ಚೀನಾ ಜೊತೆ ಸಂಬಂಧ ಸರಿ ಮಾಡಿಕೊಳ್ಳಲು ಟ್ರಂಪ್ ಹೊಸ ತಂತ್ರ!
ಅಮೆರಿಕ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಮಾಡಿಕೊಂಡ ತಪ್ಪನ್ನು ಈಗ ತಾವೇ ಸರಿ ಮಾಡಲು ಮುಂದಾಗಿದ್ದಾರೆ ಅಂತಾ ಕಾಣುತ್ತೆ. ಅಮೆರಿಕದ ಮಿತ್ರ ದೇಶಗಳ ವಿರುದ್ಧ ಕೂಡ ಭಾರಿ ದೊಡ್ಡ ಪ್ರಮಾಣದ ತೆರಿಗೆ ಹೇರಿಕೆ ಮಾಡುವ ಮೂಲಕ ಡೊನಾಲ್ಡ್ ಟ್ರಂಪ್ ಸಂಚಲನ ಸೃಷ್ಟಿ ಮಾಡಿದ್ರು. ಅದರಲ್ಲೂ ಚೀನಾ ವಿರುದ್ಧ ಕೂಡ ತೆರಿಗೆ ಯುದ್ಧ ಸಾರುವ ಮೂಲಕ ಟ್ರಂಪ್ ಜಾಗತಿಕ ಮಟ್ಟದಲ್ಲಿ ಭಾರಿ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದರು. ಇಷ್ಟೆಲ್ಲಾ ಒತ್ತಡದ ನಡುವೆ ಈಗ ಚೀನಾ ಜೊತೆ ಸಂಬಂಧ ಸರಿ ಮಾಡಲು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಅಮೆರಿಕ
ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನೇರ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭೇಟಿ ಮಾಡಿ ಚರ್ಚಿಸಲು ನಿರ್ಧಾರ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಮಹತ್ವದ ಚರ್ಚೆ ನಡೆಯುವ ನಿರೀಕ್ಷೆ ಇದೆ. ಈ ಮೂಲಕ ಅಮೆರಿಕದ ಆರ್ಥಿಕತೆ ರಕ್ಷಣೆಗೆ ಡೊನಾಲ್ಡ್ ಟ್ರಂಪ್ ಹೊಸ ತಂತ್ರ ಹೂಡಿದ್ದಾರೆ ಎನ್ನಲಾಗಿದೆ. ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲು ಇದೀಗ ಟ್ರಂಪ್ ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ಏಷ್ಯಾ ದೇಶಗಳ ಜೊತೆಗೆ ಮತ್ತೊಮ್ಮೆ ಸಂಬಂಧವನ್ನ ಗಟ್ಟಿ ಮಾಡಿಕೊಳ್ಳಲು ಮುಂದಾಗಿದ್ದಾರೆ. id='are-slot-2' class='oiad oi-axt oiadv'>












Click it and Unblock the Notifications