Israel: ಇಸ್ರೇಲ್ & ಗಾಜಾ ನಡುವಿನ ಯುದ್ಧ ಮುಗಿದು ಹೋಯ್ತಾ?

ಇಸ್ರೇಲ್ & ಗಾಜಾ ಪಟ್ಟಿ ನಡುವೆ 1 ವರ್ಷದಿಂದ ಕೂಡ ಭೀಕರ ಕದನ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ದೊಡ್ಡ ಸಮಸ್ಯೆ ಕೂಡ ಶುರುವಾಗಿದೆ. ಜನರು ಮತ್ತೊಂದು ಮಹಾಯುದ್ಧದ ಭೀತಿಯಲ್ಲಿ ನರಳುತ್ತಿದ್ದಾರೆ. ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಾ ಹೋಗುತ್ತಿದೆ, ಅಲ್ಲದೆ ಇಸ್ರೇಲ್ & ಗಾಜಾ ಪಟ್ಟಿ ಯುದ್ಧದ ಪರಿಣಾಮ ಜಗತ್ತಿನಲ್ಲಿ ಮತ್ತಷ್ಟು ಯುದ್ಧಗಳು ಆರಂಭ ಆಗಿವೆ. ಇಂತಹ ಪರಿಸ್ಥಿತಿಯಲ್ಲೇ ದಿಢೀರ್ ಗಾಜಾ ಪಟ್ಟಿ ವಿರುದ್ಧದ ಈ ಯುದ್ಧಕ್ಕೆ ಇಸ್ರೇಲ್ ಸೇನೆ ಬ್ರೇಕ್ ಹಾಕುತ್ತಾ? ಬನ್ನಿ ತಿಳಿಯೋಣ.

ಯುದ್ಧ ಮಾಡಿದರೆ ಏನು ಪ್ರಯೋಜನ? ಯುದ್ಧದಿಂದಾಗಿ ಅಮಾಯಕರ ಜೀವ ಹೋಗಲ್ವಾ? ಅಷ್ಟಕ್ಕೂ ಇದು ಜಗತ್ತಿನಾದ್ಯಂತ ಸಾಮಾನ್ಯ ಜನರು ಕೇಳುವ ಮಾತು. ಇಂತಹ ಸಮಯದಲ್ಲೇ ಗಾಜಾದಲ್ಲಿ ಅಡಗಿದ್ದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್‌ ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ಹೇಳಿಕೊಂಡಿದೆ. ಇದಕ್ಕೆ ಸಾಕ್ಷ್ಯ ಎಂಬಂತೆ ಇಸ್ರೇಲ್‌ ಸೇನೆ ವಿಡಿಯೊ ಹಾಗೂ ಫೋಟೊಗಳನ್ನು ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದೆ. ಈ ಬೆಳವಣಿಗೆ ಬೆನ್ನಲ್ಲೇ, ಗಾಜಾ ಪಟ್ಟಿ ಯುದ್ಧ ನಿಲ್ಲುತ್ತದೆ ಎಂಬ...

This Is What Discussion Is Going On About Gaza And Israeli War

ಗಾಜಾ ಯುದ್ಧ ನಿಲ್ಲಿಸುತ್ತಾ ಇಸ್ರೇಲ್?

ಅದು ಅಕ್ಟೋಬರ್ 7, 2023 ಯಾರೂ ಊಹಿಸದ ಘಟನೆ ನಡೆದಿತ್ತು. ಎರಡು ದೇಶಗಳ ಮಧ್ಯೆ ಇದೇ ದಿನ ಭೀಕರ ಯುದ್ಧ ಶುರುವಾಗಿತ್ತು. ಇಸ್ರೇಲ್ ಹಾಗೂ ಹಮಾಸ್ ದಿಢೀರ್ ಯುದ್ಧ ಬೆಂಕಿ ಹೊತ್ತಿಕೊಂಡಿತ್ತು. ಬಡಿದಾಟವು ಕೂಡ ಶುರುವಾಗಿತ್ತು. ಹೀಗೆ ಅಲ್ಲಿ ಹಿಂಸಾಚಾರ ಶುರುವಾಗಿ ಈಗ ಬರೋಬ್ಬರಿ 1 ವರ್ಷ ಕಳೆದು ಹೋಗಿದೆ. ಹೀಗಿದ್ದಾಗ ಈ ಯುದ್ಧಕ್ಕೆ ಕಾರಣವಾಗಿದ್ದವನ ಹತ್ಯೆ ಮಾಡಿರುವ ಇಸ್ರೇಲ್ ಯುದ್ಧ ನಿಲ್ಲಿಸುತ್ತಾ? ಎಂಬ ಕುತೂಹಲ ಮೂಡಿದೆ.

ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧದ ರೀತಿ ಹಮಾಸ್ & ಇಸ್ರೇಲ್ ವಾರ್ ನಿಲ್ಲುವಂತೆ ಕಾಣುತ್ತಿಲ್ಲ ಇಷ್ಟೆಲ್ಲಾ ಸಾಲದು ಅಂತಾ, ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆ & ಇರಾನ್ ಬೆಂಬಲಿತ ಉಗ್ರರ ಗುಂಪುಗಳು ಹಮಾಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿವೆ. ಆದರೆ ಹಮಾಸ್ ಮುಖ್ಯಸ್ಥನ ಜೀವ ತೆಗೆದಿರುವ ಇಸ್ರೇಲ್ ಈಗ ಗಾಜಾ ಪಟ್ಟಿ ಮೇಲಿನ ಯುದ್ಧ ನಿಲ್ಲಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ. ಇದು ಮುಂದಿನ ದಿನಗಳ ಬಗ್ಗೆ ತೀವ್ರ ಕುತೂಹಲ ಕೆರಳಿಸುತ್ತಿದೆ. ಮತ್ತೊಂದು ಕಡೆ ವಿಶ್ವಸಂಸ್ಥೆ ಸಮೇತ ಇಡೀ ಜಗತ್ತು ಗಾಜಾ ಯುದ್ಧ ನಿಲ್ಲಿಸಲು ಎಲ್ಲಾ ರೀತಿ ಪ್ರಯತ್ನ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+