ಮತ್ತಷ್ಟು ಭೀಕರ ದಾಳಿಯ ಭಯ: ಹೊರಗೆ ಬರಲು ಹೆದರುತ್ತಿರುವ ಜನ!

ಲೆಬನಾನ್‌ ರಾಜಧಾನಿ ಅಕ್ಷರಶಃ ನಲುಗಿ ಹೋಗಿದೆ, 2,800ಕ್ಕೂ ಹೆಚ್ಚು ಜನರು ಗಾಯಗೊಂಡು 9 ಜನರ ಜೀವ ಬಲಿ ಪಡೆದ ಲೆಬನಾನ್‌ ದಾಳಿ ನೆನಪು ಮಾಡಿಕೊಂಡು ಜನರು ಬೆಚ್ಚಿದ್ದಾರೆ. ಇನ್ನೊಂದು ಕಡೆ ಇಸ್ರೇಲ್ ವಿರುದ್ಧ ಇದೀಗ ಸೇಡು ತೀರಿಸಿಕೊಳ್ಳಲು ಇರಾನ್ ಕೂಡ ಸಿದ್ಧತೆ ನಡೆಸಿದೆ. ಈ ಮೂಲಕ ಎರಡೂ ಕಡೆಯಲ್ಲಿ ತಿಕ್ಕಾಟ ಬಲು ಜೋರಾಗಿದೆ. ಈ ಸಮಯಕ್ಕೇ ಕಾದು ಕುಳಿತಿದ್ದ ಕೆಲವರು ಇಬ್ಬರ ನಡುವೆ ಮತ್ತಷ್ಟು ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಇದೆಲ್ಲವನ್ನೂ ಮೀರಿ ಇದೀಗ ಲೆಬನಾನ್‌ & ಸಿರಿಯಾ ದೇಶದಲ್ಲಿ ಏನಾಗುತ್ತಿದೆ ಗೊತ್ತಾ?

ಇಸ್ರೇಲ್ & ಹಮಾಸ್ ನಡುವೆ ಕಿರಿಕ್ ಶುರುವಾಗಿ, ಯಾವಾಗ ಗಾಜಾಪಟ್ಟಿ ಪ್ರದೇಶದಲ್ಲಿ ಭಾರಿ ದೊಡ್ಡ ಸಂಘರ್ಷ ಆರಂಭವಾಯಿತೋ ಆಗಲೇ ನೋಡಿ ಎಡವಟ್ಟು ಆಗಿದ್ದು. ಈ ಯುದ್ಧದ ನಂತರ ಮಧ್ಯಪ್ರಾಚ್ಯ ಧಗಧಗ ಹೊತ್ತಿ ಉರಿಯುತ್ತಿದೆ. ಒಂದು ಕಡೆ ಇರಾನ್ & ಇಸ್ರೇಲ್ ಮಧ್ಯೆ ಯಾವುದೇ ಕ್ಷಣದಲ್ಲಿ ಯುದ್ಧ ಶುರುವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗೆ ವಾತಾವರಣ ಸೂಕ್ಷ್ಮವಾಗಿದ್ದು, ಒಂದು ಕಿಡಿ ಬಿದ್ದರೂ ಬೆಂಕಿ ಭಗ್ ಎದ್ದು ಹೊತ್ತಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಮಸ್ಯೆಗಳು ಸಾಲದು ಎನ್ನುವಂತೆ ಇಂದು ಲೆಬನಾನ್ & ಸಿರಿಯಾ ದೇಶಗಳಲ್ಲಿ ಪೇಜರ್ಸ್ ಸ್ಫೋಟಗೊಂಡಿವೆ. ಎಲೆಕ್ಟ್ರಾನಿಕ್ ಡಿವೈಸ್ ಆಗಿರುವ ಇದೇ ಪೇಜರ್ಸ್ ಬಳಸಿಕೊಂಡು ಹೀಗೆ ದಾಳಿ ಮಾಡಿದೆ ಇಸ್ರೇಲ್ ಎಂಬ ಆರೋಪ ಹೊರಿಸಲಾಗಿದೆ.

This Is What Happening In Lebanon After Pagers Explosion

ಮನೆಯಿಂದ ಹೊರಗೆ ಬರಲು ಆತಂಕ!

