Iran War: ಇಸ್ರೇಲ್ ವಿರುದ್ಧ ಇರಾನ್ ಹಿಂಗಾ ಹೇಳೋದು? ಡೊನಾಲ್ಡ್ ಟ್ರಂಪ್ ಅವರಿಗೂ ಶಾಕ್!
ಇರಾನ್ & ಇಸ್ರೇಲ್ ಯುದ್ಧ ನಿಂತು ಹೋದ ನಂತರ ಒಂದಷ್ಟು ನೆಮ್ಮದಿ ಮನೆ ಮಾಡಿದ್ದು, ಪರಮಾಣು ಯುದ್ಧದ ಭಯದಿಂದ ಕೂಡ ಮುಕ್ತಿ ಸಿಕ್ಕಿದೆ. ಇರಾನ್ & ಇಸ್ರೇಲ್ ವಾರ್ ನಿಲ್ಲಿಸುವಲ್ಲಿ ಡೊನಾಲ್ಡ್ ಟ್ರಂಪ್ ಅವರ ಶ್ರಮ ಇದೆ ಅಂತಾ ಒಂದು ಕಡೆ ಅಮೆರಿಕ ಹೇಳುತ್ತಿದ್ದರೆ, ಮತ್ತೊಂದು ಕಡೆ ನಮ್ಮ ಭಯದಿಂದಲೇ ಇಸ್ರೇಲ್ ಪಲಾಯನ ಮಾಡಿದೆ ಅಂತಾ ಇರಾನ್ ಆರೋಪ ಮಾಡುತ್ತಿದೆ. ಹೀಗಿದ್ದಾಗಲೇ, ಇಸ್ರೇಲ್ ವಿರುದ್ಧ ಇರಾನ್ ಹಿಂಗಾ ಹೇಳೋದು? ಡೊನಾಲ್ಡ್ ಟ್ರಂಪ್ ಅವರಿಗೂ ಶಾಕ್!
ಡೊನಾಲ್ಡ್ ಟ್ರಂಪ್ ಸುಮ್ಮನೆ ಇರದೆ ಏನೇನೋ ಹೇಳಿ ಸ್ವತಃ ತಮ್ಮ ದೇಶ ಅಮೆರಿಕದ ಮರ್ಯಾದಿ ಕೂಡ ಕಳೆಯುತ್ತಾರೆ ಅನ್ನೋ ಆರೋಪ ಇದೆ. ಅದರಲ್ಲೂ ಇರಾನ್ ವಿಚಾರದಲ್ಲಿ ಈಗಾಗಲೇ ಅಮೆರಿಕಗೆ ಭಾರಿ ದೊಡ್ಡ ಮುಖಭಂಗ ಆಗಿದೆ ಅನ್ನೋ ಆರೋಪ ಇದೆ. ಇಂತಹ ಸಮಯದಲ್ಲೇ ಎಲ್ಲಾ ಸರಿ ಹೋಗುತ್ತಿದೆ, ಇನ್ನು ಯುದ್ಧ ಆಗಲ್ಲ ಅನ್ನೋ ನಂಬಿಕೆ ಎಲ್ಲರಿಗೂ ಇತ್ತು. ಆದರೆ ಮತ್ತೆ ಇರಾನ್ & ಅಮೆರಿಕ ನಡುವೆ ತಿಕ್ಕಾಟ ಜೋರಾಗಿದೆ. ಅದರಲ್ಲೂ ಇಸ್ರೇಲ್ ವಿಚಾರವಾಗಿ ಟೀಕಿಸುವಾಗ ಟ್ರಂಪ್ ಹೆಸರನ್ನೂ ಎಳೆದು ತಂದು ಇರಾನ್ ಏನು ಹೇಳಿದೆ ಗೊತ್ತೆ?

ಇರಾನ್ ವಿರುದ್ಧ ಮತ್ತೆ ವಾರ್?
