ಪತ್ನಿ ಮೆಲೆನಿಯಾ ರಕ್ಷಣೆಗೆ ನಿಂತ ಡೊನಾಲ್ಡ್ ಟ್ರಂಪ್!
ವಾಷಿಂಗ್ಟನ್, ಜೂನ್ 22: ದಾಂಪತ್ಯ ಅಂದ್ರೆ ಇದೇ ನೋಡಿ, ಪತ್ನಿ ಬೆಂಬಲಕ್ಕೆ ಪತಿ, ಪತಿ ಬೆಂಬಲಕ್ಕೆ ಪತ್ನಿ ನಿಲ್ಲದಿದ್ದರೆ ಹೇಗೆ?! ಈ ಮಾತಿಗೆ ತಾಜಾ ನಿದರ್ಶನವಾಗಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಹೌದು, ಡೊನಾಲ್ಡ್ ಟ್ರಂಪ್ ಪತ್ನಿ ಮೆಲೆನಿಯಾ ಟ್ರಂಪ್ ಧರಿಸಿದ್ದ ಜಾಕೆಟ್ ವಿವಾದದ ಕೇಂದ್ರಬಿಂದುವಾಗಿದ್ದನ್ನು ಅರಿತ ಟ್ರಂಪ್, ಪತ್ನಿಯ ರಕ್ಷಣೆಗೆ ನಿಂತಿದ್ದಾರೆ! 'ಆಕೆ ಆ ಜಾಕೆಟ್ ಮೇಲೆ ಇದ್ದಿದ್ದ ಬರಹವನ್ನು ಮಾಧ್ಯಮಗಳನ್ನು ಗುರಿಯಾಗಿಸಿ ಹೇಳಿದ್ದು. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ' ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಮೆಲೆನಿಯಾ ಧರಿಸಿದ್ದ ಜಾಕೆಟ್ ಮೇಲೆ, "I REALLY DON'T CARE, DO U?"(ನಾನು ನಿಜಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ನೀವು?) ಎಂದು ಬರೆದಿತ್ತು.
“I REALLY DON’T CARE, DO U?” written on the back of Melania’s jacket, refers to the Fake News Media. Melania has learned how dishonest they are, and she truly no longer cares!
— Donald J. Trump (@realDonaldTrump) June 21, 2018
ಅಮೆರಿಕದ ಟೆಕ್ಸಾಸ್ ನಲ್ಲಿರುವ ಪುಟ್ಟ ಮಕ್ಕಳನ್ನು ಬಲವಂತವಾಗಿ ವಲಸಿಗರ ತಾಣಕ್ಕೆ ಕಳಿಸಿದ ಡೊನಾಲ್ಡ್ ಟ್ರಂಪ್ ನಡೆಯೇ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಆದರೆ ಈ ಕೇಮದ್ರಕ್ಕೆ ಭೇಟಿ ನೀಡಲೆಂದು ತೆರಳಿದ್ದ ಮೆಲಿನಿಯಾ ಟ್ರಂಪ್ ಧರಿಸಿದ್ದ ಜಾಕೆಟ್ ಸಹ ವಿವಾದ ಸೃಷ್ಟಿಸಿದೆ. ಇಂಥ ತಾಣಕ್ಕೆ ತೆರಳುವಾಗ, 'I really don't care, do you?' ಜಾಕೆಟ್ ತೊಟ್ಟಿದ್ದರು ಮೆಲಿನಿಯಾ.

"ಈ ಜಾಕೆಟ್ ಮೇಲಿನ ಸಾಲುಗಳು ಫೇಕ್ ಮೀಡಿಯಾಗಳಿಗೆ ಮೆಲಿನಿಯಾ ಹೇಳಿದ್ದು. ಮಾಧ್ಯಮಗಳು ಎಷ್ಟು ಅಪ್ರಾಮಾಣಿಕ ಎಂಬುದು ಮೆಲಿನಿಯಾಗೆ ಗೊತ್ತು. ಆದ್ದರಿಂದಲೇ ಅವರು ಇದ್ಯಾವುದಕ್ಕೂ ಕೇರ್ ಮಾಡುವುದಿಲ್ಲ" ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications