ಅಮೆರಿಕ ಕೇಳಿ ನಾವು ನಿರ್ಧಾರಗಳನ್ನು ತಗೊಳೋದಿಲ್ಲ: ಅಮೆರಿಕದ ವಿರುದ್ಧವೂ ಗುಡುಗಿದ ಇಸ್ರೇಲ್?
ಇಸ್ರೇಲ್ ರೊಚ್ಚಿಗೆದ್ದಿರುವ ಕಾರಣ ಯಾರ ಮಾತನ್ನೂ ಕೇಳುವಷ್ಟು ಸಹನೆ ಆ ದೇಶ ಇದೀಗ ತೋರಿಸುತ್ತಿಲ್ಲ. ಇದರ ಪರಿಣಾಮ ಈಗ ಮಧ್ಯಪ್ರಾಚ್ಯ ಕೊತ ಕೊತ ಕುದಿಯುತ್ತಿದ್ದು, ಮುಂದೆ ದೊಡ್ಡ ವಿನಾಶದ ಮುನ್ಸೂಚನೆ ಕೂಡ ಕೊಡುತ್ತಿದೆ. ಇದೆಲ್ಲಾ ಬಿಡಿ, ಸ್ವತಃ ಇಸ್ರೇಲ್ ಬೆನ್ನಿಗೆ ನಿಂತು ಸಹಾಯ ಮಾಡಿರುವ ಅಮೆರಿಕದ ಬಗ್ಗೆಯೂ ಈಗ ಇಸ್ರೇಲ್ ಎಂತಹ ಮಾತು ಆಡಿದೆ ಅನ್ನೋದನ್ನ ನೀವು ಕೇಳಲೇಬೇಕು!
ಅಮೆರಿಕ ಇಲ್ಲ ಅಂದ್ರೆ ಇಸ್ರೇಲ್‌ನ ಊಹೆ ಮಾಡಿಕೊಳ್ಳುವುದು ಕೂಡ ಕಷ್ಟ. ಯಾಕೆ ಅಂದ್ರೆ ಇಸ್ರೇಲ್‌ಗೆ ಬೇಕಾಗಿರುವ ಶೇಕಡಾ 70 ರಷ್ಟು ಬಾಂಬ್, ಕ್ಷಿಪಣಿ ಸೇರಿದಂತೆ ಶಸ್ತ್ರಾಸ್ತ್ರಗಳ ರಾಶಿ ಬಂದು ಬೀಳುವುದು ಇದೇ ಅಮೆರಿಕದ ನೆಲದಿಂದ. ಶಸ್ತ್ರಾಸ್ತ್ರ ಮಾತ್ರವಲ್ಲ ಇಸ್ರೇಲ್‌ಗೆ ಇಡೀ ಜಗತ್ತಿನಲ್ಲಿ ಏನೇ ಅಗತ್ಯ ಇದ್ದರೂ ಅದನ್ನು ಮೊದಲು ಕೊಡುವುದು ಅಮೆರಿಕ. ಹೀಗಾಗಿಯೇ ಅಮೆರಿಕ ಇಲ್ಲದೆ ಇಸ್ರೇಲ್ ಇಲ್ಲ ಎಂಬ ಗಾದೆ ಕೂಡ ಇದೆ. ಮತ್ತೊಂದು ಕಡೆ ಯುದ್ಧಗಳು ಶುರುವಾದರೆ ಸ್ವತಃ ಅಮೆರಿಕ ಮುಂದೆ ಬಂದು ಇಸ್ರೇಲ್‌ಗೆ ಸಹಾಯ ಕೂಡ ಮಾಡುತ್ತದೆ. ಈ ಮೂಲಕ ಇಸ್ರೇಲ್ ಬೆನ್ನಿಗೆ ಹಲವು ವರ್ಷಗಳಿಂದ ನಿಂತಿರುವ ಅಮೆರಿಕದ ಬಗ್ಗೆ ಈಗ ಸ್ವತಃ ಇಸ್ರೇಲ್ ಪ್ರಧಾನಿ ಹೇಳಿದ್ದು ಕೇಳಿದ್ರೆ ನೀವು ನಗ್ತೀರ!

ಇರಾನ್‌ಗೆ ಉತ್ತರ ನೀಡುತ್ತಾ ಇಸ್ರೇಲ್?
