Donald Trump: ಹಮಾಸ್ ಬಂಡುಕೋರರಿಗೆ ಡೊನಾಲ್ಡ್ ಟ್ರಂಪ್ ವಾರ್ನಿಂಗ್, ಮತ್ತೊಂದು ಯುದ್ಧ ಶುರು?
ಡೊನಾಲ್ಡ್ ಟ್ರಂಪ್ ಇನ್ನೇನು ಕೆಲವೆ ದಿನದಲ್ಲಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಪವರ್ ಫುಲ್ ಆಗಲಿದ್ದಾರೆ. ಅಮೆರಿಕ ಎಂಬ ಸೂಪರ್ ಪವರ್ ದೇಶದ ಮುಖ್ಯಸ್ಥರಾಗಿ ಇದೇ ಟ್ರಂಪ್ ಎಂಟ್ರಿ ಕೊಡಲು ಕೌಂಟ್‌ಡೌನ್ ಶುರುವಾಗಿದೆ. ಹೀಗೆ ಡೊನಾಲ್ಡ್ ಟ್ರಂಪ್ ಎಂಟ್ರಿಗೆ, ಅಮೆರಿಕದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಅಧಿಕಾರಿಗಳು. ಇಂತಹ ಸಮಯದಲ್ಲೇ, ಸ್ಫೋಟಕ ಹೇಳಿಕೆ ಒಂದು ಟ್ರಂಪ್ ಅವರಿಂದ ಹೊರ ಬಿದ್ದಿದೆ.
ಅಮೆರಿಕ ಯಾವಾಗಲೂ ಇಸ್ರೇಲ್ ಪರವಾಗಿ ನಿಂತಿದೆ, ಸಂಕಷ್ಟ ಬಂದ ಸಮಯದಲ್ಲಿ ಇಸ್ರೇಲ್ ಕೂಡ ಮೊದಲು ಹೋಗುವುದು ಅಮೆರಿಕದ ಎದುರು. ಹೀಗೆ ಅಮೆರಿಕ ನೀಡುವ ಸಹಾಯ & ಸಹಕಾರ ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಸಹಾಯ ಮಾಡುತ್ತಿದೆ. ಹೀಗೆ, ಅಮೆರಿಕ & ಇಸ್ರೇಲ್ ಬಾಂಧವ್ಯ ಗಟ್ಟಿಯಾಗಿ ಇರುವ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಈಗ ಮಹತ್ವದ ಹೇಳಿಕೆ ಒಂದನ್ನ ನೀಡಿದ್ದಾರೆ. ಅಲ್ಲದೆ ಹಮಾಸ್ ಬಂಡುಕೋರರಿಗೆ ಡೊನಾಲ್ಡ್ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದಾರೆ!

ಡೊನಾಲ್ಡ್ ಟ್ರಂಪ್ ವಾರ್ನಿಂಗ್ ಏನು?
ಇಸ್ರೇಲ್ & ಹಮಾಸ್ ನಡುವೆ ಯುದ್ಧ ನಡೆದು ಗಾಜಾ ಪಟ್ಟಿ & ಪ್ಯಾಲೆಸ್ತೀನ್ ಪ್ರದೇಶಗಳು ಈಗ ಸಂಪೂರ್ಣ ನಾಶವಾಗಿ ಹೋಗಿವೆ. ಹೀಗೆ ಯುದ್ಧ ಶುರುವಾಗಲು ಕಾರಣವಾಗಿದ್ದು, ಹಮಾಸ್ ಬಂಡುಕೋರರ ಕೃತ್ಯ ಎಂಬ ಆರೋಪ ಇದೆ. 2023ರ ಅಕ್ಟೋಬರ್ 7 ರಂದು ಇಸ್ರೇಲ್ ಮತ್ತು ಹಾಮಸ್ ನಡುವೆ ಯುದ್ಧ ಶುರುವಾಗಿತ್ತು. ಅಲ್ಲದೆ ಈವರೆಗೂ ಈ ಯುದ್ಧ ಸಾವಿರಾರು ಜನರ ಜೀವ ತೆಗೆದಿದೆ ಎಂಬ ಆರೋಪ ಇದೆ.
ಮೊದಲಿಗೆ ಇಸ್ರೇಲ್ ನೆಲಕ್ಕೆ ನುಗ್ಗಿದ್ದ ಹಮಾಸ್ ಬಂಡುಕೋರರು, ಇಸ್ರೇಲ್ ಮೇಲೆ ದಾಳಿ ಮಾಡಿ ಅಲ್ಲಿಂದ ಇಸ್ರೇಲಿ ಒತ್ತೆಯಾಳುಗಳ ಅಪಹರಣ ಮಾಡಿಕೊಂಡು ಬಂದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈಗಲೂ ಹಲವರು ಇಸ್ರೇಲಿ ಪ್ರಜೆಗಳು & ಅಧಿಕಾರಿಗಳು ಹಮಾಸ್ ಒತ್ತೆಯಾಳು ಆಗಿದ್ದಾರೆ. ಇದೇ ವಿಚಾರವಾಗಿ ಡೊನಾಲ್ಡ್ ಟ್ರಂಪ್ ಅವರು ಇದೀಗ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.
ಉಕ್ರೇನ್ ಅಧ್ಯಕ್ಷನಿಗೆ ಭಯ ಭಯ!
ಇಸ್ರೇಲ್ & ಗಾಜಾ ಯುದ್ಧದಲ್ಲಿ ಇಸ್ರೇಲ್ ಪರವಾಗಿ ನಿಂತಿರುವ ಅಮೆರಿಕ, ರಷ್ಯಾ & ಉಕ್ರೇನ್ ಯುದ್ಧದಲ್ಲಿ ಮಾತ್ರ ಒಗ್ಗಟ್ಟು ಪ್ರದರ್ಶನ ಮಾಡುತ್ತಿಲ್ಲ. ಯಾಕಂದ್ರೆ ಜೋ ಬೈಡನ್ ಅಮೆರಿಕ ಆಡಳಿತ ನಡೆಸುವ ಸಮಯದಲ್ಲೇ ರಷ್ಯಾ & ಉಕ್ರೇನ್ ವಾರ್ ಶುರುವಾಗಿತ್ತು. ಹೀಗಿದ್ದಾಗಲೇ, ಡೊನಾಲ್ಡ್ ಟ್ರಂಪ್ ಅವರು ಈ ಯುದ್ಧವನ್ನು ವಿರೋಧ ಮಾಡುತ್ತಲೇ ಬಂದಿದ್ದಾರೆ.
ಅತ್ತ ಜೋ ಬೈಡನ್ ಇಷ್ಟುದಿನ ಉಕ್ರೇನ್‌ಗೆ ಬೆಂಬಲ ನೀಡಿದ್ದರು. ಆದರೆ ಈಗ ಅವರು ಅಧಿಕಾರ ಬಿಟ್ಟು ಹೋಗುತ್ತಿದ್ದಾರೆ. ಸುಮಾರು 5,00,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಈ ಯುದ್ಧದ ನೆರವಿಗೆ ಅಂತಾ ಉಕ್ರೇನ್‌ಗೆ ನೀಡಲಾಗಿದೆ. ಜೋ ಬೈಡನ್ ಸರ್ಕಾರ ನೀಡಿರುವ ಹಣ ಈಗ ಖಾಲಿ ಆಗಿದ್ದು, ಉಕ್ರೇನ್ ನರಳುತ್ತಿದೆ. ಇದೇ ಸಮಯದಲ್ಲಿ ಜೋ ಬೈಡನ್ ಸರ್ಕಾರವು ಕೂಡ ಜಾಗ ಖಾಲಿ ಮಾಡುತ್ತಿದ್ದು ಟ್ರಂಪ್ ಆಡಳಿತ ಶುರುವಾಗಲಿದೆ. ಇದೇ ಕಾರಣಕ್ಕೆ ಭಯ ಭಯದಲ್ಲೇ ನರಳುತ್ತಿದೆ ಉಕ್ರೇನ್.












Click it and Unblock the Notifications