ಭಾರತಕ್ಕೆ ಭರ್ಜರಿ ಲಾಟರಿ: ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷರಾದರೆ ಭಾರತಕ್ಕೆ ಜಾಕ್‌ಪಾಟ್!
ಭಾರತ ಮತ್ತು ಭಾರತೀಯರು ಜಾಗತಿಕ ಮಟ್ಟದಲ್ಲಿ ದೊಡ್ಡ ದೊಡ್ಡ ಹುದ್ದೆ ಪಡೆದು ತಮ್ಮ ಶಕ್ತಿ ಹಾಗೂ ಸಾಮರ್ಥ್ಯ ತೋರಿಸಿದ್ದಾರೆ. ಅದರಲ್ಲೂ ಒಂದು ಕಾಲದಲ್ಲಿ ನಮ್ಮನ್ನೇ ಆಳಿದ್ದ ಬ್ರಿಟನ್ ದೇಶವನ್ನು ಈಗಾಗಲೇ ಭಾರತ ಮೂಲದ ರಿಷಿ ಸುನಕ್ ಅವರು ಆಳಿದ್ದಾರೆ. ಹೀಗೆ ಭಾರತ ಮೂಲದಿಂದ ಹೋದ ಪ್ರಜೆಗಳು ಜಗತ್ತಿನಲ್ಲಿ ಶಕ್ತಿಶಾಲಿ ಸ್ಥಾನ ಪಡೆದಿದ್ದಾರೆ. ಹೀಗಿದ್ದಾಗ ಭಾರತ ಮೂಲದ ಹೆಣ್ಣು ಮಗಳು ಅಮೆರಿಕದ ಅಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾಗಿ, ಪ್ರಪಂಚದ ಅತ್ಯಂತ ಶಕ್ತಿಶಾಲಿ ಎಂಬ ಹೆಮ್ಮೆ ಪಡೆಯಲು ಕ್ಷಣಗಣನೆ ಆರಂಭ ಆಗಿದೆ. ಹಾಗಿದ್ರೆ ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಭಾರತಕ್ಕೆ ಏನೆಲ್ಲಾ ಲಾಭ ಆಗಲಿದೆ?
ಭಾರತ & ಅಮೆರಿಕ ನಡುವೆ ಸಾಕಷ್ಟು ಗಾಢವಾದ ಸ್ನೇಹ ಸಂಬಂಧ ಇದೆ. ಎರಡೂ ದೇಶ ಪರಸ್ಪರ ವ್ಯಪಾರ ಸಂಬಂಧ ಇಟ್ಟುಕೊಂಡು ಬಂದಿವೆ. ನೂರಾರು ವರ್ಷಗಳಿಂದ ಕೂಡ ಈ ರೀತಿ ಎರಡೂ ದೇಶಗಳ ನಡುವೆ ಸ್ನೇಹ ಇದೆ. ಹೀಗಿದ್ದಾಗ ಭಾರತ ಮೂಲದ ಹೆಣ್ಣು ಮಗಳು ಈಗ ಜಗತ್ತಿನ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರಾಗಲು ಕೆಲವೇ ದಿನಗಳು ಬಾಕಿ ಇವೆ. ಹೀಗೆ, ಅಮೆರಿಕದ ಅಧಿಕಾರ ಹಿಡಿಯಲು ಕಮಲಾ ಹ್ಯಾರಿಸ್ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಇದೇ ಸಮಯದಲ್ಲಿ ಭಾರತೀಯ ಸಮುದಾಯ ಕೂಡ ಕಮಲಾ ಹ್ಯಾರಿಸ್ ಗೆಲುವಿಗೆ ಅಂತಾ ಹಗಲು & ರಾತ್ರಿ ಶ್ರಮ ಹಾಕುತ್ತಿದೆ. ಹಾಗಾದರೆ ಕಮಲಾ ಹ್ಯಾರಿಸ್ ಗೆದ್ದರೆ ಭಾರತಕ್ಕೆ ಎಷ್ಟು ಲಾಭ? ಮುಂದೆ ಓದಿ.

ಭಾರತಕ್ಕೆ ಸಿಗಲಿದೆ ಭಾರಿ ಬೆಂಬಲ!
ಅಮೆರಿಕ ಮೊದಲಿನಿಂದ ಕೂಡ ಭಾರತದ ಜೊತೆಗೆ ವ್ಯವಹಾರ & ವ್ಯಾಪಾರ ಇಟ್ಟುಕೊಂಡು ಬಂದಿದೆ. ಆದರೆ ಈಗ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರೆ, ಮುಂದಿನ ದಿನಗಳಲ್ಲಿ ಭಾರತಕ್ಕೆ ಇದರಿಂದ ಇನ್ನೂ ಹೆಚ್ಚು ಹೆಲ್ಪ್ ಆಗಲಿದೆ. ಅದ್ರಲ್ಲೂ ಪ್ರಮುಖವಾಗಿ ಭಾರತಕ್ಕೆ ಸಿಗ್ತಿರುವ ಲಾಭ ಹೆಚ್ಚಾಗಲಿದೆ. ಸಾಫ್ಟ್‌ವೇರ್ & ಉತ್ಪಾದನೆ ವಲಯಕ್ಕೆ ಹೆಚ್ಚಿನ ಲಾಭ ಸಿಗುವ ನಿರೀಕ್ಷೆ ಇದೆ. ಇದರ ಜತೆ ಅಮೆರಿಕದಲ್ಲಿ ಹೋಗಿ ನೆಲಸಬೇಕು ಮತ್ತು ಬದುಕು ಕಟ್ಟಿಕೊಳ್ಳಬೇಕು ಎಂಬ ಭಾರತದ ಯುವಕರ ಕನಸು ಕೂಡ ಸುಲಭವಾಗಲಿದೆ ಎಂಬ ನಿರೀಕ್ಷೆ ಇದೆ.
'ವೀಸಾ' ವ್ಯವಸ್ಥೆ ಮತ್ತಷ್ಟು ಸುಲಭ?
ಇದಿಷ್ಟೂ ಮಾತ್ರವಲ್ಲದೆ ಅಮೆರಿಕದಲ್ಲಿ ಭಾರತೀಯರು 'ವೀಸಾ' ಪಡೆಯಲು ಕೂಡ ಸುಲಭದ ಮಾರ್ಗಗಳು ಸಿಗುವ ನಿರೀಕ್ಷೆ ಇದೆ. ಇಷ್ಟೆಲ್ಲದರ ನಡುವೆ ಮಿಲಿಟರಿ ಅಂದ್ರೆ ಸೇನಾ ವಿಚಾರ ಕೂಡ ಚರ್ಚೆಗೆ ಬರಲಿದೆ. ಭಾರತಕ್ಕೆ ಅಮೆರಿಕದ ಸೇನೆ ಜೊತೆಗೆ ಸಂಬಂಧ ಮತ್ತಷ್ಟು ತೀರಾ ಹತ್ತಿರ ಕೂಡ ಆಗಲಿದೆ ಎಂಬ ನಿರೀಕ್ಷೆ ದಟ್ಟವಾಗಿದೆ. ಈ ಎಲ್ಲಾ ಕಾರಣಕ್ಕೆ ಇದೀಗ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಅಲ್ಲದೆ ಅಮೆರಿಕದ ಚುನಾವಣಾ ಪೂರ್ವ ಸಮೀಕ್ಷೆಗಳು ಕೂಡ ಕಮಲಾ ಹ್ಯಾರಿಸ್ ಗೆಲ್ಲುತ್ತಾರೆ ಎಂಬ ಮುನ್ಸೂಚನೆ ನೀಡುತ್ತಿವೆ.












Click it and Unblock the Notifications