ಚಿತ್ರಗಳಲ್ಲಿ: ಈದ್ ಉಲ್ ಅದಾ ಆಚರಣೆ
ಬೆಂಗಳೂರು, ಅ.15: ಮುಸ್ಲಿಂ ಬಾಂಧವರು ಈದ್ ಉಲ್ ಅದಾ ಆಚರಣೆಯಲ್ಲಿ ತೊಡಗಿದ್ದಾರೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಧು ಅಲ್ ಹಿಜ್ಜಾ ತಿಂಗಳಿನ 10ನೇ ದಿನವಾದ ಇಂದು ಹಬ್ಬದ ಆಚರಣೆ ಎಲ್ಲೆಡೆ ನಡೆದಿದೆ.
ದೇಶದ ಹಲವೆಡೆ ಹೊಸ ಬಟ್ಟೆ ತೊಟ್ಟು ಸಂಭ್ರಮಪಡಲಾಗಿದೆ. ಸಂಜೆ ವೇಳೆಗೆ ತಕ್ಬೀರ್ ಓದುವ ಮೂಲಕ ಸಾಂಪ್ರದಾಯಿಕ ನಂಬಿಕೆ ಉಳಿಸಿಕೊಳ್ಳಲಾಗುತ್ತದೆ. ನಂತರ ಸಲಾತ್ ಅಲ್ ಈದ್ ಸಾಮೂಹಿಕ ಪ್ರಾರ್ಥನೆ ಕೈಗೊಳ್ಳಲಾಗುತ್ತದೆ. ಈದ್ ಉಲ್ ಅಝಾ(Id-ul-Azha) ಬಕ್ರೀದ್ ದಿನ(ಅ.15)ದಂದು ಆಪ್ತರು, ಗೆಳೆಯರಲ್ಲದೆ ಎಲ್ಲರೂ ಅರೇಬಿಕ್ ನಲ್ಲಿ 'ಈದ್ ಮುಬಾರಕ್' ಎಂದು ಪರಸ್ಪರ ತಬ್ಬಿಕೊಂಡು ಶುಭ ಹಾರೈಕೆ, ಉಡುಗೊರೆ ವಿನಿಮಯ ಮಾಡಿಕೊಳ್ಳುತ್ತಾರೆ.
ಹಬ್ಬದ ಅಂಗವಾಗಿ ಸಿಹಿ ಪದಾರ್ಥಗಳ ಜತೆಗೆ ಗೋವು, ಕುರಿ, ಮೇಕೆ ಅಥವಾ ಒಂಟೆಗಳ ಖಾದ್ಯ ತಯಾರಿಸಿ ಎಲ್ಲರಿಗೂ ಹಂಚಿ ತಿನ್ನಲಾಗುತ್ತದೆ. ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲ್ಹಾನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್ ಉಲ್ ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ. ಹೆಚ್ಚಿನ ವಿವರ ಇಲ್ಲಿ ಓದಿ...
ಜಮ್ಮು ಮತ್ತು ಕಾಶ್ಮೀರದ ಲಾಲ್ ಚೌಕ್ ಮಾರುಕಟ್ಟೆ ಪ್ರದೇಶದಲ್ಲಿ ಮುಸ್ಲಿಮರು ಸೋಮವಾರ ಭರ್ಜರಿಯಾಗಿ ಶಾಪಿಂಗ್ ಮಾಡಿದ್ದಾರೆ. ಮಂಗಳವಾರ ಬುಧವಾರ ಹಬ್ಬದ ಆಚರಣೆಗೆ ಬೇಕಾದ ಸಾಮಾನು ಸರಂಜಾಮು, ಸಿಹಿ ಪದಾರ್ಥ, ಆಭರಣಗಳ ಖರೀದಿ ನಡೆದಿದೆ.[ಬಕ್ರೀದ್ ಗೆ 7 ನಾನ್ ವೆಜ್ ಸ್ಪೆಷೆಲ್ ಅಡುಗೆ]
ಉಳಿದಂತೆ ಚೆಫ್ ದಿರಿಸಿನಲ್ಲಿ ಒಬಾಮಾ, ಮೈಸೂರಿನ ಅಂಬಾರಿ, ವಿವಿಯನ್ ರಿಚರ್ಡ್ಸ್ ಮಗಳು, ದುರ್ಗಾ ಮಾತೆ ವಿಸರ್ಜನೆ, ಮಧ್ಯಪ್ರದೇಶ ದುರಂತ, ಗುರ್ ಗಾಂವ್ ನ ವಿಶಿಷ್ಟ ಆಚರಣೆ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿವೆ..

