Trump Tariffs: ಚೀನಾ ಆರ್ಥಿಕತೆ ಉಡಾಯಿಸುವ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕ ಆರ್ಥಿಕ ವ್ಯವಸ್ಥೆಗೆ ಬಾಂಬ್ ಇಟ್ಟಿದ್ದಾರೆ. ಆ ಮೂಲಕ ಎಲ್ಲೆಲ್ಲೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಏನು ಮಾಡಬೇಕು ಅನ್ನೋದೇ ತೋಚದ ಸ್ಥಿತಿಯಲ್ಲಿ ಹೂಡಿಕೆದಾರರು ತಮ್ಮ ಹೂಡಿಕೆಯ ಹಣವನ್ನು ವಾಪಸ್ ಪಡೆಯಲು ಹೊರಟಿದ್ದಾರೆ. ಡೊನಾಲ್ಡ್ ಟ್ರಂಪ್ ಮಾಡಿರುವ ಎಡವಟ್ಟಿನ ಪರಿಣಾಮ ಜಗತ್ತಿನ ಬಹುತೇಕ ಎಲ್ಲಾ ಷೇರು ಮಾರುಕಟ್ಟೆಗಳಲ್ಲಿ 100 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಂಪತ್ತು ಕರಗಿ ಹೋಗಿದೆ. ಇಂಥ ಸೂಕ್ಷ್ಮ ಸಮಯದಲ್ಲೇ ಮತ್ತೊಮ್ಮೆ ಚೀನಾ ವಿರುದ್ಧ ಗುಡುಗಿದ್ದಾರೆ ಟ್ರಂಪ್!

ಡೊನಾಲ್ಡ್ ಟ್ರಂಪ್ ಒಬ್ಬ ಉದ್ಯಮಿ, ಹೀಗಾಗಿ ಎಲ್ಲವನ್ನೂ ಲಾಭದ ದೃಷ್ಟಿಯಲ್ಲೇ ಅವರು ನೋಡುತ್ತಾರೆ ಎಂಬ ಆರೋಪ ಇದೆ. ಇದು ಒಂದು ಕಡೆ ಅಮೆರಿಕದ ಆರ್ಥಿಕತೆಗೆ ಸಹಾಯ ಮಾಡಿದರೂ ಭವಿಷ್ಯದ ದೃಷ್ಟಿಯಿಂದ ಇದು ದೊಡ್ಡ ಕಂಟಕ ತರುವ ಸಾಧ್ಯತೆ ಇದೆ ಎಂಬ ಮಾತು ತಜ್ಞರಿಂದ ಕೇಳಿ ಬಂದಿದೆ. ಇನ್ನೊಂದು ಕಡೆ ಚೀನಾ ವಿರುದ್ಧ ಟ್ರಂಪ್ ಅವರು ಅತಿ ಹೆಚ್ಚು ತೆರಿಗೆ ಹೇರಿಕೆ ಮಾಡಿದ ನಂತರ ಸಾಕಷ್ಟು ಆಕ್ರೋಶ ವ್ಯಕ್ತವಾಗಿ, ಚೀನಾ ಕೂಡ ಈ ಮೂಲಕ ಅಮೆರಿಕ ವಿರುದ್ಧ ಶೇಕಡಾ 34ರ ಅನುಪಾತದಲ್ಲಿ ತೆರಿಗೆ ಹಾಕಲು ಮುಂದಾಗಿದೆ. ಹೀಗಿದ್ದಾಗಲೇ ಹೊಸ ಬಾಣ ಬಿಟ್ಟಿದ್ದಾರೆ ಡೊನಾಲ್ಡ್ ಟ್ರಂಪ್.

Trump Proposes 50 Percent Increase on China Tariffs Following Beijing s Retaliation

ಚೀನಾ ವಿರುದ್ಧ ಟ್ರಂಪ್ ತೆರಿಗೆ ಯುದ್ಧ?

