ಎಚ್1ಬಿ ವೀಸಾ ಹೊಸ ನಿಯಮ, ಭಾರತದ ಐಟಿ ಕ್ಷೇತ್ರಕ್ಕೆ ಆಘಾತ!

ವಾಷಿಂಗ್ಟನ್, ಫೆಬ್ರವರಿ 23: 'ಕೌಶಲ್ಯ ಆಧಾರಿತ ವಲಸೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆದೇಶ ನೀಡಿದ್ದು, ಇದರ ಅನ್ವಯ ಹೊಸ ಎಚ್1ಬಿ ನೀತಿ ಜಾರಿಗೆ ತರಲು ಯುಎಸ್ ಆಡಳಿತ ಮುಂದಾಗಿದೆ. ಎಚ್1-ಬಿ ವೀಸಾಗಳ ನೀಡಿಕೆ ವಿಧಾನ ಕಠಿಣವಾಗಲಿದ್ದು, ಭಾರತದ ಐಟಿ ಕ್ಷೇತ್ರಕ್ಕೆ ಆಘಾತಕಾರಿಯಾಗಿದೆ.

ಅಭ್ಯರ್ಥಿಗಳು ಒಳ್ಳೆ ಕೌಶಲ್ಯದ ಜತೆಗೆ ಒಳ್ಳೆ ಟ್ರ್ಯಾಕ್ ರೆಕಾರ್ಡ್ ಇದ್ದರೆ ಮಾತ್ರ ಯುಎಸ್ ಪ್ರವೇಶಿಸಲು ಸಾಧ್ಯ. ಹೊಸ ವೀಸಾ ನೀತಿಯಂತೆ ಒಂದು ಅಥವಾ ಅದಕ್ಕಿಂತ ಹೆಚ್ಚು ತೃತೀಯ ವ್ಯಕ್ತಿಗಳ ಕಾರ್ಯಸ್ಥಳ(third party worksite)ಗಳಿಗೆ ನಿಯೋಜಿಸಲ್ಪಡುವ ಉದ್ಯೋಗಿಗಳಿಗೆ ನೀಡುವ ಎಚ್1-ಬಿ ವೀಸಾ ನೀಡಿಕೆಯಲ್ಲಿ ಕಟ್ಟುನಿಟ್ಟಿನ ವಿಧಾನಗಳನ್ನು ಅನುಸರಿಸಲಾಗಿದೆ.

Trump changes H1B Visa rules, Indian IT companies to be hit

ಹೊಸ ನೀತಿಯಂತೆ, third party worksite ನಲ್ಲಿ ಕಾರ್ಯ ನಿರ್ವಹಿಸುವವರಿಗೆ ನೀಡುವ ವೀಸಾಗಳ ಅವಧಿ 3 ವರ್ಷಗಳ ತನಕ ಇರುತ್ತದೆ. ಆದರೆ, ಇದರ ನವೀಕರಣ ಪ್ರಕ್ರಿಯೆ ಸುಲಭವಾಗಿಲ್ಲ. ಎಚ್1ಬಿ ವೀಸಾಕ್ಕೆ ಅರ್ಜಿ ಸಲ್ಲಿಸುವ ಅವಧಿ ಏಪ್ರಿಲ್ 02ರಿಂದ ಆರಂಭವಾಗುವ ಸಾಧ್ಯತೆಯಿದೆ.

ಅಮೆರಿಕದಲ್ಲಿ ನುರಿತ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರುವ ಸ್ಥಳಗಳಲ್ಲಿ ಭಾರತ ಸೇರಿದಂತೆ ವಿದೇಶಗಳ ನಿಪುಣ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದ ಕಂಪನಿಗಳಿಗೆ ಹೊಸ ನೀತಿಯಿಂದ ಭಾರಿ ಹೊಡೆತ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+