Ukraine War: ಬೈಡನ್ ವಿರುದ್ಧ ರೊಚ್ಚಿಗೆದ್ದ ಡೊನಾಲ್ಡ್ ಟ್ರಂಪ್- ಉಕ್ರೇನ್ ಯುದ್ಧಕ್ಕೆ ಯಾರು ಹೊಣೆ?
ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಎಷ್ಟೇ ಪ್ರಯತ್ನ ಮಾಡಿದರೂ ಪ್ರಯೋಜನಕ್ಕೆ ಬಂದಿಲ್ಲ, ಒಂದು ಕಡೆ ಕದನ ವಿರಾಮಕ್ಕೆ ಅಮೆರಿಕ ಒದ್ದಾಡುತ್ತಿದ್ದರೆ ಇನ್ನೊಂದು ಕಡೆ ಉಕ್ರೇನ್ ಮತ್ತು ರಷ್ಯಾ ಸೇನೆಗಳು ಒಬ್ಬರ ಮೇಲೆ ಮತ್ತೊಬ್ಬರು ದಾಳಿ ಮಾಡುತ್ತಾ ಪರಿಸ್ಥಿತಿ ಕೈಮೀರುವಂತೆ ಮಾಡಿವೆ. ರಷ್ಯಾ & ಉಕ್ರೇನ್ ಯುದ್ಧ ಭಯಾನಕ ಸ್ವರೂಪ ಪಡೆದಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮತ್ತೊಂದು ಮಹಾಯುದ್ಧ ಪಕ್ಕಾ ಎಂಬ ಆತಂಕ ಆವರಿಸಿದೆ. ಹೀಗಿದ್ದಾಗ ರೊಚ್ಚಿಗೆದ್ದು ಹೇಳಿಕೆ ನೀಡಿರುವ ಡೊನಾಲ್ಡ್ ಟ್ರಂಪ್, ಅಮೆರಿಕದ ಮಾಜಿ ಅಧ್ಯಕ್ಷ ಬೈಡನ್ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?
ಒಂದೇ ಒಂದು ಸಣ್ಣ ಗಲಾಟೆ, ಅದೇ ಸಣ್ಣ ಗಲಾಟೆ ದೊಡ್ಡ ಯುದ್ಧವಾಗಿ ಪರಿವರ್ತನೆಯನ್ನು ಕಂಡಿತ್ತು. ಅದೆಷ್ಟು ಹೇಳಿದರೂ ನಮ್ಮ ಮಾತು ಕೇಳುತ್ತಿಲ್ಲ ಅಂತಾ ರೊಚ್ಚಿಗೆದ್ದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಘೋರ ಯುದ್ಧ ಸಾರಿದ್ದರು. ಹೀಗೆ ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾಗಿ ಬರೋಬ್ಬರಿ 3 ವರ್ಷ ಕಳೆದು 4ನೇ ವರ್ಷಕ್ಕೆ ಈಗ ಎಂಟ್ರಿ ಕೊಟ್ಟಿದೆ. ಇಂತಹ ಸಮಯದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಜೋ ಬೈಡನ್ ವಿರುದ್ಧ ಟ್ರಂಪ್ ಕೆಂಡ!
ಹೌದು, ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ವಿರುದ್ಧ ಕೆಂಡಕಾರಿದ್ದಾರೆ. ಅನ್ಯಾಯವಾಗಿ ರಷ್ಯಾ & ಉಕ್ರೇನ್ ಯುದ್ಧ ಶುರು ಆಗಲು ನೀವೇ ಕಾರಣ ಅಂತಾ ಗುಡುಗಿದ್ದಾರೆ ಡೊನಾಲ್ಡ್ ಟ್ರಂಪ್. ಈ ಮೂಲಕ ಉಕ್ರೇನ್ ಅಧ್ಯಕ್ಷನಿಗೂ ಚಳಿ ಬಿಡಿಸಿರುವ ಡೊನಾಲ್ಡ್ ಟ್ರಂಪ್, ಈಗ ಆಗಿರುವ ಎಲ್ಲಾ ಅವಾಂತರಕ್ಕೂ ನೀವಿಬ್ಬರೂ ಪ್ರಮುಖ ಕಾರಣ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.
ಅಲ್ಲದೆ ನಾನು ಯುದ್ಧ ನಿಲ್ಲಿಸೋಕೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ. ಹೀಗಿದ್ದರೂ ಯುದ್ಧ ನಿಲ್ಲಿಸಲು ಸರಿಯಾಗಿರುವ ವಾತಾವರಣ ಸೃಷ್ಟಿಯಾಗುತ್ತಿಲ್ಲ. ಪರಿಸ್ಥಿತಿ ಇಷ್ಟು ಕೈಮೀರಿ ಹೋಗಲು ಜೋ ಬೈಡನ್ ಮತ್ತು ಝೆಲೆನ್ಸ್ಕಿ ಕಾರಣ ಎಂದು ಆರೋಪಿಸಿದ್ದಾರೆ ಟ್ರಂಪ್. ಇದೇ ವೇಳೆ ರಷ್ಯಾ ಅಧ್ಯಕ್ಷ ಪುಟಿನ್ ಹೆಸರು ಕೂಡ ಪ್ರಸ್ತಾಪಿಸಿದ್ದಾರೆ. ಈ ಮೂಲಕ ಟ್ರಂಪ್ ಅವರ ಹೇಳಿಕೆ ಉಕ್ರೇನ್ ಎದೆಯಲ್ಲಿ ಇನ್ನಷ್ಟು ಭಯ ಮೂಡಿಸಿದೆ. ರಷ್ಯಾ ಮೊನ್ನೆಯಷ್ಟೇ ಭೀಕರ ದಾಳಿ ನಡೆಸಿ, ಉಕ್ರೇನ್ ಸೇನೆಗೆ ಆಘಾತ ನೀಡಿತ್ತು.












Click it and Unblock the Notifications