ಲೆಬನಾನ್‌ & ಸಿರಿಯಾ ದೇಶದ ಹಲವೆಡೆ ಪೇಜರ್ಸ್ ಸ್ಫೋಟ ನಡೆಸಿದ ಆರೋಪ ಕೇಳಿ ಬಂದಿದೆ. ಸುಮಾರು 2,800ಕ್ಕೂ ಹೆಚ್ಚು ಜನ ಘಟನೆಯಲ್ಲಿ ಗಾಯಗೊಂಡಿದ್ದು, 9 ಜನ ಇಲ್ಲಿಯವರೆಗೂ ಜೀವ ಬಿಟ್ಟಿದ್ದಾರೆ. ಹಾಗೆಯೇ ಗಾಯಗೊಂಡು ಪರದಾಡುತ್ತಿರುವ 2,800 ಜನರು ಆಸ್ಪತ್ರೆಗಳಲ್ಲಿ ನರಳುತ್ತಿದ್ದು, ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುವ ಆತಂಕ ಈಗ ಆವರಿಸಿದೆ. 2,800 ಗಾಯಾಳುಗಳ ಪೈಕಿ 200 ಜನರು ಈಗ ಉಸಿರಾಡಲು ಕೂಡ ಪರದಾಡುತ್ತಿದ್ದಾರೆ.

ಪರಿಸ್ಥಿತಿ ಹೀಗಿದ್ದಾಗ ಲೆಬನಾನ್ ರಾಜಧಾನಿಯಲ್ಲಿ ಜನರು ಹೊರಗೆ ಕಾಲು ಇಡಲು ಪರದಾಟ ಪಡುತ್ತಿದ್ದಾರೆ. ಅಲ್ಲದೆ ಯಾವ ಕ್ಷಣದಲ್ಲಿ ಮತ್ತೆ ಇನ್ಯಾವ ರೀತಿಯ ಎಡವಟ್ಟು ಆಗುತ್ತದೋ ಎಂಬ ಆತಂಕ ಆವರಿಸಿದೆ. ಜನರು ಈ ದಾಳಿ ಪರಿಣಾಮ ನಲುಗಿ ಹೋಗಿದ್ದು, ಇಸ್ರೇಲ್‌ಗೆ ಪಾಠ ಕಲಿಸಬೇಕು ಎಂಬ ಆಗ್ರಹ ಲೆಬನಾನ್ & ಸಿರಿಯಾದಲ್ಲಿ ಕೇಳಿಬರುತ್ತಿದೆ. ಇರಾನ್ ಈ ಬಾರಿ ರಿವೇಂಜ್ ತೆಗೆದುಕೊಳ್ಳಲು ಭೀಕರ ದಾಳಿ ಮಾಡುವುದು ಗ್ಯಾರಂಟಿ ಎನ್ನಲಾಗುತ್ತಿದೆ.

ಭೀಕರ ಯುದ್ಧ ಇನ್ನೇನು ಆರಂಭ?

ಒಟ್ಟಾರೆ ಹೇಳುವುದಾದರೆ ಮಧ್ಯಪ್ರಾಚ್ಯ ಬೂದಿ ಮುಚ್ಚಿದ ಕೆಂಡವಾಗಿದೆ. ಯಾವ ಕ್ಷಣದಲ್ಲಿ ಮಧ್ಯಪ್ರಾಚ್ಯ ಭಾಗದಲ್ಲಿ ಯುದ್ಧ ಭುಗಿಲೆದ್ದು, ಒಬ್ಬರನ್ನು ಮತ್ತೊಬ್ಬರು ಸರ್ವನಾಶ ಮಾಡಿ ಹಾಕುತ್ತಾರೋ? ಎಂಬ ಆತಂಕ ಕೂಡ ಕಾಡುತ್ತಿದೆ. ಹೀಗಾಗಿ ಎಲ್ಲೆಲ್ಲೂ ಕಟ್ಟೆಚ್ಚರ ವಹಿಸಿ, ಯುದ್ಧದ ಭೀಕರತೆ ಎದುರಿಸಲು ಇಸ್ರೇಲ್ ಕೂಡ ಸಜ್ಜಾಗಿದೆ. ಮತ್ತೊಂದು ಕಡೆ ಅಮೆರಿಕದ ನಾಯಕರು ಕೂಡ ಈ ಕುರಿತು ಮಹತ್ವದ ಸಭೆಗಳನ್ನ ನಡೆಸುತ್ತಿದ್ದಾರೆ. ಹೀಗಾಗಿ ಭವಿಷ್ಯದ ಬಗ್ಗೆ ಮಧ್ಯಪ್ರಾಚ್ಯ ದೇಶಗಳಲ್ಲಿ ಚಿಂತೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+