ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ರೊಚ್ಚಿಗೆದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದೇನು? Donald Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ತಮ್ಮ ಆಪ್ತ ಸ್ನೇಹಿತ ಅಂದ್ರೆ ಕ್ಲೋಸ್ ಫ್ರೆಂಡ್ ವ್ಲಾದಿಮಿರ್ ಪುಟಿನ್ ವಿರುದ್ಧವೇ ರೊಚ್ಚಿಗೆದ್ದು ಕೂತಿದ್ದಾರೆ. ಉಕ್ರೇನ್ ಯುದ್ಧ ನಿಲ್ಲಿಸುವ ವಿಚಾರವಾಗಿ ತಮ್ಮ ಮಾತು ಕೇಳುತ್ತಿಲ್ಲ ಅಂತಾ ಪದೇ ಪದೇ ಆಕ್ರೋಶ ಹೊರ ಹಾಕುತ್ತಿದ್ದ ಡೊನಾಲ್ಡ್ ಟ್ರಂಪ್ ಈಗ ನೇರವಾಗಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ವಿಚಾರವಾಗಿ ಅಮೆರಿಕ ಸಾಕಷ್ಟು ಒತ್ತಡ ಎದುರಿಸುತ್ತಿದೆ, ಇಂತಹ ಸಮಯದಲ್ಲೂ ಪುಟಿನ್ ಅವರು ಮಾತ್ರ ಕದನ ವಿರಾಮಕ್ಕೆ ಒಪ್ಪುತ್ತಿಲ್ಲ ಅಂತಾ ಟ್ರಂಪ್ ರೊಚ್ಚಿಗೆದ್ದಿದ್ದಾರೆ.
ರಷ್ಯಾ & ಉಕ್ರೇನ್ ಯುದ್ಧದ ಭೀಕರತೆಗೆ ಜಗತ್ತೇ ನಡುಗಿ ಹೋಗುತ್ತಿದ್ದು, ಒಂದೊಂದು ಕ್ಷಣ ಕೂಡ 3ನೇ ಮಹಾಯುದ್ಧದ ನರಕ ಕಣ್ಣ ಮುಂದೆ ಕಾಣಿಸುತ್ತಿದೆ. ಈಗಾಗಲೇ ಯುರೋಪ್ & ಅಮೆರಿಕದ ಜನರು ರಷ್ಯಾ & ಉಕ್ರೇನ್ ಯುದ್ಧದ ಪರಿಣಾಮ ನರಳಾಡಿ ಹೋಗಿದ್ದಾರೆ. ಇದು ಸಾಲದು ಎನ್ನುವಂತೆ ಇದೀಗ ತಮ್ಮ ತಿಕ್ಕಾಟದ ತೀವ್ರತೆ ಮತ್ತಷ್ಟು ಹೆಚ್ಚು ಮಾಡಲು ಮುಂದೆ ನುಗ್ಗಿರುವ ರಷ್ಯಾ & ಉಕ್ರೇನ್, ಮತ್ತೊಂದು ಪರಮಾಣು ಯುದ್ಧಕ್ಕೆ ಸಜ್ಜಾಗಿವೆಯಾ? ಎಂಬ ಅನುಮಾನ ಮೂಡಿದೆ, ಇಂತಹ ಸಮಯದ್ಲಲೇ ಡೊನಾಲ್ಡ್ ಟ್ರಂಪ್ ಕೂಡ ಪುಟಿನ್ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಯುದ್ಧ.. ಯುದ್ಧ.. ಯುದ್ಧ... ಹೀಗೆ ಜಗತ್ತಿನಾದ್ಯಂತ ಬರೀ ಯುದ್ಧದ ಭಯ ಕಾಡ್ತಿದೆ. ಈ ಘಟನೆಗಳ ನಡುವೆ, ಈಗ ಉಕ್ರೇನ್‌ಗೆ ವಡೆ & ಪಾಯಸ ತಿನ್ನಿಸಲು ರಷ್ಯಾ ಸೇನೆಯಿಂದ ಸಕಲ ಸಿದ್ಧತೆ ನಡೆದಿದೆ ಎಂಬ ಸುದ್ದಿ ಹಬ್ಬಿದೆ. ಈಗಾಗಲೇ ರಷ್ಯಾ ಸೇನೆಯಿಂದ ಭಾರಿ ದೊಡ್ಡ ಮಟ್ಟದಲ್ಲಿ ಉಕ್ರೇನ್ ವಿರುದ್ಧ ದಾಳಿ ಆಗುತ್ತಿದೆ. ಆದರೆ ಈ ಯುದ್ಧಕ್ಕೆ ಬ್ರೇಕ್ ಹಾಕಲೇಬೇಕು ಅನ್ನೋದು ಟ್ರಂಪ್ ಅವರ ಒತ್ತಾಸೆ. ಆದರೆ ಪುಟಿನ್ ಅದಕ್ಕೆ ಒಪ್ಪುತ್ತಿಲ್ಲ ಎಂಬುದೇ ಇದೀಗ ಕೋಪ ಹೆಚ್ಚಾಗುವಂತೆ ಮಾಡಿದೆ.












Click it and Unblock the Notifications