ಟ್ರಂಪ್ ಗೆ ಸಖತ್ತಾಗಿ 'ಕೈಕೊಟ್ಟ' ಪೋಲಂಡ್ ಫಸ್ಟ್ ಲೇಡಿ!
ವಾರ್ಸಾವ್(ಪೋಲೆಂಡ್), ಜುಲೈ 8: ಸದಾ ಒಂದಿಲ್ಲೊಂದು ವಿವಾದಿಂದಲೋ, ಹಾಸ್ಯದಿಂದಲೋ, ಅಪಹಾಸ್ಯದಿಂದಲೋ ಸುದ್ದಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ. ಟ್ರಂಪ್ ಕಾಲೆಳೆಯಲು ತುದಿಗಾಲಿನಲ್ಲಿ ನಿಲ್ಲುವ ಸಾಮಾಜಿಕ ಜಾಲತಾಣಗಳಿಗಂತೂ ಭೂರೀ ಭೋಜನ ಸಿಕ್ಕಂತಾಗಿದೆ!
ಪೊಲೆಂಡ್ ಪ್ರವಾಸದಲ್ಲಿರುವ ಡೊನಾಲ್ಡ್ ಟ್ರಂಪ್ ಗೆ ಪೊಲೆಂಡ್ ಅಧ್ಯಕ್ಷ ಅಂಡ್ರ್ಜೆಜ್ ಡುಡಾ ಅವರ ಪತ್ನಿ ಅಗತಾ ಕೊರ್ನೌಸರ್ ಸಖತ್ತಾಗಿ 'ಕೈಕೊಟ್ಟ' ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೆಂಡ್ ಪ್ರವಾಸದಲ್ಲಿರುವ ಡೊನಾಲ್ಡ್ ಟ್ರಂಪ್ ಮತ್ತವರ ಪತ್ನಿ ಮೆಲಿನಿಯಾ ಟ್ರಂಪ್ ಅವರನ್ನು ಪೊಲೆಂಡ್ ಅಧ್ಯಕ್ಷ ಅಂಡ್ರ್ಜೆಜ್ ಡುಡಾ ಮತ್ತು ಅವರ ಪತ್ನಿ, ಫಸ್ಟ್ ಲೇಡಿ ಅಗತಾ ಕೊರ್ನೌಸರ್ ಹಾರ್ದಿಕವಾಗಿ ಸ್ವಾಗತಿಸಿದರು.
ಆದರೆ ಅಂಡ್ರ್ಜೆಜ್ ಗೆ ಹಸ್ತಲಾಘವ ಮಾಡಿದ ಟ್ರಂಪ್, ಅಗತಾ ಅವರಿಗೆ ಹಸ್ತಲಾಘವ ಮಾಡಲು ಮುಂದಾಗುತ್ತಿದ್ದಂತೆಯೇ, ಅಗತಾ ಟ್ರಂಫ್ ಅವರನ್ನು ದಾಟಿ ಅವರ ಪಕ್ಕದಲ್ಲಿದ್ದ ಮಿಲಿನಿಯಾ ಟ್ರಂಪ್ ಅವರ ಕೈಕುಲುಕಿಬಿಟ್ಟರು! ಇತ್ತ ಕೈ ಮುಂದೆ ಚಾಚಿಕೊಂಡಿದ್ದ ಟ್ರಂಪ್ ಮುಖ ಸಣ್ಣಗೆ ಮಾಡಿಕೊಂಡು ನೋಡುತ್ತಿದ್ದ ದೃಶ್ಯ ಸಖತ್ ವೈರಲ್ ಆಗಿದೆ.
ಅಗತಾ ಆಮೇಲೆ ಟ್ರಂಪ್ ಅವರಿಗೂ ಹಸ್ತಲಾಘವ ಮಾಡಿದರು ಅನ್ನೋದು ಬೇರೆ ಮಾತು. ಆದರೆ ಟ್ರಂಪ್ ಕೈಚಾಚಿದರೂ ಕ್ಯಾರೇ ಅನ್ನದೆ ಮಿಲಿನಿಯಾ ಅವರ ಕೈಕುಲುಕಿದ ಅಗತಾ ನಡೆ ಬಗ್ಗೆ ಚರ್ಚೆ ಎದ್ದಿರುವುದಂತೂ ಸತ್ಯ.
|
ಎಲ್ಲೆಲ್ಲೂ ವ್ಯಂಗ್ಯ-ಅಪಹಾಸ್ಯ!
ಡೊನಾಲಗ್ಡ್ ಟ್ರಂಪ್ ಅವರ ಪೊಲಾಂಡ್ ಪ್ರವಾಸ ಚೆನ್ನಾಗಿ ಆಗುತ್ತಿದೆ ಎಂದು ಆಂಡಿ ಹಾ ಎನ್ನುವವರು ಹಾಸ್ಯ ಮಿಶ್ರಿತ ವ್ಯಂಗ್ಯದಲ್ಲಿ ಟ್ವೀಟ್ ಮಾಡಿದ್ದಾರೆ!
|
ವಿಫಲ ಹಸ್ತಲಾಘವ!
ಡೊನಾಲ್ಡ್ ಟ್ರಂಪ್ ಅವರ ವಿಫಲ ಹಸ್ತಲಾಘವದ ದೃಶ್ಯ ಈಗಾಗಲೇ ಎಲ್ಲೆಡೆ ಹರಿದಾಡುತ್ತಿರುವುದನ್ನು ಕಂಡು ಸಂತಸವಾಗುತ್ತಿದೆ ಎಂದೊಬ್ಬರು ಟ್ವೀಟ್ ಮಾಡಿದ್ದಾರೆ!
|
ಇಂಥ ಸುದ್ದಿಗಳಿಗೆ ಮಣೆ ಹಾಕಬೇಡಿ
ನನ್ನ ಪತ್ನಿ ಟ್ರಂಪ್ ಅವರಿಗೆ ಹಸ್ತಲಾಘವ ಮಾಡಿಲ್ಲ ಎಂದಜು ಹಲವೆಡೆ ಸುಳ್ಳು ಸುದ್ದಿಯಾಗುತ್ತಿದೆ. ಇದನ್ನು ಕೇಳಿ ಆಶ್ಚರ್ಯವಾಯಿತು. ಇಂಥ ಅಪೂರ್ವ ಭೇಟಿಯ ಸಮಯದ ಕುರಿತು ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಹೋರಾಡಬೇಕಿದೆ ಎಂದು ಸ್ವತಃ ಪೊಲೆಂಡ್ ಅಧ್ಯಕ್ಷ ಅಂಡ್ರ್ಜೆಜ್ ಡುಡಾ ಟ್ವೀಟ್ ಮಾಡಿದ್ದಾರೆ.
|
ಪೂರ್ತಿ ವಿಡಿಯೋ ನೋಡಿ ಮೊದಲು!
ಪೊಲಿಶ್ ಫಸ್ಟ್ ಲೇಡಿ ಅಗತಾ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೈಯನ್ನು ಕುಲುಕಿತ್ತಾರೆ. ಮೊದಲು ಪೂರ್ಣ ವಿಡಿಯೋ ನೋಡಿ ಎಂದು ಬೀಟ್ರಿಸ್ ಎಲೆಜಬೆತ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications