Donald Trump: ಗಾಜಾ ಯುದ್ಧಕ್ಕೆ ಕೊನೆಗೂ ಬಿತ್ತು ಬ್ರೇಕ್, 60 ದಿನಗಳ ಕದನ ವಿರಾಮ!

ಜಗತ್ತಿನ ನೆಮ್ಮದಿ ಕೆಡಿಸಿದ್ದ ಮತ್ತೊಂದು ಯುದ್ಧ ನಿಂತು ಹೋಗುವ ಲಕ್ಷಣ ಕಾಣಿಸುತ್ತಿದೆ, ಅತ್ತ ಮಧ್ಯಪ್ರಾಚ್ಯ ಸೇರಿದಂತೆ ಇಡೀ ಜಗತ್ತು ನಲುಗಿ ಹೋಗುವಂತೆ ಮಾಡಿದ್ದ ಗಾಜಾ ಮತ್ತು ಇಸ್ರೇಲ್ ವಾರ್ ದೊಡ್ಡ ಬ್ರೇಕ್ ಪಡೆದುಕೊಂಡಿದೆ. 2023 ಅಕ್ಟೋಬರ್ 7 ಶನಿವಾರ ಶುರುವಾಗಿದ್ದ ಗಾಜಾ ಮತ್ತು ಇಸ್ರೇಲ್ ಯುದ್ಧಕ್ಕೆ 60 ದಿನಗಳ ಬ್ರೇಕ್ ಹಾಕಲು ಇದೀಗ ಇಸ್ರೇಲ್ ಒಪ್ಪಿಗೆ ಸೂಚಿಸಿದೆ. ಈ ವಿಚಾರವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ.

ಅಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ರಾಕೆಟ್ & ಗನ್ ಮೂಲಕ ದಾಳಿ ಮಾಡಿ ಹಲವರ ಸಾವಿಗೆ ಕಾರಣರಾಗಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು. ನಂತರ ತಕ್ಷಣ ಎಚ್ಚೆತ್ತುಕೊಂಡ ಇಸ್ರೇಲ್ ಸೇನೆ, ಗಾಜಾ ಪಟ್ಟಿಗೆ ನುಗ್ಗಿತ್ತು. ಹೀಗೆ ಗಾಜಾದಲ್ಲಿ ಭಾರಿ ದೊಡ್ಡ ಪ್ರಮಾಣದ ದಾಳಿಯನ್ನ ಕೂಡ ನಡೆಸಿತ್ತು. ಹೀಗೆ ಇಬ್ಬರ ನಡುವೆ ಯುದ್ಧ ಶುರುವಾಗಿ 2 ವರ್ಷ ತುಂಬುವ ಹಂತಕ್ಕೆ ಬಂದು ನಿಂತಿತ್ತು, ಆದರೆ ಈಗ ದಿಢೀರ್ ಯುದ್ಧ ನಿಲ್ಲಿಸಿ ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ಇಸ್ರೇಲ್ ಮುಂದಾಗಿದೆ.

Trump Says That Israel Is Agrees To 60-Day Gaza Ceasefire Conditions

ಗಾಜಾ ಪಟ್ಟಿಯಲ್ಲಿ ಕದನ ವಿರಾಮ

ಹೌದು, ಗಾಜಾದಲ್ಲಿ 60 ದಿನಗಳ ಕದನ ವಿರಾಮ ಜಾರಿಗೆ ಅಗತ್ಯ ಇರುವ ಷರತ್ತುಗಳಿಗೆ ಇದೀಗ ಇಸ್ರೇಲ್ ಒಪ್ಪಿಕೊಂಡಿದೆ ಅಂತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಹಾಗೇ ಇದೇ ಸಮಯದಲ್ಲೇ, ಹಮಾಸ್‌ಗೆ ಕೂಡ ಎಚ್ಚರಿಕೆ ಸಂದೇಶ ರವಾನೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಗುಡುಗಿದ್ದಾರೆ. ಅಕಸ್ಮಾತ್ ಕದನ ವಿರಾಮ ಒಪ್ಪಂದ ತಿರಸ್ಕಾರ ಮಾಡಿದರೆ ಹಮಾಸ್ ವಿರುದ್ಧ ಇನ್ನಷ್ಟು ಘೋರವಾದ ಕ್ರಮ ಕೈಗೊಳ್ಳುವ ವಾರ್ನಿಂಗ್ ಕೊಟ್ಟಿದ್ದಾರೆ. ಕತಾರ್ ಮತ್ತು ಈಜಿಪ್ಟ್ ಗಾಜಾ ಕದನ ವಿರಾಮ ವಿಚಾರದಲ್ಲಿ ದೊಡ್ಡ ಪಾತ್ರ ವಹಿಸಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+