Donald Trump: ಅಕ್ರಮ ವಲಸಿಗರಿಗೆ ಹಣದ ಆಸೆ ತೋರಿಸಿದ ಅಮೆರಿಕ ಅಧ್ಯಕ್ಷರು!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ರಮ ವಲಸಿಗರ ವಿರುದ್ಧ ಸಮರ ಸಾರಿದ್ದು, ಅವರನ್ನ ದೇಶ ಬಿಡಿಸಲೇಬೇಕು ಅಂತಾ ತೊಡೆತಟ್ಟಿ ನಿಂತಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಅಮೆರಿಕದಲ್ಲಿ ಇರುವ ಅಕ್ರಮ ವಲಸಿಗರಿಗೆ ಕಾನೂನಿನ ಭಯ ತೋರಿಸಿದ್ದಾರೆ. ಇಷ್ಟಾದರೂ ಇನ್ನೂ ಕೋಟ್ಯಂತರ ಅಕ್ರಮ ವಲಸಿಗರು ಅಮೆರಿಕದಲ್ಲಿ ಇರುವ ಅನುಮಾನ ಟ್ರಂಪ್‌ಗೆ ಇದೆ. ಹೀಗಾಗಿ ಇದೀಗ ಹೊಸ ಆಫರ್ ಕೊಟ್ಟಿದ್ದು, ಸಂಧಾನದ ಮೂಲಕ ಅವರನ್ನು ಹೊರಗೆ ಕಳುಹಿಸಲು ಸಜ್ಜಾಗಿದ್ದಾರೆ.

ಜಗತ್ತಿನಲ್ಲೇ ಅಮೆರಿಕ ದೊಡ್ಡ ವಲಸಿಗರ ದೇಶ, ಸ್ವತಃ ಈಗ ಇರುವವರು ಕೂಡ ಯುರೋಪ್ ಮೂಲಕ ಶತಮಾನಗಳ ಹಿಂದೆ ಅಂದ್ರೆ ನೂರಾರು ವರ್ಷಗಳ ಹಿಂದೆ ವಲಸೆ ಹೋಗಿದ್ದವರು. ಹೀಗಿದ್ದಾಗ ಆಧುನಿಕ ಕಾಲದಲ್ಲೂ ಅಮೆರಿಕಗೆ ವಲಸೆ ಹೋಗಿ ನೆಲೆಸುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ, ಬಹುತೇಕ ವಿದ್ಯಾವಂತರು ಉತ್ತಮ ಜೀವನದ ಕನಸು ಕಾಣುತ್ತಾ ಹೀಗೆ ಅಮೆರಿಕದ ನೆಲಕ್ಕೆ ಹೋಗಿದ್ದರು. ಆದರೆ ಬಹುತೇಕರು ಕಾನೂನು ಪಾಲನೆ ಮಾಡದೆ ಅಕ್ರಮವಾಗಿ ಅಲ್ಲಿಗೆ ಅಂದ್ರೆ ಅಮೆರಿಕಗೆ ಹೋಗಿದ್ದು, ಅವರನ್ನೇ ಅಕ್ರಮ ವಲಸಿಗರು ಅಂತಾ ಕರೆಯಲಾಗುತ್ತಿದೆ. ಇದೀಗ ಅಮೆರಿಕದ ಅಕ್ರಮ ವಲಸಿಗರನ್ನು ಹೊರಗೆ ಹಾಕಲು ಭರ್ಜರಿ ತಂತ್ರ ಮಾಡಿದ್ದಾರೆ ಡೊನಾಲ್ಡ್ ಟ್ರಂಪ್.

Trump Proposes Financial Incentives for Immigrants to Self-Deport

ದುಡ್ಡಿನ ಆಸೆ ತೋರಿಸಿದ ಟ್ರಂಪ್!

ಹೌದು, ದೊಡ್ಡಣ್ಣ ಅಮೆರಿಕದ ನೆಲದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರಿಗೆ ಈಗ ಭರ್ಜರಿ ಆಫರ್ ಸಿಕ್ಕಿದೆ. ಅಕ್ರಮ ವಲಸಿಗರು ಸ್ವಯಂ ಗಡೀಪಾರು ಆಗಲು ಮುಂದೆ ಬಂದರೆ ಅವರಿಗೆ ಭಾರಿ ಹಣದ ಜೊತೆಗೆ ವಿಮಾನ ಟಿಕೆಟ್ ಕೂಡ ನೀಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಇದೀಗ ಆಫರ್ ನೀಡಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮರುಕ್ಷಣವೇ ಡೊನಾಲ್ಡ್ ಟ್ರಂಪ್ ಅಕ್ರಮ ವಲಸಿಗರನ್ನು ಹೊರಗೆ ಹಾಕುವ ಬಗ್ಗೆ ಮಾತನಾಡಿದ್ದರು. ಅದೇ ಕ್ಷಣವೇ ಕಾರ್ಯ ಆರಂಭಿಸಿ ಅಕ್ರಮ ವಲಸಿಗರನ್ನು ಹೊರ ಹಾಕಲು ಮುಂದಾಗಿದ್ದರು.

ಎಚ್-1 ಬಿ ವೀಸಾ ಇದ್ದರೂ ಸಮಸ್ಯೆ?

ಮತ್ತೊಂದ್ಕಡೆ ಇದೀಗ ಎಚ್-1 ಬಿ ವೀಸಾ ಹೊಂದಿರುವವರಿಗೂ ಈಗ ಆತಂಕ ಶುರುವಾಗಿದ್ದು, ಎಚ್-1 ಬಿ ವೀಸಾ ಪಡೆದಿರುವ ವ್ಯಕ್ತಿ ಕೆಲಸ ಕಳೆದುಕೊಂಡರೆ ನಿರ್ದಿಷ್ಟ ಅವಧಿ ಒಳಗೆ ಅಮೆರಿಕ ಬಿಡಬೇಕಿದೆ. ಅಕಸ್ಮಾತ್ ನಿರ್ದಿಷ್ಟ ಅವಧಿ ಒಳಗೆ ದೇಶ ಬಿಡದಿದ್ದರೆ, ಕ್ರಮ ಎದುರಿಸಬೇಕಾಗುತ್ತೆ ಎಂದು ವಾರ್ನಿಂಗ್ ನೀಡಲಾಗಿದೆ. ಡೊನಾಲ್ಡ್ ಟ್ರಂಪ್ ಸರ್ಕಾರ ಇದೇ ರೀತಿ ಹಲವು ನಿರ್ಧಾರ ಕೈಗೊಂಡು ಅಕ್ರಮ ವಲಸಿಗರ ವಿರುದ್ಧ ಸಮರ ಸಾರಿದೆ. ಇದು ಅಮೆರಿಕದಲ್ಲಿ ಉದ್ಯೋಗ ಹುಡುಕಿಕೊಂಡು ಹೋದವರಿಗೆ ಆತಂಕ ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+