Donald Trump Tariffs: ಡೊನಾಲ್ಡ್ ಟ್ರಂಪ್ ಆಡಳಿತದಿಂದ ಮತ್ತೊಂದು ಮಹಾ ಎಡವಟ್ಟು!

ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಏನೇನೋ ನಡೆದು ಹೋಗುತ್ತಿದೆ, ಸ್ವತಃ ಅಮೆರಿಕನ್ನರಿಗೆ ಕನ್ಫ್ಯೂಷನ್ ಕ್ರಿಯೇಟ್ ಆಗಿದೆ. ಡೊನಾಲ್ಡ್ ಟ್ರಂಪ್ ಆಡಳಿತದ ಎಡವಟ್ಟುಗಳ ಸರದಿ ಈಗ ಮುಂದುವರಿದಿದ್ದು, ಎಡವಟ್ಟಿನಿಂದ ಸೆಂಡ್ ಆಗಿದ್ದ ಇ-ಮೇಲ್ ಉಕ್ರೇನ್‌ನ ಜನರ ಎದೆಯಲ್ಲಿ ಭಾರಿ ಭಯದ ವಾತಾವರಣ ಸೃಷ್ಟಿ ಮಾಡಿತ್ತು. ಹಾಗಾದ್ರೆ ಅಸಲಿಗೆ ಅಮೆರಿಕದಲ್ಲಿ ಆಗಿರುವುದು ಏನು? ಡೊನಾಲ್ಡ್ ಟ್ರಂಪ್ ಸರ್ಕಾರ ಯಾಕೆ ಹಿಂಗೆಲ್ಲಾ ಮಾಡ್ತಿದೆ? ಮಾಹಿತಿ ಇಲ್ಲಿದೆ ಮುಂದೆ ಓದಿ.

ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾದ ನಂತರ ಲಕ್ಷಾಂತರ ಜನರು ಅಮೆರಿಕದಲ್ಲಿ ಆಶ್ರಯ ಪಡೆದಿದ್ದಾರೆ. ಉಕ್ರೇನ್ ದೇಶದಲ್ಲಿ ದೊಡ್ಡ ಸಮಸ್ಯೆ ಎದುರಾದ ಕಾರಣಕ್ಕೆ ಬೈಡನ್ ಸರ್ಕಾರ ಉಕ್ರೇನ್ ಪ್ರಜೆಗಳಿಗೆ ಆಶ್ರಯ ನೀಡಿತ್ತು. ಆದರೆ ಇದೀಗ ಡೊನಾಲ್ಡ್ ಟ್ರಂಪ್ ಆಡಳಿತ ಉಕ್ರೇನ್ ಪ್ರಜೆಗಳ ವಿಚಾರದಲ್ಲೂ ದೊಡ್ಡ ಎಡವಟ್ಟು ಮಾಡಿಕೊಂಡು ಸದ್ದು ಮಾಡುತ್ತಿದೆ. ಹಾಗಾದ್ರೆ ಟ್ರಂಪ್ ಸರ್ಕಾರದ ಅಧಿಕಾರಿಗಳು ಮಾಡಿದ ಎಡವಟ್ಟು ಎಂತಹದ್ದು? ಬನ್ನಿ ಆ ಬಗ್ಗೆ ಮಾಹಿತಿ ತಿಳಿಯೋಣ.

Trump Administration Sends Erroneous Email to Ukrainians Ordering Evacuation

ದೇಶ ಬಿಟ್ಟು ಹೋಗಲು ಸೂಚನೆ!

ಮೊದಲೇ ಹೇಳಿದಂತೆ ಜೋ ಬೈಡನ್ ಸರ್ಕಾರ ಇದ್ದಾಗ ಅಮೆರಿಕದಲ್ಲಿ ಸಾವಿರಾರು ಉಕ್ರೇನ್ ನಿರಾಶ್ರಿತರಿಗೆ ಕಾನೂನು ಬದ್ಧ ಸ್ಥಾನಮಾನ ನೀಡಲಾಗಿತ್ತು. ಈ ಮೂಲಕ, ಅಮೆರಿಕದಲ್ಲಿನ ಉಕ್ರೇನ್ ಮೂಲದ ನಾಗರಿಕರಿಗೆ ಬೆಂಬಲ ಸಿಕ್ಕಿತ್ತು. ಆದರೆ ಇದೀಗ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ದೊಡ್ಡ ಮಿಸ್ಟೇಕ್ ಮಾಡಿಕೊಂಡಿದ್ದು, ಕಾನೂನು ಬದ್ಧವಾಗಿ ನೆಲೆಸಿರುವ ಉಕ್ರೇನ್ ಪ್ರಜೆಗಳಿಗೆ ಕೂಡ ಅಮೆರಿಕ ಬಿಟ್ಟು ಹೋಗುವಂತೆ ಆದೇಶ ನೀಡಲಾಗಿದೆ ಎಂಬ ಆರೋಪವು ಕೇಳಿ ಬಂದಿದೆ. ತಪ್ಪಾಗಿ ಇ-ಮೇಲ್ ಮೂಲಕ ಈ ರೀತಿಯ ಸಂದೇಶ ರವಾನೆ ಆಗಿದ್ದು, ಭಾರಿ ಸಂಚಲನ ಸೃಷ್ಟಿ ಮಾಡಿದೆ.

ಕೆಲವು ದಿನಗಳ ಹಿಂದೆ ಈ ರೀತಿ ಇ-ಮೇಲ್ ಕಳುಹಿಸಿರುವ ಟ್ರಂಪ್ ಆಡಳಿತ, ತಕ್ಷಣ ಅಂದ್ರೆ 7 ದಿನಗಳ ಒಳಗಾಗಿ ಅಮೆರಿಕ ಬಿಟ್ಟು ಹೋಗವಂತೆ ಸೂಚನೆ ನೀಡಿದೆ. ಆದರೆ ಜೋ ಬೈಡನ್ ಸರ್ಕಾರ ಉಕ್ರೇನ್ ಮೂಲದ ನಿರಾಶ್ರಿತರಿಗೆ ಈಗಾಗಲೇ ಕಾನೂನು ಬದ್ಧ ಅಧಿಕಾರ ನೀಡಿತ್ತು. ಇದನ್ನೂ ಲೆಕ್ಕಿಸದೆ ಟ್ರಂಪ್ ಸರ್ಕಾರ ಎಡವಟ್ಟು ಮಾಡಿಕೊಂಡಿದೆ ಎಂದು ಭಾರಿ ಗಂಭೀರ ಆರೋಪ ಕೇಳಿ ಬಂದಿದೆ. ಡೊನಾಲ್ಡ್ ಟ್ರಂಪ್ ಇದನ್ನೂ ನೋಡಿ ನೋಡಿ ಸುಮ್ಮನೆ ಇದ್ದಾರಾ? ಎಂಬ ಪ್ರಶ್ನೆಯನ್ನ ಉಕ್ರೇನ್ ಪ್ರಜೆಗಳು ಕೇಳುತ್ತಿದ್ದಾರೆ.

ಟ್ರಂಪ್ ವಿರೋಧಿ ಹೋರಾಟ ಶುರು!

ಇನ್ನೊಂದು ಕಡೆ ಟ್ರಂಪ್ ಆಡಳಿತದ ಎಡವಟ್ಟುಗಳ ವಿರುದ್ಧ ಅಮೆರಿಕದಲ್ಲಿ ಭಾರಿ ದೊಡ್ಡ ಹೋರಾಟ ಶುರುವಾಗಿದೆ. 2024ರ ಅಮೆರಿಕ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಹೊಸ ಹೊಸ ರೂಲ್ಸ್ ತಂದು ಸಮಸ್ಯೆ ಮಾಡುತ್ತಿದ್ದಾರೆ ಎಂಬ ಆಕ್ರೋಶ ಸ್ಫೋಟಗೊಂಡಿದೆ. ಹೀಗಾಗಿಯೇ ಅಮೆರಿಕದ ಒಟ್ಟು 50 ರಾಜ್ಯಗಳ 1,200 ಸ್ಥಳಗಳಲ್ಲಿ ಭಾರಿ ದೊಡ್ಡ ಹೋರಾಟ ಶುರುವಾಗಿದೆ. ಸುಮಾರು 150ಕ್ಕೂ ಹೆಚ್ಚು ಸಂಘಟನೆಗಳು ಈ ಹೋರಾಟವನ್ನು ಸಂಘಟಿಸಿ ಪ್ರತಿಭಟನೆಯನ್ನ ಶುರು ಮಾಡಿವೆ. ಕಾರ್ಮಿಕ ಸಂಘಟನೆಗಳು, ಎಲ್‌ಜಿಬಿಟಿ ಕಮ್ಯುನಿಟಿ ಸೇರಿದಂತೆ ಮಾನವ ಹಕ್ಕುಗಳ ಸಂಘಟನೆಗಳು ಕೂಡ ಹೋರಾಟ ಶುರು ಮಾಡಿವೆ. ವಕೀಲರ ಸಂಘ, ಚುನಾವಣಾ ಸಂಘಟನೆಗಳು ಕೂಡ ಸಾಥ್ ನೀಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+