ಚಿತ್ರಸುದ್ದಿ : ಪಂಚಮಿ ಹಬ್ಬ, ಸರಸ್ವತಿ ಪೂಜೆ, ಚೀನಿ ಡ್ಯಾನ್ಸ್

ಬೆಂಗಳೂರು, ಫೆ.4: ವಸಂತ ಪಂಚಮಿ ದಿನವಾದ ಸೋಮವಾರ ಅಲಹಾಬಾದಿನಲ್ಲಿ ಗಂಗಾ ಮಾತೆಗೆ ಆರತಿ ಬೆಳಗಿ ಭಕ್ತಾದಿಗಳು ಧನ್ಯತೆ ಅನುಭವಿಸಿದ್ದಾರೆ. ಅತ್ತ ಕೋಲ್ಕತ್ತಾದಲ್ಲಿ ಸರಸ್ವತಿ ಪೂಜೆ ಸಂಭ್ರಮ ಮನೆ ಮಾಡಿದೆ. ಪಕ್ಕದ ರಾಷ್ಟ್ರ ಚೀನಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆದಿದ್ದು ಎಲ್ಲದರ ಚಿತ್ರಗಳನ್ನು ಇಲ್ಲಿ ಕಾಣಬಹುದು.

ಅಲಹಾಬಾದಿನಲ್ಲಿ ಮೌನಿ ಅಮಾವಾಸ್ಯೆ ಪವಿತ್ರ ಸ್ನಾನದ ನಂತರ ಮತ್ತೊಮ್ಮೆ ಮಾಘ ಮೇಳದ ಅಂಗವಾಗಿ ಭಕ್ತಾದಿಗಳು ಗಂಗಾ ನದಿ ತಮ್ಮ ಭಕ್ತಿ ಪೂರ್ವಕ ನಮನ ಸಲ್ಲಿಸಿದ್ದಾರೆ. ಸೋಮವಾರ ವಸಂತ ಪಂಚಮಿಯ ಅಂಗವಾಗಿ ವಿಶೇಷ ಪೂಜೆ, ಆರತಿ ಜರುಗಿಸಲಾಗಿದೆ.

ಅತ್ತ ಪಟಿಯಾಲಾದಲ್ಲಿ ಶಾಲಾ ಶಿಕ್ಷಕಿಯರು ಸಾಂಪ್ರದಾಯಿಕ ಹಳದಿ ವಸ್ತಗಳನ್ನು ಧರಿಸಿ ಗಾಳಿಪಟವನ್ನು ಏರಿಸುವ ಮೂಲಕ ಬಸಂತ್ ಪಂಚಮಿ ಆಚರಿಸಿದರು. ಫರಿದಾಬಾದಿನಲ್ಲಿ ಶಾಲಾ ಮಕ್ಕಳು ತಮ್ಮ ಮುಖಕ್ಕೆ ಬಣ್ಣ ಬಳಿದುಕೊಂಡು 28ನೇ ಸೂರಜ್ ಕುಂಡ್ ಅಂತಾರಾಷ್ಟ್ರೀಯ ಕರಕುಶಲ ಮೇಳದಲ್ಲಿ ಪಾಲ್ಗೊಂಡರು.

ಚೀನಿದಲ್ಲಿ ಚಾಂದ್ರಮಾನ ಹೊಸವರ್ಷದ ಸಂಭ್ರಮಕ್ಕಾಗಿ ಬಣ್ಣದ ಲಾಟೀನುಗಳು, ನ್ಯೂ ನೃತ್ಯ ಕಲಾವಿದರ ಪ್ರದರ್ಶನ, ಕೋಲ್ಕತ್ತಾದಲ್ಲಿ ಸರಸ್ವತಿ ಪೂಜೆ ಮುಂತಾದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ಚಿತ್ರಗಳಲ್ಲಿ ಸಂಭ್ರಮ, ಹಬ್ಬ, ಆಚರಣೆ

ಚಿತ್ರಗಳಲ್ಲಿ ಸಂಭ್ರಮ, ಹಬ್ಬ, ಆಚರಣೆ

ಪಟಿಯಾಲಾದಲ್ಲಿ ಶಾಲಾ ಶಿಕ್ಷಕಿಯರು ಸಾಂಪ್ರದಾಯಿಕ ಹಳದಿ ವಸ್ತಗಳನ್ನು ಧರಿಸಿ ಗಾಳಿಪಟವನ್ನು ಏರಿಸುವ ಮೂಲಕ ಬಸಂತ್ ಪಂಚಮಿ ಆಚರಿಸಿದರು.

ಭುವನೇಶ್ವರದಲ್ಲಿ ಶಾಲಾ ಮಕ್ಕಳಿಂದ ಸರಸ್ವತಿ ಪೂಜೆ

ಭುವನೇಶ್ವರದಲ್ಲಿ ಶಾಲಾ ಮಕ್ಕಳಿಂದ ಸರಸ್ವತಿ ಪೂಜೆ

ಭುವನೇಶ್ವರದಲ್ಲಿ ಶಾಲಾ ಮಕ್ಕಳಿಂದ ವಿದ್ಯೆಗೆ ಅಧಿದೇವತೆಯಾದ ಸರಸ್ವತಿಯ ಪೂಜೆ ಸಲ್ಲಿಕೆ

ಚೀನಿ ನ್ಯೂ ನೃತ್ಯ ಕಲಾವಿದರ ಪ್ರದರ್ಶನ

ಚೀನಿ ನ್ಯೂ ನೃತ್ಯ ಕಲಾವಿದರ ಪ್ರದರ್ಶನ

ಕ್ಸಿನೊಹಾ ಚೀನಿ ಚಾಂದ್ರಮಾನ ವರ್ಷಾರಂಭದ ಸಂಭ್ರಮದಲ್ಲಿ ಚೀನಿ ನ್ಯೂ(Nuo) ನೃತ್ಯ ಕಲಾವಿದರ ಪ್ರದರ್ಶನ. ಫೆ.2 ರಿಂದ ಹೊಸ ವರ್ಷದ ಸಂಭ್ರಮ ಜಾರಿಯಲ್ಲಿದೆ. (Xinhua/Sun Chuntao/IANS)

ಮಾಘ ಮೇಳದ ಅಂಗವಾಗಿ ಗಂಗೆ ಪೂಜೆ

ಮಾಘ ಮೇಳದ ಅಂಗವಾಗಿ ಗಂಗೆ ಪೂಜೆ

ಅಲಹಾಬಾದಿನಲ್ಲಿ ಮೌನಿ ಅಮಾವಾಸ್ಯೆ ಪವಿತ್ರ ಸ್ನಾನದ ನಂತರ ಮತ್ತೊಮ್ಮೆ ಮಾಘ ಮೇಳದ ಅಂಗವಾಗಿ ಭಕ್ತಾದಿಗಳು ಗಂಗಾ ನದಿ ತಮ್ಮ ಭಕ್ತಿ ಪೂರ್ವಕ ನಮನ ಸಲ್ಲಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಂದ ಶಿಲ್ಪಾ ಶೆಟ್ಟಿ

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಂದ ಶಿಲ್ಪಾ ಶೆಟ್ಟಿ

ವಾರಣಾಸಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುತ್ತಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

ಕೋಲ್ಕತ್ತಾದಲ್ಲಿ ಸರಸ್ವತಿ ಪೂಜೆ ಸಂಭ್ರಮ

ಕೋಲ್ಕತ್ತಾದಲ್ಲಿ ಸರಸ್ವತಿ ಪೂಜೆ ಸಂಭ್ರಮ

ಕೋಲ್ಕತ್ತಾದಲ್ಲಿ ಸರಸ್ವತಿ ಪೂಜೆ ಸಂಭ್ರಮ ಮನೆ ಮಾಡಿದೆ. ಸರಸ್ವತಿ ವಿಗ್ರಹದ ಜತೆ ವಿದ್ಯಾರ್ಥಿನಿ (ಐಎಎನ್ ಎಸ್)

ಫರಿದಾಬಾದಿನ ರಂಗು ರಂಗಿನ ವಿದ್ಯಾರ್ಥಿನಿಗಳು

ಫರಿದಾಬಾದಿನ ರಂಗು ರಂಗಿನ ವಿದ್ಯಾರ್ಥಿನಿಗಳು

ಫರಿದಾಬಾದಿನಲ್ಲಿ ಶಾಲಾ ಮಕ್ಕಳು ತಮ್ಮ ಮುಖಕ್ಕೆ ಬಣ್ಣ ಬಳಿದುಕೊಂಡು 28ನೇ ಸೂರಜ್ ಕುಂಡ್ ಅಂತಾರಾಷ್ಟ್ರೀಯ ಕರಕುಶಲ ಮೇಳದಲ್ಲಿ ಪಾಲ್ಗೊಂಡರು.

ಚೀನಿದಲ್ಲಿ ಚಾಂದ್ರಮಾನ ಹೊಸವರ್ಷದ ಸಂಭ್ರಮ

ಚೀನಿದಲ್ಲಿ ಚಾಂದ್ರಮಾನ ಹೊಸವರ್ಷದ ಸಂಭ್ರಮ

ಚೀನಿದಲ್ಲಿ ಚಾಂದ್ರಮಾನ ಹೊಸವರ್ಷದ ಸಂಭ್ರಮಕ್ಕಾಗಿ ಬಣ್ಣದ ಲಾಟೀನುಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+