ಇರಾನ್ ಬುಡಕ್ಕೆ ಬತ್ತಿ ಇಟ್ಟ ಅಮೆರಿಕ: ರಷ್ಯಾ & ಉಕ್ರೇನ್ ಯುದ್ಧದಲ್ಲಿ ಸಂಚಲನ!
ಅಮೆರಿಕ & ಇರಾನ್ ನಡುವೆ ಕಿರಿಕ್ ಮುಂದುವರಿದ ಸಮಯದಲ್ಲೇ ರಷ್ಯಾ & ಉಕ್ರೇನ್ ಯುದ್ಧ ಎಂಟ್ರಿ ಆಗಿದೆ. ಅದರಲ್ಲೂ ಇರಾನ್ ವಿರುದ್ಧ ಪದೇ ಪದೇ ರೊಚ್ಚಿಗೇಳುತ್ತಿರುವ ಅಮೆರಿಕದ ನಾಯಕರು, ಇದೀಗ ನೇರವಾಗಿ ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ. ಹಾಗಾದ್ರೆ ಈ ಸಮಯದಲ್ಲಿ ಅಮೆರಿಕ ಈಗ ಇರಾನ್ ವಿರುದ್ಧ ಮಾಡಿರುವ ಆ ಗಂಭೀರ ಆರೋಪವಾದರೂ ಏನು? ಅಮೆರಿಕ ಆರೋಪದ ಪರಿಣಾಮ ಮುಂದೆ ಏನೆಲ್ಲಾ ಆಬಹುದು? ರಷ್ಯಾ & ಉಕ್ರೇನ್‌ನ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಿಸಲು ಇದರಿಂದಾಗಿ ಕಷ್ಟ ಆಗಬಹುದಾ? ಸಂಪೂರ್ಣ ಮಾಹಿತಿ ತಿಳಿಯೋಕೆ ಮುಂದೆ ಓದಿ.
ಅಷ್ಟಕ್ಕೂ ಉಕ್ರೇನ್ ವಿರುದ್ಧದ ಯುದ್ಧಕ್ಕಾಗಿ ರಷ್ಯಾಗೆ ಇರಾನ್ ಕ್ಷಿಪಣಿ ಅಂದರೆ ಮಿಸೈಲ್‌ಗಳನ್ನ ಸಪ್ಲೈ ಮಾಡುತ್ತಿದೆ. ಈ ಪೈಕಿ ಕಿರು ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಅಂದರೆ ಚಿಕ್ಕ ಚಿಕ್ಕ ಗುರಿ ಸುಲಭವಾಗಿ ತಲುಪುವ ಸಾಮರ್ಥ್ಯ ಇರುವ, ಮಿಸೈಲ್‌ಗಳನ್ನ ನೀಡುತ್ತಿದೆ ಇರಾನ್ ಎಂದಿದೆ ಅಮೆರಿಕ. ಮತ್ತೊಂದು ಕಡೆ ಈ ವಿಚಾರವಾಗಿ ರೊಚ್ಚಿಗೆದ್ದಿರುವ ಅಮೆರಿಕ ಈಗ, ಇರಾನ್‌ನ ವಿರುದ್ಧ ಮತ್ತಷ್ಟು ನಿರ್ಬಂಧ ಹೇರುವ ಸಾಧ್ಯತೆ ಕೂಡ ದಟ್ಟವಾಗಿದೆ. ಹಾಗಾದ್ರೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಈ ಬಗ್ಗೆ ಹೇಳಿದ್ದು ಏನು? ಬನ್ನಿ ತಿಳಿಯೋಣ.

ಭೀಕರ ಯುದ್ಧಕ್ಕೆ ರಷ್ಯಾ ಸನ್ನದ್ಧ?
ಇರಾನ್ ವಿರುದ್ಧ ಈಗ ಗುಡುಗಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ಇರಾನ್ ಭಾರಿ ಪ್ರಮಾಣದಲ್ಲಿ ರಷ್ಯಾಗೆ ಮಿಸೈಲ್ ಅಂದ್ರೆ ಕ್ಷಿಪಣಿಗಳ ಸಪ್ಲೈ ಮಾಡಿದೆ. ಇದೇ ಕ್ಷಿಪಣಿಗಳನ್ನ ಬಳಕೆ ಮಾಡಿ ಇದೀಗ ಉಕ್ರೇನ್ ವಿರುದ್ಧ ಭೀಕರ ದಾಳಿಗೆ ರಷ್ಯಾ ಸಂಚು ಕೂಡ ರೂಪಿಸಿದೆ. ಇರಾನ್ ಕೊಟ್ಟಿರುವ ಕ್ಷಿಪಣಿಗಳನ್ನು ರಷ್ಯಾ ಒಂದು ವಾರದ ಒಳಗಾಗಿ ಉಕ್ರೇನ್ ವಿರುದ್ಧ ಬಳಸುವ ಸಾಧ್ಯತೆ ದಟ್ಟವಾಗಿದೆ ಎಂದು ಆರೋಪಿಸಲಾಗಿದೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಲಂಡನ್‌ಗೆ ಭೇಟಿ ನೀಡಿದ್ದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ, ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಜೊತೆಗೆ ಚರ್ಚೆ ನಡೆಸಿದ ನಂತರ ಈ ರೀತಿ ಗಂಭೀರ ಆರೋಪ ಮಾಡಿದ್ದಾರೆ.
ಯುದ್ಧ ನಿಲ್ಲಿಸಲು ಭಾರತದ ಪ್ರಯತ್ನ
ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕಲು ಭಾರತವು ಮುಂದಾಗಿದೆ. ಈಗಾಗಲೇ ಹಲವಾರು ದಿನಗಳಿಂದ ಯುದ್ಧ ನಿಲ್ಲಿಸಲು ಭಾರತ ಪ್ರಯತ್ನ ಆರಂಭ ಮಾಡಿದೆ ಇದು ಜಾಗತಿಕ ಮಟ್ಟದಲ್ಲಿ ಕೂಡ ದೊಡ್ಡ ಚರ್ಚೆಗೆ ವೇದಿಕೆಯ ಒದಗಿಸಿತ್ತು. ಹೀಗೆ ಭಾರತದ ಈ ನಡೆ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಭಾರತದ ಜೊತೆಗೆ ಚೀನಾ & ಬ್ರೆಜಿಲ್ ಕೂಡ ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕಲು ಪ್ರಯತ್ನ ನಡೆಸುತ್ತಿವೆ. ಹೀಗಿದ್ದಾಗ ಇರಾನ್ ಬಳಿಯಿಂದ ರಷ್ಯಾ ಸಾಕಷ್ಟು ಪ್ರಮಾಣದ ಮಿಸೈಲ್ ಪಡೆದಿದೆ ಎಂಬ ವಿಚಾರ ಸಂಚಲನ ಸೃಷ್ಟಿ ಮಾಡಿದೆ.












Click it and Unblock the Notifications