Israel-Iran War: ಇಸ್ರೇಲ್ ಪ್ರಧಾನಿ ಫುಲ್ ಗರಂ... ಫ್ರಾನ್ಸ್ ಅಧ್ಯಕ್ಷರ ಹೇಳಿಕೆಗೆ ಖಡಕ್ ತಿರುಗೇಟು!

ಮಧ್ಯಪ್ರಾಚ್ಯ ಕಾದ ಕಬ್ಬಿಣದಂತೆ ಆಗಿ ಹೋಗಿದೆ, ಒಂದು ಕಡೆ ಇಸ್ರೇಲ್ ಜೊತೆಯಲ್ಲಿ ಯುದ್ಧ ನಡೆಸಲು ಹಲವು ದೇಶಗಳು ಸನ್ನದ್ಧವಾಗಿವೆ. ಅದೇ ರೀತಿ ಮತ್ತೊಂದು ಕಡೆ ಇಸ್ರೇಲ್ ವಿರುದ್ಧ ಒಂದೊಂದೇ ಪಾಶ್ಚಿಮಾತ್ಯ ದೇಶಗಳು ಇದೀಗ ಆಕ್ರೋಶ ಹೊರ ಹಾಕುತ್ತಿವೆ. ಹೀಗೆ ಇಸ್ರೇಲ್ ಸೇನೆಗೆ ಒಂದೊಂದೇ ಆಘಾತ ಎದುರಾಗುತ್ತಿದೆ. ಅದರಲ್ಲೂ ಫ್ರಾನ್ಸ್ ಅಧ್ಯಕ್ಷ ನೀಡಿದ ಅದೊಂದು ಹೇಳಿಕೆ ಇಸ್ರೇಲ್ ಪ್ರಧಾನಿಯನ್ನು ಇನ್ನಿಲ್ಲದಂತೆ ಕೋಪಗೊಳ್ಳುವಂತೆ ಮಾಡಿದೆ. ಹಾಗಾದರೆ, ಫ್ರಾನ್ಸ್ ಅಧ್ಯಕ್ಷರ ಹೇಳಿಕೆಗೆ ಇಸ್ರೇಲ್ ಪ್ರಧಾನಿ ರಿಯಾಕ್ಷನ್ ಏನು? ಬನ್ನಿ ತಿಳಿಯೋಣ.

ಫ್ರಾನ್ಸ್ ಹಾಗೂ ಇಸ್ರೇಲ್‌ನ ನಡುವೆ ಭಾರಿ ದೊಡ್ಡ ಕಿರಿಕ್ ಇದೀಗ ಶುರುವಾದಂತೆ ಕಾಣ್ತಿದೆ. ಇಸ್ರೇಲ್ & ಗಾಜಾ ನಡುವೆ ಯುದ್ಧ ಶುರುವಾಗಿ ಬರೋಬ್ಬರಿ 1 ವರ್ಷ ಕಳೆದು ಹೋಗಿದ್ದು, ಈ ವಿಚಾರ ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕೂಡ ವೇದಿಕೆ ಸೃಷ್ಟಿ ಮಾಡಿದೆ. ಅದರಲ್ಲೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಇದೀಗ ಇಸ್ರೇಲ್ ವಿರುದ್ಧ ಹೇಳಿಕೆ ನೀಡಿದ್ದು, ಗಾಜಾ ಪಟ್ಟಿ ಸಂಘರ್ಷಕ್ಕೆ ಅಂತ್ಯ ಹಾಡಲು ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ ಎಂದಿದ್ದಾರೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್. ಹಾಗೇ ಇದರ ಜೊತೆಗೆ ಲೆಬನಾನ್ ವಿರುದ್ಧವೂ ಭೂ ಕಾರ್ಯಾಚರಣೆಗೆ ಸೇನೆ ಕಳಿಸುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿರ್ಧಾರಕ್ಕೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಬೇಸರ ಹೊರ ಹಾಕಿದ್ದರು. ಈ ಕುರಿತು ಇದೀಗ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಏನು ಹೇಳಿದ್ದಾರೆ ಗೊತ್ತೆ?

