೆರಿಗೆ ಯುದ್ಧಕ್ಕೆ ಟ್ರಂಪ್ ಕೊನೆಯ ಮೊಳೆ?

ಚೀನಾ ಜೊತೆಯಲ್ಲಿ ಇದೇ ರೀತಿಯಾಗಿ ಅಮೆರಿಕ ತೆರಿಗೆ ಯುದ್ಧ ಮುಂದುವರಿಸಿದರೆ, ಪರಿಸ್ಥಿತಿ ಇನ್ನಷ್ಟು ವಿಷಕಾರಿ ಆಗಲಿದೆ. ಇದೇ ಕಾರಣಕ್ಕೆ ಟ್ರಂಪ್ ಅವರು ಹೊಸ ಚರ್ಚೆ ಶುರು ಮಾಡಿ ಈ ತಿಕ್ಕಾಟ ಕೊನೆ ಮಾಡಲು ಮುಂದಾಗಿದ್ದಾರೆ. ನಾನು ಪರಿಸ್ಥಿತಿ ಇನ್ನೂ ಕೈಮೀರುವಂತೆ ಬಿಡುವುದಿಲ್ಲ, ನಾವು ಚೀನಾ ಜೊತೆಗೆ ಈಗಾಗಲೇ ಚರ್ಚೆ ಮಾಡಿದ್ದೇವೆ. ಚರ್ಚೆ ಸಮಯದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಆದಷ್ಟು ಬೇಗ ಎಲ್ಲಾ ಗೊಂದಲ ಬಗೆಹರಿಯುವ ಬಗ್ಗೆ ವಿಶ್ವಾಸ ಇದೆ ಎಂದಿದ್ದಾರೆ.

ಅಮೆರಿಕದ ಗುಟ್ಟು ಕೊನೆಗೂ ಬಯಲು!

ಚೀನಾ ದೇಶದಿಂದ ಅಮೆರಿಕಗೆ ಹೋಗುವ ವಸ್ತುಗಳ ಬೆಲೆಯನ್ನು ಯಾವ ರೀತಿ ಹೇರಿಕೆ ಮಾಡಿ, ಜನರಿಗೆ ಎಷ್ಟೆಲ್ಲಾ ಹೆಚ್ಚಿನ ರೇಟ್‌ಗೆ ಮಾರಾಟ ಮಾಡಲಾಗುತ್ತದೆ? ಎಂಬದನ್ನ ಇದೀಗ ಸ್ವತಃ ಚೀನಾದ ಜನರು ಬಿಚ್ಚಿಡುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ವಿಡಿಯೋಗಳನ್ನ ಮಾಡುತ್ತಾ, ಅಮೆರಿಕದ ಸಂಸ್ಥೆಗಳು ಹೇಗೆಲ್ಲಾ ಮೋಸ ಮಾಡುತ್ತಿವೆ? ಎಂಬುದನ್ನ ಚೀನಾ ಪ್ರಜೆಗಳು ಜಗತ್ತಿಗೆ ತಿಳಿಸುತ್ತಿದ್ದಾರೆ. ಈ ರೀತಿಯ ವಿಡಿಯೋಗಳು ಅಮೆರಿಕದ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಭಯ ಹುಟ್ಟಿಸಿವೆ.

8000 ರೂಪಾಯಿ ಬೆಲೆಯಲ್ಲಿ ಚೀನಾ ಮೂಲಕ ಖರೀದಿ ಮಾಡುವ ವಸ್ತು 24 ಲಕ್ಷ ರೂಪಾಯಿಗೆ ಹೇಗೆಲ್ಲಾ ಮಾರಾಟ ಆಗುತ್ತಿದೆ? ಬ್ಯಾಗ್ ಒಂದಕ್ಕೆ ಎಷ್ಟು ಬೆಲೆ ಇರಲಿದೆ? ಅಮೆರಿಕದಲ್ಲಿ ನೀವು ಎಷ್ಟು ಬೆಲೆ ಕೊಡುತ್ತಿದ್ದೀರಿ? ಅಮೆರಿಕದ ಸರ್ಕಾರವು ಎಷ್ಟೆಲ್ಲಾ ಟ್ಯಾಕ್ಸ್ ಹಾಕುತ್ತಿದೆ? ಎಂಬ ಸತ್ಯವನ್ನ ಇದೀಗ ಚೀನಾ ಜನ ಸೋಷಿಯಲ್ ಮೀಡಿಯಾ ಮೂಲಕ ಬಯಲು ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಕೂಡ ಚೀನಾ ಜೊತೆಯಲ್ಲಿ ಕೂತು ಮಾತುಕತೆ ನಡೆಸುವ ಭರವಸೆ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+