ಅಂದಹಾಗೆ ಇಸ್ರೇಲ್ ಮತ್ತು ಇರಾನ್ ವಿರುದ್ಧ ಯುದ್ಧ ನಡೆದಾಗ ಅಮೆರಿಕ ಹಿಂದೆ ನಿಂತು ಇಸ್ರೇಲ್ ಸೇನೆಗೆ ಬೆಂಬಲ ವ್ಯಕ್ತಪಡಿಸಿತ್ತು. ಆದರೆ ಆ ನಂತರ ಏನೇನೋ ಆಗಿ ನೇರವಾಗಿ ಅಮೆರಿಕ ಸೇನೆಯೇ ಇರಾನ್ ನೆಲಕ್ಕೆ ನುಗ್ಗಿ ದಾಳಿ ಮಾಡಲು ಪ್ರಯತ್ನಿಸಿತ್ತು. ಹೀಗಿದ್ದರೂ ಇರಾನ್ ಸೇನೆಯನ್ನ ಸಂಪೂರ್ಣವಾಗಿ ಸೋಲಿಸಲು ಆಗಲೇ ಇಲ್ಲ. ಇಷ್ಟೆಲ್ಲದರ ನಡುವೆ ಇಸ್ರೇಲ್ ಕೂಡ ಇರಾನ್ ನಡೆಸುತ್ತಿದ್ದ ಭೀಕರ ಕ್ಷಿಪಣಿ ದಾಳಿ ನೋಡಿ ಬೆಚ್ಚಿ ಹೋಗಿತ್ತು.
ಕೊನೆಗೆ ಅಮೆರಿಕದ ಸಹಾಯ ಪಡೆದು ಯುದ್ಧ ನಿಲ್ಲುವಂತೆ ಮಾಡಿದೆ ಇಸ್ರೇಲ್. ಈ ಘಟನೆ ಬೆನ್ನಲ್ಲೇ ಟೀಕೆ ಮಾಡಿರುವ ಇರಾನ್, ಇಸ್ರೇಲ್ ಅಪ್ಪನ ಬಳಿ ಹೋಗಿ ತನ್ನ ಜೀವ ಉಳಿಸಿಕೊಂಡಿದೆ ಅಂತಾ ಹೇಳಿದೆ. ಇದರ ಅರ್ಥ ಇಸ್ರೇಲ್ ಅಪ್ಪ ಅಮೆರಿಕ ಅಥವಾ ಡೊನಾಲ್ಡ್ ಟ್ರಂಪ್ ಎನ್ನುವುದಾಗಿದೆ. ಈ ಮೂಲಕ ಮತ್ತೊಮ್ಮೆ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಇರಾನ್ ಗುಡುಗಿದೆ. ಹೀಗಾಗಿ, ಮತ್ತೆ ಯುದ್ಧ ಶುರುವಾಗುತ್ತಾ? ಅನ್ನೋ ಆತಂಕ ಕೂಡ ಆವರಿಸಿದೆ.
ಇರಾನ್ ಸುಪ್ರೀಂ ಲೀಡರ್ ಖಮೇನಿಗೆ...
ಹೀಗೆ ಇಸ್ರೇಲ್ & ಅಮೆರಿಕ ವಿರುದ್ಧ ಮತ್ತೊಮ್ಮೆ ಗುಡುಗಿರುವ ಇರಾನ್, ನಮ್ಮ ಜೊತೆಗೆ ಒಪ್ಪಂದವನ್ನು ಮಾಡಿಕೊಳ್ಳಲು ಮನಸ್ಸು ಇದ್ದರೆ ಸರಿಯಾದ ದಾರಿಯಲ್ಲಿ ಬನ್ನಿ. ಅದರಲ್ಲೂ ಇರಾನ್ ಸುಪ್ರೀಂ ಲೀಡರ್ ಖಮೇನಿಗೆ ಬೆಲೆ ಕೊಡಿ ಅಂತಾ ಕೂಡ ಇರಾನ್ ಆಗ್ರಹ ಮಾಡಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಮತ್ತೆ, ಮತ್ತೆ ಮಧ್ಯಪ್ರಾಚ್ಯ ಭಾಗದಲ್ಲಿ ಯುದ್ಧ & ಹಿಂಸಾಚಾರದ ಕಿಡಿ ಹೊತ್ತಿಕೊಳ್ಳುವ ಭಯ ಕೂಡ ಕಾಡುತ್ತಿದೆ. ಈ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೆ ಚರ್ಚೆ ಜೋರಾಗಿದೆ.












Click it and Unblock the Notifications