ಜಮ್ಮು ಮತ್ತು ಕಾಶ್ಮೀರದಲ್ಲಿ
ಶ್ರೀನಗರದ ಸಿಹಿ ಅಂಗಡಿಯಲ್ಲಿ ಮುಸ್ಲಿಮರಿಂದ ವ್ಯಾಪಾರ ದೃಶ್ಯ

ಈದ್ ಉಲ್ ಅದಾ ಆಚರಣೆ
ಶ್ರೀನಗರ : ಈದ್ ಉಲ್ ಫಿತ್ರ್ ಗೂ ಮುನ್ನ ಮುಸ್ಲಿಂ ಬಾಂಧವರಿಂದ ಈದ್ ಉಲ್ ಅದಾ ಆಚರಣೆಗಾಗಿ ಲಾಲ್ ಚೌಕ್ ಮಾರುಕಟ್ಟೆಯಲ್ಲಿ ವ್ಯಾಪಾರ

ಲಾಲ್ ಚೌಕ್ ಮಾರುಕಟ್ಟೆ
ಶ್ರೀನಗರ : ಲಾಲ್ ಚೌಕ್ ಮಾರುಕಟ್ಟೆಯ ದೃಶ್ಯ PTI Photo By S Irfan

ಸಾಮೂಹಿಕ ಪ್ರಾರ್ಥನೆ
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಈದ್ ಉಲ್ ಫಿತ್ರ್ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. PTI Photo By S Irfan

ವಾಷಿಂಗ್ಟನ್ ನಲ್ಲಿ
ಅಮೆರಿಕಾಧ್ಯಕ್ಷ ಬರಾಕ್ ಒಬಾಮಾ ಅವರು ಮಾರ್ಥಾಸ್ ಟೇಬಲ್ ಗೆ ಭೇಟಿ ನೀಡಿದ್ದರು. ಭೇಟಿ ಸಂದರ್ಭದಲ್ಲಿ ಸರ್ಕಾರದ ಆಡಳಿತ ಯಂತ್ರ ನಿಂತಿರುವುದರ ಬಗ್ಗೆ ಸಾಲದ ಹೊತೆ ಬಗ್ಗೆ ಮಾತನಾಡಿದರು. ಮಾರ್ಥಾಸ್ ಟೇಬಲ್ ಸರ್ಕಾರೇತರ ಸಂಸ್ಥೆಯಾಗಿದ್ದು ಉಚಿತ ಹಾಗೂ ಕಡಿಮೆ ದರದಲ್ಲಿ ಬಡವರಿಗೆ ಆಹಾರ ಒದಗಿಸುತ್ತಾ ಬಂದಿದೆ. ಹೆಚ್ಚಿನ ವಿವರ ಇಲ್ಲಿದೆ.

ಗುರ್ ಗಾಂವ್ ನಲ್ಲಿ
ದುರ್ಗಾ ಪೂಜೆ ಸಂದರ್ಭದಲ್ಲಿ ಸಿಂಧೂರ್ ಖೇಲ ಸಾಂಪ್ರದಾಯಿಕ ವಿಧಿ ವಿಧಾನಗಳಲ್ಲಿ ತೊಡಗಿರುವ ಮಹಿಳೆಯರು

ವಿವಿಯನ್ ರಿಚರ್ಡ್ಸ್ ಮಗಳು
ನವದೆಹಲಿ: ಕ್ರಿಕೆಟ್ ಜಗತ್ತಿನ ಜೀವಂತ ದಂತಕತೆ ವಿವಿಯನ್ ರಿಚರ್ಡ್ಸ್ ಹಾಗೂ ನೀನಾ ಗುಪ್ತಾ ಅವರ ಮಗಳು ಮಸಬಾ ಗುಪ್ತಾ ಅವರು ವೆನ್ ಡೆಲ್ ರಾಡ್ರಿಕ್ಸ್ ವಿನ್ಯಾಸದ ಉಡುಗೆಯಲ್ಲಿ ವಿಲ್ಸ್ ಲೈಫ್ ಸ್ಟೈಲ್ ಇಂಡಿಯಾ ಫ್ಯಾಷನ್ ಶೋನಲ್ಲಿ ಕಂಡು ಬಂದಿದ್ದು ಹೀಗೆ

ಕೋಲ್ಕತ್ತಾದಲ್ಲಿ
ನವರಾತ್ರಿ ಸಂದರ್ಭದ ದುರ್ಗಾಪೂಜೆ ನಂತರ ದುರ್ಗಾ ಮಾತೆ ಮೂರ್ತಿಗಳನ್ನು ನದಿಯಲ್ಲಿ ವಿಸರ್ಜಿಸಲಾಯಿತು.

ಮಧ್ಯಪ್ರದೇಶದ ದುರಂತ
ದೇಗುಲದ ಬಳಿ ಕಾಲ್ತುಳಿತದಿಂದ ಗಾಯಗೊಂಡವರಿಗೆ ಸಾಂತ್ವನ ಹೇಳುತ್ತಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್












Click it and Unblock the Notifications