ಟೊರೊಂಟೋದಲ್ಲಿ ಪಾದಚಾರಿಗಳ ಮೇಲೆ ಹರಿದ ವ್ಯಾನ್, 10 ಬಲಿ

ಟೊರೊಂಟೋ, ಏಪ್ರಿಲ್ 24: ಕೆನಡಾದ ಅತೀ ದೊಡ್ಡ ನಗರ ಟೊರೊಂಟೋದಲ್ಲಿ ಪಾದಚಾರಿಗಳ ಮೇಲೆ ವೇಗದಿಂದ ಬಂದು ವ್ಯಾನ್ ಹರಿಸಿದ ಪರಿಣಾಮ 10 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

'ಬೇಕೆಂದೇ ವ್ಯಾನ್ ಹರಿಸಲಾಗಿದೆ. ಇದೊಂದು ಉಗ್ರರ ದಾಳಿಯ ಪ್ರಕರಣ ಇರಬಹುದು' ಎಂದು ಕೆನಡಾದ ಅಧಿಕಾರಿಗಳು ಶಂಕಿಸಿದ್ದಾರೆ.

Toronto:Vehicle incident kills 10 pedestrians

ವಾಹನಗಳನ್ನು ಬಾಡಿಗೆಗೆ ನೀಡುವ ರೈಡರ್ ಸಂಸ್ಥೆಯ ವ್ಯಾನ್ ಇದಾಗಿದ್ದು, ಬಿಳಿ ಬಣ್ಣದ ವ್ಯಾನನ್ನು ಚಾಲಕನೊಬ್ಬ ಪಾದಚಾರಿಗಳ ಮೇಲೆ ಹರಿಸಿದ್ದಾನೆ. ಪಾದಾಚಾರಿಗಳ ಮೇಲೆ ವ್ಯಾನ್ ಹರಿಸಿದ ಸಂದರ್ಭ ವ್ಯಾನ್ ವಿಪರೀತ ವೇಗದಲ್ಲಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ವ್ಯಾನ್ ಹರಿಸಿದ ಚಾಲಕನನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ. ವ್ಯಾನ್ ಹರಿಸುವ ಹಿಂದಿನ ಸಂಚು ಏನು ಎಂಬುದು ವಿಚಾರಣೆ ನಂತರ ತಿಳಿದು ಬರಬೇಕಿದೆ.

ಈ ಹಿಂದೆ ಉಗ್ರರು ಅಮೆರಿಕಾ ಮತ್ತು ಯೂರೋಪ್ ನ ದೇಶಗಳಲ್ಲಿ ಇದೇ ರೀತಿ ಟ್ರಕ್, ವಾಹನಗಳನ್ನು ಹರಿಸಿ ಹಲವರನ್ನು ಕೊಂದಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ ನ್ಯೂಯಾರ್ಕ್ ನಗರದಲ್ಲಿ ಇದೇ ರೀತಿ ಟ್ರಕ್ ಹರಿಸಿ 8 ಜನರನ್ನು ಬಲಿ ಪಡೆಯಲಾಗಿತ್ತು.

ಹೀಗಾಗಿ ಇದೂ ಕೂಡ ಉಗ್ರರದೇ ಕೃತ್ಯ ಇರಬಹುದು ಎಂಬ ಅನುಮಾಗಳು ಎದ್ದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+