Get Updates
Get notified of breaking news, exclusive insights, and must-see stories!

2016ರ ತಪ್ಪುಗಳಿಂದ ಪಾಠ ಕಲಿತ ಡೊನಾಲ್ಡ್ ಟ್ರಂಪ್ ಮಾಡುತ್ತಿರುವುದು ಏನು?

ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಇನ್ನೇನು ಜನವರಿ ತಿಂಗಳಲ್ಲಿ ಅಧಿಕಾರ ಸ್ವೀಕಾರ ಮಾಡಿ, ಅಮೆರಿಕ ಆಡಳಿತ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಕೈಗೊಂಡಿದ್ದಾರೆ. ಆದರೆ ಅಸಲಿ ಮ್ಯಾಟರ್ ಇದಲ್ಲ, 2016ರ ಮೊದಲನೇ ಅವಧಿಯಲ್ಲಿ ತಾವು ಮಾಡಿಕೊಂಡ ತಪ್ಪುಗಳಿಂದ ಡೊನಾಲ್ಡ್ ಟ್ರಂಪ್ ಈಗ ಭಾರಿ ದೊಡ್ಡ ಪಾಠ ಕಲಿತಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಇದೀಗ ಡೊನಾಲ್ಡ್ ಟ್ರಂಪ್ ಏನು ಮಾಡ್ತಿದ್ದಾರೆ ಗೊತ್ತಾ? ಬನ್ನಿ ಮಾಹಿತಿ ತಿಳಿಯೋಣ.

ಅಮೆರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ದೇಶವಾಗಿದ್ದರೂ ಅಲ್ಲಿ ಅಧ್ಯಕ್ಷರ ಆಡಳಿತ ಇದೆ. ಸುಮಾರು 200ಕ್ಕೂ ಹೆಚ್ಚು ವರ್ಷಗಳಿಂದ ಅಮೆರಿಕದಲ್ಲಿ ಅಧ್ಯಕ್ಷರೇ ಆಡಳಿತ ನಡೆಸುತ್ತಾರೆ & ಇಂತಹ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷ ಸ್ಥಾನ ಪಡೆಯುವುದು ಸುಲಭದ ಮಾತೂ ಅಲ್ಲ. ಅಮೆರಿಕದ ಅಧ್ಯಕ್ಷರಾಗುವ ವ್ಯಕ್ತಿ ಹಗಲು & ರಾತ್ರಿ ಕಷ್ಟಪಟ್ಟು ದುಡಿಯಬೇಕು. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ 2016 ರಲ್ಲಿ ಮೊದಲನೇ ಬಾರಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದಾಗ ಭಾರಿ ದೊಡ್ಡ ದೊಡ್ಡ ವಿವಾದ ಎದೆ ಮೇಲೆ ಎಳೆದುಕೊಂಡರು.

This Is How Donald Trump Learned Lesson From The 2016 Mistakes

ಪಾಠ ಕಲಿತಿದ್ದಾರೆ ಡೊನಾಲ್ಡ್ ಟ್ರಂಪ್!

