US Elections 2024: ‘ನರೇಂದ್ರ ಮೋದಿ ಅವರನ್ನು ಜಗತ್ತೇ ಪ್ರೀತಿಸುತ್ತೆ’ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಅಮೆರಿಕ & ಭಾರತದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವ ಮುನ್ಸೂಚನೆ ಇದೀಗ ಅಮೆರಿಕದ ನೂತನ ಅಧ್ಯಕ್ಷರಿಂದ ಸಿಗುತ್ತಿದೆ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಮಿಂಚಿನ ಸಂಚಲನ ಕೂಡ ಸೃಷ್ಟಿಯಾಗುತ್ತಿದೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್‌ರ ಪರವಾಗಿ ಹೊಸ ಅಲೆ ಕೂಡ ಎದ್ದಿದೆ. ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ ಆಯ್ಕೆ ಪಕ್ಕಾ ಆಗುತ್ತಿದ್ದಂತೆ, ಭಾರತದ ಪ್ರಧಾನಿ ಮೋದಿ ಅವರು ದೂರದ ಅಮೆರಿಕಗೆ ಫೋನ್ ಕಾಲ್ ಮಾಡಿದ್ದರು. ಹೀಗೆ ಮಾತನಾಡುತ್ತಾ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ಮೋದಿ ಅವರಿಗೆ....
ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರ ಅಖಾಡದಲ್ಲಿ ಡೊನಾಲ್ಡ್ ಟ್ರಂಪ್ ಅಬ್ಬರ ಕಂಡು ಕಮಲಾ ಹ್ಯಾರಿಸ್ ಸೈಲೆಂಟ್ ಆಗಿದ್ದಾರೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಅವರಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 310ಕ್ಕೂ ಹೆಚ್ಚು 'ಎಲೆಕ್ಟೊರಾಲ್ ಕಾಲೇಜು' ಮತಗಳು ಸಿಗುವ ಎಲ್ಲ ಸಾಧ್ಯತೆ ದಟ್ಟವಾಗಿದೆ. ಈವರೆಗೂ ಅಮೆರಿಕದಲ್ಲಿ ಮುಕ್ತಾಯವಾದ ಮತ ಎಣಿಕೆ ಪ್ರಕಾರವೇ ಡೊನಾಲ್ಡ್ ಟ್ರಂಪ್ 295 'ಎಲೆಕ್ಟೊರಾಲ್ ಕಾಲೇಜು' ಮತಗಳನ್ನು ಪಡೆದಿದ್ದಾರೆ. ಒಟ್ಟು 538 'ಎಲೆಕ್ಟೊರಾಲ್ ಕಾಲೇಜು' ಮತಗಳನ್ನು ಹೊಂದಿರುವ ಅಮೆರಿಕದಲ್ಲಿ, ಮ್ಯಾಜಿಕ್ ನಂಬರ್ ದಾಟಲು ನೂತನ ಅಧ್ಯಕ್ಷನಿಗೆ 270 'ಎಲೆಕ್ಟೊರಾಲ್ ಕಾಲೇಜು' ಮತಗಳು ಬೇಕಿತ್ತು.

310ಕ್ಕೂ ಹೆಚ್ಚು 'ಎಲೆಕ್ಟೊರಾಲ್ ಕಾಲೇಜು'...
ಡೊನಾಲ್ಡ್ ಟ್ರಂಪ್ ಅವರು ಇದೀಗ ಬರೋಬ್ಬರಿ 295 'ಎಲೆಕ್ಟೊರಾಲ್ ಕಾಲೇಜು' ಮತಗಳನ್ನ ಪಡೆದಿದ್ದು, ಹಲವು ರಾಜ್ಯಗಳಲ್ಲಿ ಇನ್ನೂ ಮತ ಎಣಿಕೆ ಬಾಕಿ ಇರುವ ಕಾರಣ ಡೊನಾಲ್ಡ್ ಟ್ರಂಪ್ ಅವರು ಬರೋಬ್ಬರಿ 310ಕ್ಕೂ ಹೆಚ್ಚು 'ಎಲೆಕ್ಟೊರಾಲ್ ಕಾಲೇಜು' ಮತಗಳನ್ನ ಪಡೆದು ಇತಿಹಾಸ ನಿರ್ಮಿಸುವ ಸನಿಹದಲ್ಲಿ ಇದ್ದಾರೆ. ಈ ಸಮಯದಲ್ಲೇ ಭಾರತದ ಪ್ರಧಾನಿ ಮೋದಿ ಅವರು ನೇರವಾಗಿ ಅಮೆರಿಕಗೆ ಕಾಲ್ ಮಾಡಿ, ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದೊನಾಲ್ಡ್ ಟ್ರಂಪ್ ಅವರ ಜೊತೆಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ! ಈ ಸಮಯದಲ್ಲಿ ಟ್ರಂಪ್ ಅವರು...
