TikTok Shuts Down: ಅಮೆರಿಕಾದಲ್ಲಿ ಟಿಕ್‌ಟಾಕ್ ಬ್ಯಾನ್; ಮತ್ತೆ ಕಾರ್ಯನಿರ್ವಹಿಸುವುದು ಯಾವಾಗ?
TikTok Shuts Down: ಚೀನಾ ಮೂಲದ ಮೊಬೈಲ್ ಆ್ಯಪ್ ಟಿಕ್ ಟಾಕ್ ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೆಲವು ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಅಮೆರಿಕಾದಲ್ಲೂ ಈ ಅಪ್ಲಿಕೇಷನ್ ಕಾರ್ಯ ನಿಲ್ಲಿಸಲಾಗಿದೆ. ಈ ಮೂಲಕ ಭಾರತದ ಬಳಿಕ ಅಮೆರಿಕಾದಲ್ಲೂ ಟಿಕ್ ಟಾಕ್ ಆ್ಯಪ್ ನಿಷೇಧಿಸಲಾಗಿದೆ. ಹಾಗಾದರೆ ಈ ಬಗ್ಗೆ ಟ್ರಂಪ್ ಕೊಟ್ಟ ಸುಳಿವೇನು ಎಂದು ಇಲ್ಲಿ ತಿಳಿಯಿರಿ.
ಭಾನುವಾರ (ಜನವರಿ 19) ಆ್ಯಪಲ್ ಹಾಗೂ ಗೂಗಲ್ ಪ್ಲೇಸ್ಟೋರ್‌ನಿಂದ ಈ ಆ್ಯಪ್ ಡಿಲೀಟ್ ಮಾಡಲಾಗಿದೆ. ಅಮೆರಿಕಾದಲ್ಲಿ ಸುಮಾರು 170 ಮಿಲಿಯನ್ ಜನರು ಟಿಕ್ ಟಾಕ್ ಆಪ್ ಬಳಕೆ ಮಾಡುತ್ತಿದ್ದರು ಎನ್ನುವ ಮಾಹಿತಿ ಇದೆ. ಆದರೆ ಇದೀಗ ದಿಢೀರ್ ಇದರ ಕಾರ್ಯ ನಿಲ್ಲಿಸಲಾದ ಪರಿಣಾಮ ಈ ಕಂಪನಿಗೆ ತುಂಬಾ ನಷ್ಟ ಆಗಿದೆ ಎಂದರೆ ತಪ್ಪಾಗಲಾರದು.

ಡೊನಾಲ್ಡ್ ಟ್ರಂಪ್ ಅವರು ನಾಳೆ ಅಂದರೆ ಸೋಮವಾರ (ಜನವರಿ 20) ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಳ್ಳಲಿದ್ದು, ನಿಷೇಧಿಸಿದ ಟಿಕ್ ಟಾಕ್ ಆ್ಯಪ್ 90 ದಿನಗಳವರೆಗೆ ಬಳಕೆಗೆ ಸಿಗುವಂತೆ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಭದ್ರತೆಗೆ ಟಿಕ್‌ಟಾಕ್ ಆ್ಯಪ್ ಧಕ್ಕೆಯುಂಟು ಮಾಡುವ ಸಾಧ್ಯತೆಯಿದೆ ಎಂದು ಭದ್ರತಾ ಏಜೆನ್ಸಿ ಹೇಳಿದೆ. ಆದ್ದರಿಂದ ಇದರ ಬಳಕೆಗೆ ನಿಷೇಧ ಹೇರಲಾಗಿದೆ ಎನ್ನಲಾಗುತ್ತಿದೆ.
ಶನಿವಾರ ಅಂದರೆ ಜನವರಿ 18ರ ರಾತ್ರಿ ವೇಳೆಗೆ ಟಿಕ್ ಟಾಕ್ ಆ್ಯಪ್ ತೆರೆದಾಗ ದುರದೃಷ್ಟವಶಾತ್ ಅಮೆರಿಕಾದಲ್ಲಿ ಟಿಕ್ ಟಾಕ್ ಅನ್ನು ನಿಷೇಧಿಸುವ ಕಾನೂನನ್ನು ಜಾರಿಗೊಳಿಸಲಾಗಿದೆ. ಇದರರ್ಥ ನೀವು ಸದ್ಯ ಟಿಕ್ ಟಾಕ್ ಅನ್ನು ಬಳಸಲಾಗುವುದಿಲ್ಲ. ಟಿಕ್ ಟಾಕ್ ಅನ್ನು ಮರುಸ್ಥಾಪಿಸಲು ನಮ್ಮೊಂದಿಗೆ ಕೆಲಸ ಮಾಡುವುದಾಗಿ ಅಧ್ಯಕ್ಷ ಟ್ರಂಪ್ ಸೂಚಿಸಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ನಂತರ ದಯವಿಟ್ಟು ಟ್ಯೂನ್ ಮಾಡಿ ಎನ್ನುವ ಸಂದೇಶ ಬಳಕೆದಾರರಿಗೆ ಕಾಣಿಸಲಿದೆ ಎಂದು ತಿಳಿದುಬಂದಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಡೊನಾಲ್ಡ್ ಟ್ರಂಪ್ ಅವರು ನಾಳೆ 47ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪದಗ್ರಹಣ ಕಾರ್ಯಕ್ರಮವನ್ನ ಕ್ಯಾಪಿಟಲ್ ರೊಟುಂಡ ಕಟ್ಟಡದೊಳಗೆ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಭೀಕರ ಚಳಿಯ ಹಿನ್ನೆಲೆ ಕಟ್ಟಡದೊಳಗೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ.
ಅಲ್ಲಿನ ಸ್ಥಳೀಯ ಕಾಲಮಾನದ ಪ್ರಕಾರ ಸೋಮವಾರ ಬೆಳಗ್ಗೆ 9:30ರಿಂದ ಕಾರ್ಯಕ್ರಮ ಆರಂಭ ಆಗುತ್ತದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications