ಚೀನಾ ಚೇತರಿಸಿಕೊಂಡರು ನಿಲ್ಲದ ಸಾವಿನ ಸಂಖ್ಯೆ: 5000 ಗಡಿ ದಾಟಿದ ಕೊರೊನಾ ಬಲಿ

ದೆಹಲಿ, ಮಾರ್ಚ್ 13: ಜಗತ್ತಿನಾದ್ಯಂತ ಸಾವಿನ ಬೇಟೆಯಾಡುತ್ತಿರುವ ಕೊರೊನಾ ವೈರಸ್ ಅಟ್ಟಹಾಸ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ವಿಶ್ವದ 132ಕ್ಕೂ ಅಧಿಕ ದೇಶಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 5 ಸಾವಿರ ಗಡಿದಾಟಿದೆ ಎಂದು ವರದಿಯಾಗಿದೆ.

ಚೀನಾದಿಂದ ಆರಂಭವಾದ ಈ ಕೊರೊನಾ ವೈರಸ್ ಈಗ ಯೋರಪ್, ಏಷ್ಯಾ ರಾಷ್ಟ್ರಗಳಲ್ಲಿ ಮರಣಮೃದಂಗ ಬಾರಿಸುತ್ತಿದೆ. ಭಾರತದಲ್ಲೂ ಕೊರೊನಾ ಕಾಟ ಹೆಚ್ಚಾಗಿದ್ದು, ಹರಡುವಿಕೆ ತಡೆಯಲು ಭಾರಿ ಹರಸಾಹಸ ಪಡುತ್ತಿದ್ದಾರೆ.

ಸದ್ಯಕ್ಕೆ ಚೀನಾದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಚೀನಾವೊಂದರಲ್ಲಿ 3 ಸಾವಿರಕ್ಕೂ ಅಧಿಕ ಸಾವು ಸಂಭವಿಸಿದೆ ಎಂಬ ಮಾಹಿತಿ ಇದ್ದು, ಈಗ ಚೀನಾ ಚೇತರಿಸಿಕೊಳ್ಳುತ್ತಿದೆಯಂತೆ. ಆದರೂ ಸಾವಿನ ಸಂಖ್ಯೆ ಮಾತ್ರ ಹೆಚ್ಚಾಗುತ್ತಿದೆ. ಅಷ್ಟಕ್ಕೂ, ಯಾವ ದೇಶದಲ್ಲಿ ಕೊರೊನಾ ಸೋಂಕಿತರ ಹೆಚ್ಚು ಸಾವನ್ನಪ್ಪಿದ್ದಾರೆ. ಮುಂದೆ ಓದಿ....

ಚೀನಾದಲ್ಲಿ 3177 ಸಾವು

ಚೀನಾದಲ್ಲಿ 3177 ಸಾವು

ವಿಶ್ವದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿರುವುದು ಚೀನಾದಲ್ಲಿ. ಕೊರೊನಾ ವೈರಸ್‌ ಮೊದಲು ಕಾಣಿಸಿಕೊಂಡಿದ್ದು ಚೀನಾದಲ್ಲಿ. ಇದುವರೆಗೂ ಚೀನಾ ದೇಶದಲ್ಲಿ 80,814 ಕೊರೊನಾ ಕೇಸ್‌ ಪತ್ತೆಯಾಗಿದೆ. ಅದರಲ್ಲಿ 3177 ಜನರು ಬಲಿಯಾಗಿದ್ದಾರೆ. 64,151 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಇಟಲಿಯಲ್ಲಿ ನಿಲ್ಲದ ದುರಂತ

ಇಟಲಿಯಲ್ಲಿ ನಿಲ್ಲದ ದುರಂತ

ಚೀನಾ ಬಿಟ್ಟರೆ ಇಟಲಿ ದೇಶದಲ್ಲಿ ಅತಿ ಹಚ್ಚು ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇಟಲಿ ದೇಶದಲ್ಲಿ ವೇಗವಾಗಿ ಸೋಂಕು ಹರಡುತ್ತಿದೆ. ಇದುವರೆಗೂ ಇಟಲಿಯಲ್ಲಿ 15,113 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 1066 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸದ್ಯ ಇಟಲಿ ಸ್ಥಿತಿ ಗಂಭೀರವಾಗಿದ್ದು, ಬೇರೆ ದೇಶಗಳಿಗೂ ಆತಂಕ ಹೆಚ್ಚಿದೆ.

ಇರಾನ್‌ನಲ್ಲೂ ಮಾರಣಹೋಮ

ಇರಾನ್‌ನಲ್ಲೂ ಮಾರಣಹೋಮ

ಇರಾನ್ ದೇಶದಲ್ಲಿ ಕೊರೊನಾ ಪ್ರಕರಣಗಳು 11,364ಕ್ಕೆ ಏರಿದೆ. 514 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಸದ್ಯ ಚೀನಾ, ಇಟಲಿ ಹಾಗೂ ಇರಾನ್‌ನಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾಗಿದ್ದು, ಇಲ್ಲಿದಂಲೇ ಬೇರೆ ದೇಶಗಳಿಗೆ ಹರಡುತ್ತಿದೆ ಎಂಬ ಭೀತಿ ಹುಟ್ಟಿಕೊಂಡಿದೆ.

ಸೌತ್ ಕೊರಿಯಾ, ಸ್ಪೇನ್, ಫ್ರಾನ್ಸ್

ಸೌತ್ ಕೊರಿಯಾ, ಸ್ಪೇನ್, ಫ್ರಾನ್ಸ್

ಸೌತ್ ಕೊರಿಯಾದಲ್ಲಿ 7979 ಪ್ರಕರಣಗಳು (71 ಸಾವು), ಸ್ಪೇನ್ ದೇಶದಲ್ಲಿ 3921 ಕೇಸ್‌ಗಳು (90 ಸಾವು), ಫ್ರಾನ್ಸ್ 2,876 ಕೇಸ್‌ (61 ಸಾವು) ಹಾಗೂ ಜರ್ಮನಿಯಲ್ಲಿ 3116 ಪ್ರಕರಣಗಳು (6 ಸಾವು) ದಾಖಲಾಗಿದೆ.

ಭಾರತದಲ್ಲಿ ಎಷ್ಟು ಪ್ರಕರಣ?

ಭಾರತದಲ್ಲಿ ಎಷ್ಟು ಪ್ರಕರಣ?

ಭಾರತದಲ್ಲಿ ಸುಮಾರು 75ಕ್ಕೂ ಅಧಿಕ ಕೊರೊನಾ ಕೇಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ. ಕರ್ನಾಟಕದಲ್ಲಿ ಇದುವರೆಗೂ 5 ಕೇಸ್ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+