ಅಕ್ಕಪಕ್ಕ ಇರುವ ಸ್ನೇಹಿತರು & ಒಡನಾಡಿಗಳು ನಮ್ಮ ಜೀವನದಲ್ಲಿ ದೊಡ್ಡ ಪರಿಣಾಮವನ್ನ ಬೀರುತ್ತಾರೆ. ಈ ಮಾತು ನಮ್ಮ & ನಿಮ್ಮ ರೀತಿಯ ಸಾಮಾನ್ಯ ಜನರಿಗೆ ಮಾತ್ರವಲ್ಲ, ಇದು ಅಮೆರಿಕದ ಅಧ್ಯಕ್ಷರಿಗೂ ಸೂಕ್ತವಾಗಿ ಅನ್ವಯ ಆಗುತ್ತದೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ 2016 ರಲ್ಲಿ ಮೊದಲನೇ ಬಾರಿಗೆ ಅಧ್ಯಕ್ಷರಾಗಿ ಅಮೆರಿಕದ ಆಡಳಿತ ನಡೆಸುವಾಗ, ಮುಳುವಾಗಿ ಕಾಡಿದ್ದು ಅವರ ಜೊತೆಗೆ ಇದ್ದ ಕೆಲವರು. ಹೀಗಾಗಿ ಹಿತಶತ್ರುಗಳ ಕಾಟ ತಪ್ಪಿಸಿಕೊಳ್ಳೋದಕ್ಕೆ ಈ ಬಾರಿ ಡೊನಾಲ್ಡ್ ಟ್ರಂಪ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಮೊದಲೇ ಹೇಳಿದಂತೆ ಡೊನಾಲ್ಡ್ ಟ್ರಂಪ್ ಅವರು 2025ರ ಜನವರಿ ತಿಂಗಳಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಹೀಗೆ ಅಧಿಕಾರ ವಹಿಸಿಕೊಂಡರೆ ಅಲ್ಲಿಗೆ ಅಸಲಿ ಆಟ ಶುರುವಾಗಲಿದೆ. ಆದರೆ ಅದಕ್ಕೂ ಮೊದಲು ಅಮೆರಿಕ ಸರ್ಕಾರದ ಎಲ್ಲ ಇಲಾಖೆಗಳ ಕಡತ & ಪತ್ರಗಳು ಸೇರಿದಂತೆ ಸಚಿವ ಸ್ಥಾನಗಳನ್ನ ತುಂಬುವ ಕೆಲಸ ನಡೆದಿದೆ.

ಬೆನ್ನಿಗೆ ಚೂರಿ ಹಾಕಿದ್ದವರಿಂದ ದೂರ!

ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಅವರು ಈ ಬಾರಿ ಅಳೆದು ತೂಗಿ ತಮಗೆ ಬೇಕಾದ ವ್ಯಕ್ತಿಗಳು ಮತ್ತು ತಮಗೆ ಮೋಸ ಮಾಡದ ಜನರನ್ನೇ ಆಯ್ಕೆ ಮಾಡಿಕೊಂಡು ಅಧಿಕಾರ ನೀಡುತ್ತಿದ್ದಾರೆ. ಈ ಮೂಲಕ 2016 ರಲ್ಲಿ ಮೊದಲನೇ ಬಾರಿಗೆ ಅಧ್ಯಕ್ಷರಾಗಿದ್ದಾಗ ಡೊನಾಲ್ಡ್ ಟ್ರಂಪ್ ಬೆನ್ನಿಗೆ ಚೂರಿ ಹಾಕಿದ ರೀತಿಯ ವ್ಯಕ್ತಿಗಳನ್ನ ಟ್ರಂಪ್ ಈ ಬಾರಿ ದೂರ ಇಡುತ್ತಿದ್ದಾರೆ ಎಂಬ ಮಾಹಿತಿ ಹೊರ ಬೀಳುತ್ತಿದೆ.

ಭಾರತ ಮೂಲದವರಿಗೆ ಉತ್ತಮ ಸ್ಥಾನ!

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ನಂತರ ತಲ್ಲಣವೇ ಸೃಷ್ಟಿಯಾಗಿದೆ. ಯಾಕಂದ್ರೆ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ವಿರೋಧಿಗಳಿಗೆ ಭಯ ಶುರುವಾಗಿದೆ. ಈ ಸಮಯದಲ್ಲಿ ಟ್ರಂಪ್ ಅವರ ಆಡಳಿತ ಹೊಸ ವಿಷಯಕ್ಕೆ ಸದ್ದು ಮಾಡುತ್ತಿದೆ ಡೊನಾಲ್ಡ್ ಟ್ರಂಪ್ ಅವರು ತಮ್ಮ ಗೆಲುವಿನಲ್ಲಿ ಭಾರಿ ದೊಡ್ಡ ನೆರವು ನೀಡಿದ ಭಾರತೀಯರನ್ನ ಮರೆತಿಲ್ಲ. ಈ ಕಾರಣ ಭಾರತ ಮೂಲದವರ ಬೆನ್ನಿಗೆ ನಿಂತು, ಭಾರತ ಮೂಲದವರಿಗೆ ಒಳ್ಳೆಯ ಸ್ಥಾನಮಾನ ನೀಡ್ತಿದ್ದಾರೆ ಟ್ರಂಪ್.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+