ಟ್ರಂಪ್ ವಿರುದ್ಧ ಮುಗಿಬಿದ್ದ ಅಮೆರಿಕನ್ನರು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ! Iran And Israel

ಅಮೆರಿಕ ಈಗ ತನ್ನ ಪಟ್ಟ ಉಳಿಸಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸವಾಗಿದ್ದು, ಜಗತ್ತಿನ ದೊಡ್ಡಣ್ಣ ಅನ್ನೋ ಬಿರುದು ಕೂಡ ಬಿದ್ದು ಹೋಗುವ ಹಂತಕ್ಕೆ ಬಂದು ನಿಂತಿದೆ. ಇಂತಹ ಪರಿಸ್ಥಿತಿಯಲ್ಲಿ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿಕೊಳ್ಳುತ್ತಿರುವ ಎಡವಟ್ಟುಗಳು ಮತ್ತಷ್ಟು ಸಂಚಲನ ಸೃಷ್ಟಿಸಿ, ಇಡೀ ಅಮೆರಿಕದ ಮರ್ಯಾದಿ ಕಳೆಯುತ್ತಿರುವ ಗಂಭೀರ ಆರೋಪ ಕೂಡ ಕೇಳಿ ಬಂದಿದೆ. ಇರಾನ್ ಮತ್ತು ಇಸ್ರೇಲ್ ಯುದ್ಧ ನಿಲ್ಲಿಸಿದೆ ಅಂತಾ ಹೇಳಿದ್ದ ಟ್ರಂಪ್ ಬಗ್ಗೆ ಸೋಷಿಯಲ್ ಮೀಡಿಯಾ ಬಳಕೆದಾರರು ಈಗ ಏನು ಹೇಳುತ್ತಿದ್ದಾರೆ ಗೊತ್ತಾ?

ಅಮೆರಿಕ ಜಗತ್ತಿನ ಅತಿ ಶಕ್ತಿಶಾಲಿ ದೇಶವಾಗಿದ್ದು, ಮಿಲಿಟರಿ ವಿಚಾರದಲ್ಲಿ ಅಮೆರಿಕದ ಎದುರು ಯಾವುದೇ ದೇಶವನ್ನೂ ಹೋಲಿಕೆ ಮಾಡಲು ಆಗುವುದಿಲ್ಲ. ಯಾಕಂದ್ರೆ ಅಮೆರಿಕದ ಸೇನೆ ಅಷ್ಟು ಶಕ್ತಿಶಾಲಿ ಆಗಿದ್ದು, ಶತ್ರುಗಳ ಎದೆಯಲ್ಲಿ ಭಯ ಹುಟ್ಟಿಸುತ್ತದೆ. ಹೀಗಿದ್ದರೂ ಸಣ್ಣಪುಟ್ಟ ದೇಶಗಳ ಎದುರು ಇದೇ ಅಮೆರಿಕದ ಸೇನೆ ಸೋತು ಸುಣ್ಣವಾಗಿರುವ ಘಟನೆಗಳು ಕೂಡ ಉದಾಹರಣೆಯಾಗಿ ಕಣ್ಣ ಮುಂದೆ ಇವೆ. ಅದರಲ್ಲೂ ವಿಯೇಟ್ನಾಂ ಯುದ್ಧದಲ್ಲಿ ಅಮೆರಿಕ ಮಣ್ಣುಮುಕ್ಕಿ ಹೋಗಿತ್ತು ಎಂಬ ಆರೋಪದ ಬಗ್ಗೆ ಚರ್ಚೆ ನಡೆಯುವ ಸಮಯದಲ್ಲೇ, ಈಗ ಇರಾನ್ ಎದುರು ಕೂಡ ಹೀಗೆಯೇ ಆಗುತ್ತಿದೆಯಾ?

This Is What Social Media Users Are Saying About Donald Trump Now

ಇರಾನ್ ಎದುರು ಸೋತ ಅಮೆರಿಕ?

