Donald Trump: ಮೆಲೋನಿ ಮಾತಿಗೆ ಕರಗಿದ ಡೊನಾಲ್ಡ್ ಟ್ರಂಪ್ ಮನಸ್ಸು- ತೆರಿಗೆ ಮಾತುಕತೆ ಇನ್ನು ಸುಲಭ!
ಡೊನಾಲ್ಡ್ ಟ್ರಂಪ್ ರೀತಿಯ ವಿವಾದಾತ್ಮಕ ಅಧ್ಯಕ್ಷನನ್ನು ಅಮೆರಿಕ ತನ್ನ ಇತಿಹಾಸದಲ್ಲಿಯೇ ಕಂಡಿಲ್ಲ ಎನ್ನಬಹುದು. ಯಾಕಂದ್ರೆ ಪ್ರತಿಯೊಂದು ವಿಚಾರದಲ್ಲಿ ಟ್ರಂಪ್ ವಿವಾದ ಮಾಡಿ ಸಮಸ್ಯೆಗೆ ಸಿಲುಕುತ್ತಾರೆ. ಅದೇ ರೀತಿ ತೆರಿಗೆ ಹೇರಿಕೆ ವಿಚಾರದಲ್ಲೂ ಟ್ರಂಪ್ ಕಿರಿಕ್ ಮಾಡಿ, ಆ ನಂತರ ಜಾಗತಿಕ ಮಟ್ಟದಲ್ಲಿ ದೊಡ್ಡ ಕೋಲಾಹಲ ಸೃಷ್ಟಿ ಮಾಡಿದ್ದರು. ಅದರಲ್ಲೂ, ಶತಮಾನಗಳಿಂದ ಅಮೆರಿಕದ ಜೊತೆಗೇ ವ್ಯಾಪಾರ ನಂಬಿಕೊಂಡು ಬಂದಿರುವ ಯುರೋಪ್ ದೇಶಗಳಿಗೆ ಕೈಕಾಲು ಅಲ್ಲಾಡಿ ಹೋಗಿ ನಡುಕ ಶುರುವಾಗಿತ್ತು!
ಅಮೆರಿಕ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ಕಾರಣಕ್ಕೆ, ತಮ್ಮ ದೇಶಕ್ಕೆ ಬರುವ ಬೇರೆ ಬೇರೆ ದೇಶಗಳ ವಸ್ತುಗಳಿಗೆ ಭಾರಿ ಪ್ರಮಾಣದ ತೆರಿಗೆ ಹಾಕುತ್ತಿರುವುದಾಗಿ ಟ್ರಂಪ್ ಹೇಳಿದ್ದರು. ಈ ರೀತಿ ಭಾರಿ ಪ್ರಮಾಣದ ತೆರಿಗೆ ಹೇರಿಕೆ ಮಾಡುವ ಮೂಲಕ ನಮ್ಮ ಸಮಸ್ಯೆ ಸರಿ ಮಾಡುವ ಪ್ರಯತ್ನ ಇದಾಗಿದೆ ಎಂಬುದು ಟ್ರಂಪ್ ಅವರ ಸಮರ್ಥನೆ ಆಗಿತ್ತು. ಇದೇ ಕಾರಣಕ್ಕೆ ಚೀನಾ ಸೇರಿದಂತೆ ಭಾರತ, ಯುರೋಪ್ ಒಕ್ಕೂಟದ ದೇಶಗಳ ವಿರುದ್ಧವೂ ಭಾರಿ ದೊಡ್ಡ ಮಟ್ಟದ ತೆರಿಗೆ ಹಾಕಿ ಭಯ ಹುಟ್ಟಿಸಿದ್ದರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಹೀಗಿದ್ದಾಗಲೇ ಈ ವಿಚಾರ ಗಂಭೀರವಾಗಿ ಪರಿಗಣಿಸಿದ್ದ ಯುರೋಪ್ ಒಕ್ಕೂಟ ಸಮಸ್ಯೆ ಸರಿ ಮಾಡಲು ಮುಂದೆ ಬಂದಿತ್ತು, ಇದೀಗ ಆ ಪ್ರಯತ್ನದಲ್ಲಿ ಮೊದಲ ಯಶಸ್ಸು ಕಂಡಿದೆ.

ಇಟಲಿ ಪ್ರಧಾನಿ ಮೆಲೋನಿ ಹವಾ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಇಂದು ತೆರಿಗೆ ಯುದ್ಧದ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಸಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು, ಮೊದಲ ಹಂತದಲ್ಲೇ ಯಶಸ್ಸು ಕಂಡಿದ್ದಾರೆ. ಯುರೋಪ್ ಒಕ್ಕೂಟದ ದೇಶಗಳು ಪಾಶ್ಚಿಮಾತ್ಯ ದೇಶಗಳಾಗಿದ್ದು, ಈ ರೀತಿ ಅಮೆರಿಕ ಕೂಡ ಪಾಶ್ಚಿಮಾತ್ಯ ದೇಶವೇ ಆಗಿದೆ. ಅದೇ ಕಾರಣಕ್ಕೆ ನಮ್ಮ ನಡುವೆ ಹೀಗೆ ತೆರಿಗೆ ತಿಕ್ಕಾಟ ಬೇಡ ಎಂಬ ಪ್ರಸ್ತಾಪವನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಟ್ರಂಪ್ ಮುಂದೆ ಇಟ್ಟಿದ್ದಾರೆ.
ಯುರೋಪ್ ಒಕ್ಕೂಟಕ್ಕೆ ತಾತ್ಕಾಲಿಕ ರಿಲೀಫ್?
ಹಾಗೇ ಭವಿಷ್ಯದಲ್ಲಿ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರದಿಂದ, ದೊಡ್ಡ ಸಮಸ್ಯೆ ಆಗಲಿದೆ ಎಂಬುದನ್ನು ಕೂಡ ಮನವರಿಕೆ ಮಾಡಿದ್ದಾರೆ. ಇದರ ಪರಿಣಾಮ, ಟ್ರಂಪ್ ಅವರು ಕೂಡ ಯುರೋಪ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗಲು ಒಪ್ಪಿದ್ದಾರೆ ಎನ್ನುವ ಸುದ್ದಿ ಸಿಕ್ಕಿದೆ. ಇದು ಯುರೋಪ್ ಒಕ್ಕೂಟಕ್ಕೆ ತಾತ್ಕಾಲಿಕ ರಿಲೀಫ್ ನೀಡಿದ್ದರೂ, ಭವಿಷ್ಯದಲ್ಲಿ ಈ ವಿಚಾರ ಯಾವ ರೀತಿಯಾಗಿ ತಿರುವು ಪಡೆಯುತ್ತೋ ಎಂಬ ಟೆನ್ಷನ್ ಪಾಶ್ಚಿಮಾತ್ಯ ದೇಶಗಳಿಗೆ ಇದ್ದೇ ಇದೆ. ಪ್ರಮುಖವಾಗಿ ಚೀನಾ ದೇಶದ ಮೇಲೆ ಟ್ರಂಪ್ ಅವರ ಹೊಸ ತೆರಿಗೆ ನಿಯಮ ವ್ಯತಿರಿಕ್ತ ಪರಿಣಾಮ ಬೀರುವ ಭಯ ಕಾಡುತ್ತಿದೆ.












Click it and Unblock the Notifications