ಅಮೆರಿಕ ಬದಕಲು ಈಗ ಚೀನಾ ಅನಿವಾರ್ಯ ಎನ್ನಬಹುದು, ಯಾಕಂದ್ರೆ ಚೀನಾ ಮೂಲಕ ಸಾವಿರಾರು ಬಿಲಿಯಲ್ ಡಾಲರ್ ವ್ಯಾಪಾರ & ವಹಿವಾಟು ನಡೆಸುತ್ತದೆ ಅಮೆರಿಕ. ಚೀನಾದ ಮೂಲಕ ಸರಕು ಬರದೇ ಇದ್ದರೆ ಅಮೆರಿಕಗೆ ದೊಡ್ಡ ಸಮಸ್ಯೆ ಗ್ಯಾರಂಟಿ. ಹೀಗಿದ್ದರೂ ಸದ್ಯ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಭಾರಿ ದೊಡ್ಡ ಮೊತ್ತದ ತೆರಿಗೆಯನ್ನು ಚೀನಾ ವಿರುದ್ಧವೇ ಹೇರಿಕೆ ಮಾಡಿದ್ದರು. ಅದಕ್ಕೆ ಚೀನಾ ಕೂಡ ರಿವೇಂಜ್ ತೆಗೆದುಕೊಳ್ಳಲು ಮುಂದಾಗಿತ್ತು. ಈ ವಿಚಾರ ತಿಳಿದ ಟ್ರಂಪ್ ಮತ್ತೊಂದು ವಾರ್ನಿಂಗ್ ಕೊಟ್ಟಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಇದೀಗ ಗುಡುಗಿರುವಂತೆ ಚೀನಾ ತಕ್ಷಣ ತನ್ನ ಹೆಚ್ಚಿನ ತೆರಿಗೆಯ ನಿರ್ಧಾರ ಬದಲಾವಣೆ ಮಾಡಿಕೊಳ್ಳದೇ ಇದ್ದರೆ, ಮುಂದಿನ ದಿನಗಳಲ್ಲಿ ಚೀನಾ ವಿರುದ್ಧವೇ ಭರ್ಜರಿ ಶೇಕಡಾ 50 ರಷ್ಟು ತೆರಿಗೆ ಹೇರಿಕೆ ಮಾಡುವುದಾಗಿ ಹೇಳಿದ್ದಾರೆ. ಇದು ತಲ್ಲಣವನ್ನೇ ಎಬ್ಬಿಸಿದ್ದು, ಮತ್ತೊಮ್ಮೆ ಜಾಗತಿಕ ಆರ್ಥಿಕತೆ ಬುಡಕ್ಕೆ ಬಿಸಿನೀರು ಸುರಿದಂತೆ ಆಗಿದೆ. ಅಲ್ಲದೆ ಇಬ್ಬರ ನಡುವೆ ಹೀಗೆ ಜಗಳ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವ ಬಗ್ಗೆ ಭಯ ಶುರುವಾಗಿದೆ.

ಅಮೆರಿಕದ ನಾಗರಿಕರಿಗೆ ಹೊಸ ಭಾರ?

ಚೀನಾ ವಿರುದ್ಧ ಅಮೆರಿಕ ಇದೀಗ ಹೇರಿಕೆ ಮಾಡುತ್ತಿರುವ ತೆರಿಗೆ ಮುಂದಿನ ದಿನಗಳಲ್ಲಿ ಅದೇ ದೇಶದ ಅಂದ್ರೆ ಸ್ವತಃ ಅಮೆರಿಕದ ನಾಗರಿಕರಿಗೆ ಹೊರೆಯಾಗುವ ಸಾಧ್ಯತೆ ಇದೆ. ಮತ್ತೊಂದು ಕಡೆ ಅತಿ ಕಡಿಮೆ ವೆಚ್ಚದಲ್ಲಿ ಸರಕುಗಳನ್ನು ರವಾನೆ ಮಾಡುತ್ತಿದ್ದ ಚೀನಾಗೆ ಇದು ಕಷ್ಟವೇ ಆಗಲಿದ್ದು, ಬೆಲೆ ಏರಿಕೆ ಆಗಲಿದೆ. ಆಗ ಪರೋಕ್ಷವಾಗಿ ಅಮೆರಿಕದ ಜನರು ಆ ಹೊರೆಯನ್ನ ಹೊರಬೇಕಾದ ಸ್ಥಿತಿ ಎದುರಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+