ಜಗತ್ತೇ ಮೋದಿ ಅವರನ್ನು ಪ್ರೀತಿಸುತ್ತದೆ!
ಪ್ರಧಾನಿ ನರೇಂದ್ರ ಮೋದಿ ಅವರು & ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅತ್ಯುತ್ತಮ ಸ್ನೇಹಿತರು. ಈ ಹಿಂದೆ ಕೂಡ ಹಲವು ಬಾರಿ ನರೇಂದ್ರ ಮೋದಿ ಅವರ ಬಗ್ಗೆ, ಇದೇ ಡೊನಾಲ್ಡ್ ಟ್ರಂಪ್ ಅವರು ಮುಕ್ತವಾಗಿ ಮಾತನಾಡಿದ್ದರು. ಅಲ್ಲದೆ ಮೋದಿ ಅವರು ನನ್ನ ಅತ್ಯುತ್ತಮ ಗೆಳೆಯ ಎಂದು ಕೂಡ ಹೇಳಿದ್ದಾರೆ ಡೊನಾಲ್ಡ್ ಟ್ರಂಪ್.
ಇದೀಗ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ, 2ನೇ ಬಾರಿಗೆ ಅಮೆರಿಕದ ಅಧ್ಯಕ್ಷ ಪಟ್ಟ ಅಲಂಕರಿಸಿರುವ ಡೊನಾಲ್ಡ್ ಟ್ರಂಪ್ ಅವರು ಮೋದಿ ಅವರನ್ನು ತುಂಬಾ ಹೊಗಳಿದ್ದಾರೆ. 'ಜಗತ್ತೇ ಮೋದಿ ಅವರನ್ನು ಪ್ರೀತಿಸುತ್ತೆ' ಎಂದು ಡೊನಾಲ್ಡ್ ಟ್ರಂಪ್ ಅವರು ಇದೀಗ ಪ್ರಧಾನಿ ಮೋದಿ ಅವರನ್ನ ಹೊಗಳಿದ್ದಾರೆ.
ಭಾರತ & ಅಮೆರಿಕ ಸಂಬಂಧ ಇನ್ನಷ್ಟು ಗಟ್ಟಿ!
ಡೊನಾಲ್ಡ್ ಟ್ರಂಪ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊಟ್ಟ ಮೊದಲು ಫೋನ್ ಮೂಲಕ ಮಾತನಾಡಿದ ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಅವರು. ಹೀಗಾಗಿ ಮತ್ತೆ ಅಮೆರಿಕ & ಭಾರತದ ಸಂಬಂಧ ಇನ್ನಷ್ಟು ಗಟ್ಟಿಯಾಗುವ ನಿರೀಕ್ಷೆ ಮೂಡಿದೆ. ಹಾಗೇ ಇದೇ ಸಮಯದಲ್ಲಿ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಕುರಿತಾಗಿ ಹೆಮ್ಮೆಯ ಮಾತುಗಳನ್ನ ಆಡಿದ್ದಾರೆ. ಅಲ್ಲದೆ ಭಾರತ ಭವ್ಯವಾದ ದೇಶ ಅಂತಲೂ ಟ್ರಂಪ್ ಅವರು ಹೊಗಳಿದ್ದಾರೆ. ಮತ್ತೊಂದು ಕಡೆ ಪ್ರಧಾನಿ ಮೋದಿ ಅವರು ಕೂಡ ಅಮೆರಿಕ ಮತ್ತು ಭಾರತದ ಒಗ್ಗಟ್ಟಿನ ಬಗ್ಗೆ ಪ್ರಸ್ತಾಪ ಮಾಡಿದ್ದು, ಎರಡೂ ದೇಶಗಳು ಮತ್ತಷ್ಟು ಹತ್ತಿರವಾಗಿವೆ.












Click it and Unblock the Notifications