ಚಿತ್ರಗಳಲ್ಲಿ: ಪರಿಸರ ಮಾಲಿನಕ್ಕೆ ಬೆಚ್ಚಿದ ಚೀನಾದ ಸಿಟಿ
ಬೆಂಗಳೂರು, ಅ.22 : ಚೀನಾದ ಈಶಾನ್ಯ ಭಾಗದಲ್ಲಿನ ಅತ್ಯಂತ ದೊಡ್ಡ ನಗರಿಯಾದ ಹರ್ಬಿನ್ ನಲ್ಲಿ ಭಾರಿ ಪ್ರಮಾಣದ ಹೊಗೆ ಮಂಜು ಆವರಿಸಿಕೊಂಡಿದ್ದು, ಇದರಿಂದಾಗಿ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ 1.1 ಕೋಟಿಗೂ ಹೆಚ್ಚಿನ ಜನ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಲೆ, ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಏಕಾಏಕಿ ಕಲ್ಲಿದ್ದಲು ಬಳಕೆ ಹೆಚ್ಚಾಗುವ ಕಾರಣ ಭಾರಿ ಪ್ರಮಾಣದಲ್ಲಿ ಹೊಗೆ ನಗರವನ್ನು ಆವರಿಸಿಕೊಳ್ಳುತ್ತದೆ. ಮಂಜಿನ ಜೊತೆ ಸೇರಿಕೊಳ್ಳುವ ಈ ಹೊಗೆ ವಾತಾವರಣವನ್ನು ಭಾರೀ ಪ್ರಮಾಣದಲ್ಲಿ ಕಲುಷಿತಗೊಳಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.
ಉಳಿದಂತೆ, ಪಶ್ಚಿಮ ಬಂಗಾಳದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಭಾರತೀಯ ರಾಷ್ಟ್ರೀಯ ಸೇನೆ(INA) ಸಂಸ್ಥಾಪನಾ ದಿನಾಚರಣೆ, ಕೇರಳದಲ್ಲಿ ಎತ್ತುಗಳ ರೇಸ್, ಮಾಸ್ಕೋದರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಭಾಷಣ, ಹೈದರಾಬಾದ್, ಚೆನ್ನೈನಲ್ಲಿ ಭರ್ಜರಿ ಮಳೆ, ಜರ್ಮನಿಯಿಂದ ಬಾತುಗಳ ಚಿತ್ರ ಇಲ್ಲಿದೆ ತಪ್ಪದೇ ನೋಡಿ...

ಬೆಚ್ಚಿದ ಚೀನಾದ ಸಿಟಿ
ಚೀನಾದ ಈಶಾನ್ಯ ಭಾಗದಲ್ಲಿನ ಅತ್ಯಂತ ದೊಡ್ಡ ನಗರಿಯಾದ ಹರ್ಬಿನ್ ನಲ್ಲಿ ಭಾರಿ ಪ್ರಮಾಣದ ಹೊಗೆ ಮಂಜು ಆವರಿಸಿಕೊಂಡಿದ್ದು, ಇದರಿಂದಾಗಿ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ 1.1 ಕೋಟಿಗೂ ಹೆಚ್ಚಿನ ಜನ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

INA ಸಂಸ್ಥಾಪನಾ ದಿನಾಚರಣೆ
ಪಶ್ಚಿಮ ಬಂಗಾಳದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಭಾರತೀಯ ರಾಷ್ಟ್ರೀಯ ಸೇನೆ(INA) ಸಂಸ್ಥಾಪನಾ ದಿನವನ್ನು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಆಚರಿಸಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೇತಾಜಿ ಅವರ ಚಿತ್ರಕ್ಕೆ ಪುಷ್ಪ ಅರ್ಪಿಸಿ70ನೇ ಸಂಸ್ಥಪನಾ ದಿನವನ್ನು ಆಚರಿಸಿದರು.

ಕೇರಳದಲ್ಲಿ ಓಟ
ಕೋಳಿಕೊಡ್ ನಲ್ಲಿ ಎತ್ತುಗಳ ಓಟ ಕಾಲಪೂಟು ಸ್ಪರ್ಧೆ ಪುಲ್ಲಲೂರ್ ನಲ್ಲಿ ನಡೆಯಿತು

ಪ್ರಧಾನಿ ಸಿಂಗ್ ಭಾಷಣ
ಮಾಸ್ಕೋ: ಪ್ರಧಾನಿ ಮನಮೋಹನ್ ಸಿಂಗ್ ಅವರು Moscow State Institute of International Relations ನಿಂದ ಗೌರವ ಡಾಕ್ಟರೇಟ್ ಪಡೆದ ನಂತರ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

ಹೈದರಾಬಾದಿನಲ್ಲಿ ಮಳೆ
ಹೈದರಾಬಾದಿನಲ್ಲಿ ಸೋಮವಾರ ಭಾರಿ ಮಳೆ ಸುರಿದಿದ್ದು ರಸ್ತೆಗಳು ಜಲಾವೃತಗೊಂಡಿದೆ.

ಜರ್ಮನಿಯ ಬಾತು
Veckenstedt :ಲಾಂಡಿ ಜಿಎಂಬಿಎಚ್ ಕಂಪನಿಗೆ ಸೇರಿದ ಬಾತುಕೋಳಿಗಳ ಸಂಚಾರ. ಕ್ರಿಸ್ ಮಸ್ ಸಮಯದಲ್ಲಿ ಈ ಬಾತುಗಳಿಗೆ ಭಾರಿ ಬೇಡಿಕೆ ಇದೆ. ವರ್ಷಕ್ಕೆ 8 -10 ಸಾವಿರ ಬಾತುಕೋಳಿಗಳನ್ನು ಸಂಸ್ಥೆ ಮಾರಾಟ ಮಾಡುತ್ತದೆ.

ಚೆನ್ನೈನಲ್ಲಿ ಮಳೆ
ಚೆನ್ನೈ: ಚೆನ್ನೈ ಹೊರವಲಯದಲ್ಲಿ ಸೋಮವಾರ ಭಾರಿ ಮಳೆ ಬಿದ್ದಿದೆ

ಗೌರಿ ಆಭರಣಧಾರಿ
ಕೋಲ್ಕತ್ತಾ : ಚಿನ್ನಾಭರಣ ಕಲೆಕ್ಷನ್ 'ಗೌರಿ' ಧರಿಸಿ ದುರ್ಗಾ ಮಾತೆ ಯಂತೆ ನಡೆದಾಡಿದ ರೂಪದರ್ಶಿ

ಅಮೃತಸರದಲ್ಲಿ ಪಾಕಿಗಳು
ಪಾಕಿಸ್ತಾನದ ಸಿಖ್ ಸಂಸದ ರಮೇಶ್ ಸಿಂಗ್ ಅರೋರಾ ಅವರು ಸೂಫಿ ಸಿಂಗ್ ಹನ್ಸ್ ರಾಜ್ ಹನ್ಸ್ ಜತೆ ಚಿನ್ನದ ದೇಗುಲ ಮುಂದೆ.PTI Photo by Deepak Sharma












Click it and Unblock the Notifications