This Is How Israel PM Responded To France President Comment

ಫ್ರಾನ್ಸ್ ಅಧ್ಯಕ್ಷರಿಗೆ ಇಸ್ರೇಲ್ ಎಚ್ಚರಿಕೆ?

ಇಸ್ರೇಲ್ ಈಗ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ, ಯಾಕೆ ಅಂದ್ರೆ ಇಸ್ರೇಲ್‌ಗೆ ಈಗ ಶತ್ರುಗಳನ್ನ ನಾಶ ಮಾಡಬೇಕು ಎಂಬುದು ಒಂದೇ ಗುರಿಯಾಗಿದೆ. ಹೀಗಾಗಿ ಸಿಕ್ಕಾಪಟ್ಟೆ ಜೋರಾಗಿ ದಾಳಿ ನಡೆಸುತ್ತಿದೆ ಇಸ್ರೇಲ್ ಸೇನೆ. ಹೀಗಿದ್ದಾಗಲೇ ಫ್ರಾನ್ಸ್ ಒಂದು ಸಲಹೆಯನ್ನ ನೀಡಿದ್ದು ಇಸ್ರೇಲ್ ಪ್ರಧಾನಿ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದೀಗ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಹೇಳಿಕೆಗೆ ಖಡಕ್ ಆಗಿ ತಿರುಗೇಟು ನೀಡಿದ್ದು, ಇಸ್ರೇಲ್ ಮಿಲಿಟರಿ ಈಗ ಇರಾನ್ ನೇತೃತ್ವದ ಕ್ರೂರ ಶಕ್ತಿಗಳ ವಿರುದ್ಧ ಹೋರಾಟ ನಡೆಸುತ್ತಿದೆ. ಹೀಗಿದ್ದಾಗ ಎಲ್ಲ ನಾಗರಿಕ ದೇಶಗಳು ಇಸ್ರೇಲ್ ಪರ ನಿಲ್ಲಬೇಕಾಗಿದ್ದು, ಇಂತಹ ಹೇಳಿಕೆಗಳನ್ನ ನೀಡಬಾರದು ಎಂದಿದ್ದಾರೆ.

ಮಧ್ಯಪ್ರಾಚ್ಯದ ದೇಶಗಳಲ್ಲಿ ಯುದ್ಧದ...

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೀಡಿರುವ ಪ್ರತಿಕ್ರಿಯೆ ಇದೀಗ ಸಂಚಲನ ಸೃಷ್ಟಿಸಿ ಯುರೋಪ್ ದೇಶಗಳಿಗೆ ಒಂದು ಶಾಕ್ ಕೊಟ್ಟಿದೆ. ಈ ಆಘಾತದ ಪರಿಣಾಮ ಯುರೋಪ್‌ನ ದೇಶಗಳು ಇನ್ನು ಮುಂದೆ ಇಸ್ರೇಲ್ ವಿಚಾರದಲ್ಲಿ ಮಾತನಾಡದೇ ಇರುವ ಸಾಧ್ಯತೆಗಳು ಕೂಡ ದಟ್ಟವಾಗಿವೆ. ಮತ್ತೊಂದು ಕಡೆ ಇದೆಲ್ಲಾ ಅಮೆರಿಕದ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡ್ತಾ ಇದೆ. ಹಾಗೇ ಮಧ್ಯಪ್ರಾಚ್ಯದ ದೇಶಗಳಲ್ಲಿ ಯುದ್ಧದ ವಾತಾವರಣ ಇನ್ನಷ್ಟು ತೀಕ್ಷ್ಣವಾಗ್ತಿದೆ ಎನ್ನಲಾಗಿದ್ದು, ವಿಶ್ವಸಂಸ್ಥೆಗೆ ಕೂಡ ಇದು ದೊಡ್ಡ ತಲೆನೋವು ತರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+