ಹೌದು, ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಅಮೆರಿಕದಲ್ಲಿ ಏನೇನೋ ನಡೆಯುತ್ತಿದೆ. ಹೀಗೆ ಅಮೆರಿಕ ತನ್ನ ಮರ್ಯಾದಿ ತಾನೇ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ ಅಂತಾ ಜನ ಆರೋಪವನ್ನ ಮಾಡ್ತಿದ್ದಾರೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ನೀಡುವ ಹೇಳಿಕೆಗಳು ಸುಳ್ಳಾಗಿರುತ್ತವೆ, ಸತ್ಯಕ್ಕೆ ದೂರವಾಗಿ ಇವೆ ಅನ್ನೋ ಆರೋಪಗಳ ನಡುವೆ ಇರಾನ್ & ಇಸ್ರೇಲ್ ಯುದ್ಧ ನಿಲ್ಲಿಸಿದ್ದೇನೆ. ಕದನ ವಿರಾಮ ಘೋಷಣೆ ಆಗಿದೆ ಅಂತೆಲ್ಲಾ ಟ್ರಂಪ್ ಹೇಳಿದ್ದರು. ಇದೇ ಹೇಳಿಕೆ ಇದೀಗ ತಲ್ಲಣ ಎಬ್ಬಿಸಿದೆ.

ಅಮೆರಿಕದ ಮರ್ಯಾದಿ ಕಳೆಯುತ್ತಿರುವ ಟ್ರಂಪ್?

ಅಂದಹಾಗೆ ಡೊನಾಲ್ಡ್ ಟ್ರಂಪ್ ಈಗ ನೀಡಿರುವ ಒಂದೇ ಒಂದು ಹೇಳಿಕೆ ಬಗ್ಗೆ ಭಾರಿ ದೊಡ್ಡ ಚರ್ಚೆಗೂ ವೇದಿಕೆ ಒದಗಿಸಿದೆ. ಅದರಲ್ಲೂ ಇರಾನ್ & ಇಸ್ರೇಲ್ ಯುದ್ಧ ನಿಲ್ಲಿಸಿದ್ದೇನೆ ಕದನ ವಿರಾಮ ಘೋಷಣೆ ಆಗಿದೆ ಅಂತೆಲ್ಲಾ ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡ ನಂತರ ತಕ್ಕ ಉತ್ತರ ನೀಡಿದೆ ಇರಾನ್ ದೇಶ. ನಾವು ಯಾವುದೇ ಕದನ ವಿರಾಮ ಘೋಷಣೆ ಮಾಡಿಲ್ಲ ಯಾವುದೇ ಒಪ್ಪಂದ ಕೂಡ ಆಗಿಲ್ಲ ಅಂತಾ ಹೇಳಿದೆ ಇರಾನ್.

ಹೀಗೆ ಇರಾನ್ ಸ್ಪಷ್ಟನೆ ನೀಡಿದ ನಂತರ ಡೊನಾಲ್ಡ್ ಟ್ರಂಪ್ ಹೇಳಿದ್ದು ಸುಳ್ಳು ಅನ್ನೋ ಆರೋಪ ಕೂಡ ಕೇಳಿ ಬಂದಿದೆ. ಇದೇ ಕಾರಣಕ್ಕೆ ಅಮೆರಿಕದ ಮರ್ಯಾದಿ ಕಳೆಯುತ್ತಿರುವ ಡೊನಾಲ್ಡ್ ಟ್ರಂಪ್? ಅಂತಾನೇ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಹಾಗೇ ಟ್ರಂಪ್ ಈ ರೀತಿಯಾಗಿ ವರ್ತಿಸುತ್ತಿರುವುದು ಭವಿಷ್ಯದಲ್ಲಿ ಕೂಡ ಭಾರಿ ದೊಡ್ಡ ನಷ್ಟ ಉಂಟುಮಾಡುವ ಆತಂಕ ಕೂಡ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+