ಅಂದಹಾಗೆ, ಇರಾನ್ ಸೇನೆ ಇಸ್ರೇಲ್ ವಿರುದ್ಧ 200 ಕ್ಷಿಪಣಿಗಳನ್ನ ಸಿಡಿಸಿತ್ತು. ಈ ರೀತಿಯಾಗಿ ಇಸ್ರೇಲ್ ನಡೆಸಿರುವ ಕೃತ್ಯಕ್ಕೆ ನಮ್ಮಿಂದ ತಕ್ಕ ಉತ್ತರ ನೀಡುತ್ತೇವೆ. ಇರಾನ್‌ಗೆ ಸೂಕ್ತ ಉತ್ತರ ನೀಡಲು ನಾವು ಅಮೆರಿಕದ ಪರ್ಮಿಷನ್ ಕೇಳೋದಿಲ್ಲ. ಇಸ್ರೇಲ್ ದೇಶದ ಹಿತಾಸಕ್ತಿಗೆ ಏನು ಅಗತ್ಯವೋ ಅದನ್ನೇ ನಾವು ನಿರ್ಧಾರ ಮಾಡ್ತೀವಿ ಎಂದಿದ್ದಾರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು.
ಈ ಮೂಲಕ ಅಮೆರಿಕದ ಹಂಗಿನಲ್ಲಿ ನಾವು ಇಲ್ಲ ಎಂಬ ಸಂದೇಶವನ್ನು ಕೂಡ ಇಸ್ರೇಲ್ ಇದೀಗ ರವಾನೆ ಮಾಡಿದಂತೆ ಕಾಣುತ್ತಿದೆ. ಮತ್ತೊಂದು ಕಡೆ, ಇರಾನ್ ವಿರುದ್ಧ ಈ ರೀತಿ ಇಸ್ರೇಲ್ ಹೇಳಿಕೆ ನೀಡಿದ್ದು ಸಹಜವಾಗಿ ಮತ್ತಷ್ಟು ಹಿಂಸೆ ಮುನ್ಸೂಚನೆ ನೀಡುತ್ತಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಮಧ್ಯಪ್ರಾಚ್ಯ ನಿವಾಸಿಗಳಲ್ಲಿ ಇನ್ನಷ್ಟು ಭಯದ ವಾತಾವರಣ ಸೃಷ್ಟಿಯಾಗಿದೆ.
ದಿಢೀರ್ ರೊಚ್ಚಿಗೆದ್ದಿದ್ದು ಏಕೆ ಇಸ್ರೇಲ್?
ಇಸ್ರೇಲ್ ಸೇನೆ ಇದೀಗ ಸೇಡಿಗಾಗಿ ಕಾದು ಕುಳಿತಿದೆ, ಇದೇ ಸಮಯದಲ್ಲಿ ಇರಾನ್ ಕಮಾಂಡರ್ ಇಸ್ಮಾಯಿಲ್ ಖಾನಿ ವಿಚಾರ ಚರ್ಚೆಗೆ ಬಂದಿತ್ತು. ಒಂದು ಕಡೆ ಇಸ್ಮಾಯಿಲ್ ಖಾನಿ ಹೊರಗಡೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ, ಹೀಗಾಗಿ ಇಸ್ಮಾಯಿಲ್ ಖಾನಿಯನ್ನ ಇಸ್ರೇಲ್ ಸೇನೆ ಹತ್ಯೆಯನ್ನ ಮಾಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗ ದಿಢೀರ್ ಇಸ್ಮಾಯಿಲ್ ಖಾನಿ ಹೊರಗೆ ಕಾಣಿಸಿಕೊಂಡಿದ್ದು, ಇಸ್ರೇಲ್ ಪ್ರಧಾನಿ ದಿಢೀರ್ ಇರಾನ್ ವಿರುದ್ಧ ಗುಡುಗಿದ್ದಾರೆ. ಹೀಗಾಗಿ ಸಹಜವಾಗಿ ಇಸ್ರೇಲ್ & ಇರಾನ್ ನಡುವೆ ನೇರ ಯುದ್ಧ ಆರಂಭವಾಗುತ್ತಾ? ಎಂಬ ಅನುಮಾನ ಇದೀಗ ಮೂಡಿದೆ.












Click it and Unblock the Notifications