ಶತ್ರು ದೇಶಗಳ ಮಹಾ ಸಮಾಗಮ, ಟ್ರಂಪ್ & ಪುಟಿನ್ ಭೇಟಿಗೆ ವೇದಿಕೆ ಸಜ್ಜು!
ಅಮೆರಿಕ ಮಧ್ಯಪ್ರವೇಶ ಮಾಡಿ, ರಷ್ಯಾ & ಉಕ್ರೇನ್ ಯುದ್ಧದ ಬೆಂಕಿಗೆ ನೀರು ಹಾಕೋದಕ್ಕೆ ಸಿದ್ಧವಾಗಿದೆ. ಈ ಯುದ್ಧ ನಿಂತರೆ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಪಡೆಯುವ ಜೊತೆಗೆ, ಶಾಂತಿ ಸ್ಥಾಪನೆ ಉದ್ದೇಶ ಕೂಡ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರಕ್ಕೆ ಇದೆ. ಹೀಗಾಗಿ ರಷ್ಯಾ ತನ್ನ ಶತ್ರು ದೇಶವೇ ಆಗಿದ್ದರೂ ಅಮೆರಿಕದ ಅಧಿಕಾರಿಗಳು ಈಗಾಗಲೇ ಒಂದು ಸುತ್ತಿನ ಮಹತ್ವದ ಸಭೆ ನಡೆಸಿದ್ದಾರೆ. ಇಷ್ಟೆಲ್ಲದರ ನಡುವೆ ಪುಟಿನ್ & ಟ್ರಂಪ್ ಭೇಟಿಗೂ ಸಿದ್ಧತೆ ಈಗ ಸಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಅಬ್ಬರ ಹೇಗಿದೆ ಅಂದ್ರೆ, ಒಂದು ಕಡೆ ತಮ್ಮ ತೆರಿಗೆ ನೀತಿ ಮೂಲಕ ತಲ್ಲಣ ಎಬ್ಬಿಸಿದ್ದಾರೆ. ಇದರ ಜೊತೆಗೆ ಜಾಗತಿಕ ಮಟ್ಟದಲ್ಲೂ ಅಮೆರಿಕದ ಹಿಡಿತ ಇನ್ನಷ್ಟು ಬಿಗಿ ಮಾಡಲು ಹೊಸ ಹೊಸ ಪ್ಲಾನ್ ಮಾಡುತ್ತಿದ್ದಾರೆ. ಅಮೆರಿಕದ ಮೂಲ ಉದ್ದೇಶವಾದ ಹಣ & ಲಾಭಕ್ಕೆ ಮಹತ್ವ ನೀಡಿರುವ ಡೊನಾಲ್ಡ್ ಟ್ರಂಪ್, ಹಲವು ಕ್ರಾಂತಿಕಾರಿ ಬದಲಾವಣೆ ತಂದಿದ್ದು ಅಮೆರಿಕದ ಶತ್ರುಗಳಿಗೆ ಶಾಕ್ ನೀಡಿದ್ದಾರೆ. ಹೀಗಿದ್ದಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಮಹತ್ವದ ಸಭೆ ನಡೆಸಲು ಮುಂದಾಗಿದ್ದಾರೆ ಡೊನಾಲ್ಡ್ ಟ್ರಂಪ್.

ರಷ್ಯಾ & ಅಮೆರಿಕ ಸ್ನೇಹಕ್ಕೆ ಹೊಸ ಹುರುಪು!
2016 ರಲ್ಲಿ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಮಯದಲ್ಲಿ ಪುಟಿನ್ ಜೊತೆಗೆ ಮಾತುಕತೆ ನಡೆಸಿದ್ದರು. ಈ ಮಹತ್ವದ ಭೇಟಿಯ ನಂತರ ಜಗತ್ತಿನಲ್ಲಿ ಅಮೆರಿಕ & ರಷ್ಯಾ ಇನ್ನಷ್ಟು ಹತ್ತಿರವಾಗಿದ್ದವು. ಆದರೆ 2020 ರಲ್ಲಿ ಜೋ ಬೈಡನ್ ಎದುರು ಡೊನಾಲ್ಡ್ ಟ್ರಂಪ್ ಹೀನಾಯ ಸೋಲು ಕಂಡರು. ಹೀಗಿದ್ದಾಗ ಮತ್ತೆ ಅಮೆರಿಕ & ರಷ್ಯಾ ಸಂಬಂಧ ಹಾಳಾಗಿ ಹೋಗಿತ್ತು. ಆದರೆ 2024 ರಲ್ಲಿ ಮತ್ತೆ ಡೊನಾಲ್ಡ್ ಟ್ರಂಪ್ ದೊಡ್ಡ ಗೆಲುವು ಸಾಧಿಸಿದ್ದು, ರಷ್ಯಾ ಜೊತೆಗಿನ ಅಮೆರಿಕದ ಸಂಬಂಧ ಸುಧಾರಿಸಲು ಮುಂದಾಗಿದ್ದಾರೆ.












Click it and Unblock the Notifications