Donald Trump: ಪ್ರಮಾಣ ವಚನದ ಬಳಿಕ ವಲಸಿಗರಿಗೆ ಬಿಗ್ ಶಾಕ್ ಕೊಟ್ಟ ಡೊನಾಲ್ಡ್ ಟ್ರಂಪ್‌

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜಗತ್ತಿನ ಪ್ರಮುಖ ನಾಯಕರು, ಉದ್ಯಮಿಗಳ ಎದುರಲ್ಲಿ ಟ್ರಂಪ್ ಪ್ರಮಾಣವಚನ ಸ್ವೀಕರಿಸಿದ್ದು ಅಮೆರಿಕವನ್ನು ಮತ್ತೆ ಗ್ರೇಟ್‌ ಮಾಡುತ್ತೇನೆ ಎಂದು ಶಪಥ ಮಾಡಿದ್ದಾರೆ. ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಮೊದಲು ವಲಸಿಗರಿಗೆ ದೊಡ್ಡ ಆಘಾತ ನೀಡಿದ್ದಾರೆ.

ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿಗೆ ಅಮೆರಿಕಗೆ ಕಾನೂನುಬದ್ದ ಪ್ರವೇಶವನ್ನು ಸುಲಭವಾಗಿದ್ದ ಸಿಬಿಪಿ ಒನ್‌ (DBP One) ಅಪ್ಲಿಕೇಶನ್ ಬಳಕೆಯನ್ನು ನಿಲ್ಲಿಸಿದ್ದಾರೆ. ಇದರಿಂದ ವಲಸಿಗರು ಇನ್ನು ಮುಂದೆ ಸುಲಭವಾಗಿ ಅಮೆರಿಕ ಪ್ರವೇಶಿಸುವುದು ಸಾಧ್ಯವಿಲ್ಲ.

Trump ends cbp one app migrant legal entry

ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ (CBP) ವೆಬ್‌ಸೈಟ್‌ನಲ್ಲಿ ಈ ಸೂಚನೆಯನ್ನು ಪೋಸ್ಟ್ ಮಾಡಲಾಗಿದೆ. ಎಂಟು ನೈಋತ್ಯ ಗಡಿ ಬಂದರುಗಳ್ಲಿ ವಲಸಿಗರಿಗೆ ಅಪಾಯಿಂಟ್‌ನೆಂಟ್‌ಗಳನ್ನು ನಿಗದಿಪಡಿಸಲು ಈ ಅಪ್ಲಿಕೇಶನ್ ಅವಕಾಶ ಮಾಡಿಕೊಡುತ್ತಿತ್ತು, ಈಗ ಅದನ್ನು ರದ್ದು ಮಾಡಲಾಗಿದ್ದು ಇನ್ನು ಮುಂದೆ ಬಳಕೆಗೆ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ.

ವಲಸಿಗರಿಗೆ ಕಡಿವಾಣ

ಟ್ರಂಪ್ ತಮ್ಮ ಚುನಾವಣಾ ಪ್ರಚಾರದಲ್ಲಿ ನೀಡಿದ್ದ ಭರವಸೆಯನ್ನು ಅಧಿಕಾರ ವಹಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಈಡೇರಿಸಿದ್ದಾರೆ. ವಲಸಿಗರು ಯುಎಸ್-ಮೆಕ್ಸಿಕೋ ಗಡಿಗೆ ಹೋಗಲು ಈ ಅಪ್ಲಿಕೇಶನ್‌ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಪ್ರತಿ ದಿನ 1,450 ಜನರಿಗೆ ಅಪ್ಲಿಕೇಶನ್ ಮೂಲಕ ಅಪಾಯಿಂಟ್‌ಮೆಂಟ್ ನಿಗದಿಪಡಿಸಲಾಗುತ್ತಿತ್ತು. ಈ ಅಪ್ಲಿಕೇಶನ್ ಭಾರಿ ಜನಪ್ರಿಯತೆ ಗಳಿಸಿತ್ತು. ವಲಸಿಗರಿಗೆ ಪೆರೋಲ್ ಅಡಿಯಲ್ಲಿ ಪ್ರವೇಶ ನೀಡಲಾಗುತ್ತಿತ್ತು.

ಸವಾಲುಗಳನ್ನು ಎದುರಿಸಿ ಗೆದ್ದ ಟ್ರಂಪ್

ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗುವ ಹಾದಿ ಸುಲಭವಾಗಿರಲಿಲ್ಲ. ಅವರ ವಿರುದ್ಧ ಹಲವು ಕ್ರಿಮಿನಲ್ ಆರೋಪಗಳಿದ್ದವು, ಎರಡು ಬಾರಿ ಅವರ ಮೇಲೆ ಹತ್ಯೆಯ ಪ್ರಯತ್ನ ನಡೆದಿದ್ದು ಒಮ್ಮೆ ಗುಂಡು ಅವರ ಕಿವಿಯನ್ನು ಸವರಿ ಹೋಗಿತ್ತು. ಎಲ್ಲ ಸವಾಲುಗಳ ನಡುವೆಯೂ ಅಮೆರಿಕದಾದ್ಯಂತ ಪ್ರಚಾರ ನಡೆಸಿದ ಅವರು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

ಗಡಿ ಭದ್ರತೆಯನ್ನು ಹೆಚ್ಚಿಸಲು, ಇಂಧನ ಉತ್ಪಾದನೆ ಹೆಚ್ಚಿಸುವುದು ಸೇರಿದಂತೆ ಹಲವು ಕಾರ್ಯನಿರ್ವಾಹಕ ಆದೇಶಗಳನ್ನು ಸಿದ್ದಪಡಿಸಿದ್ದು ಸಹಿ ಹಾಕಲಿದ್ದಾರೆ. ಅಮೆರಿಕದ ಗತ ವೈಭವವನ್ನು ಮರಳಿ ತರುವ ಮಹತ್ವಾಕಾಂಕ್ಷೆ ಹೊಂದಿರುವ ಟ್ರಂಪ್, ಮತ್ತೊಮ್ಮೆ ಅಮೆರಿಕ ಜಗತ್ತಿನ ದೊಡ್ಡಣ್ಣನಂತೆ ಮೆರೆಯಬೇಕು ಎನ್ನುವ ಕನಸು ಕಂಡಿದ್ದಾರೆ.

ಮುಂದಿನ ದಿನಗಳಲ್ಲಿ ವಲಸಿಗರ ವಿಚಾರದಲ್ಲಿ ಟ್ರಂಪ್ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ವಲಸಿಗರನ್ನು ದೇಶದಿಂದ ಹೊರ ಹಾಕುತ್ತೇನೆ ಅವರು ಪ್ರಚಾರದ ವೇಳೆ ಪ್ರತಿಜ್ಞೆ ಮಾಡಿದ್ದು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+