ಸುಳ್ಳು.. ಸುಳ್ಳು.. ಸುಳ್ಳು.. ಡೊನಾಲ್ಡ್ ಟ್ರಂಪ್ ಒಬ್ಬ ಸುಳ್ಳ?
ಡೊನಾಲ್ಡ್ ಟ್ರಂಪ್ ಬಾಯಿ ಬಿಟ್ಟರೆ ಸುಳ್ಳು.. ಟ್ರಂಪ್ ಮಾತನಾಡುವ ಪ್ರತಿ ಪದ ಸುಳ್ಳಿನಿಂದ ಪೋಣಿಸಿರುತ್ತೆ ಅನ್ನೋದು ಟ್ರಂಪ್ ವಿರೋಧಿಗಳ ಮಾತು. ಪರಿಸ್ಥಿತಿ ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಚರ್ಚೆ ವೇಳೆ ಕೂಡ ಎಡವಟ್ಟು ಎಡವಟ್ಟು ರೀತಿ ಮಾತನಾಡಿ, ವಿವಾದದ ಬಿರುಗಾಳಿ ಎಬ್ಬಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾಗಿದ್ರೆ ಡೊನಾಲ್ಡ್ ಟ್ರಂಪ್ ವಿರುದ್ಧ ಇದೀಗ ಕೇಳಿ ಬಂದಿರುವ ಆ ಆರೋಪ ಏನು? ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್‌ಗೆ ಇದೀಗ ಟ್ರಂಪ್ ಮಾಡಿರುವ ತಪ್ಪು ಯಾವ ರೀತಿ ಸಹಾಯ ಮಾಡಬಹುದು?
ಹೌದು, ಭಾರತ ಮೂಲದ ಕಮಲಾ ಹ್ಯಾರಿಸ್ ಅವರ ವಿರುದ್ಧ ಇದೀಗ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಇಡೀ ಜಗತ್ತಿನ ಸೂಪರ್ ಪವರ್ ಅಂತಾ ಕರೆಸಿಕೊಳ್ಳುವ ಅಮೆರಿಕದ ಅಧ್ಯಕ್ಷರಾಗಿ, ಪ್ರಪಂಚದಲ್ಲೇ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಅಂತಾ ಕರೆಸಿಕೊಳ್ಳಲು ಡೊನಾಲ್ಡ್ ಟ್ರಂಪ್ ಕಾತುರರಾಗಿದ್ದಾರೆ. ಈ ಸಮಯದಲ್ಲೇ ತಮ್ಮ ಎಲುಬು ಇಲ್ಲದ ನಾಲಿಗೆ ಮಾಡುತ್ತಿರುವ ತಪ್ಪಿಗೆ ಡೊನಾಲ್ಡ್ ಟ್ರಂಪ್ ಸೋಲಿಗೆ ಹತ್ತಿರ ಆಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅದೇ ರೀತಿ ಇದೀಗ ವಲಸಿಗರ ಕುರಿತು ಡೊನಾಲ್ಡ್ ಟ್ರಂಪ್ ನೀಡಿರುವ ಅದೊಂದು ಹೇಳಿಕೆ ಹಲ್‌ಚಲ್ ಎಬ್ಬಿಸಿದೆ!

ಐಯ್ಯಯ್ಯೋ.. ಡೊನಾಲ್ಡ್ ಟ್ರಂಪ್...
ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ನಿನ್ನೆ ಅಧ್ಯಕ್ಷೀಯ ಚುನಾವಣೆಯ ಡಿಬೆಟ್ ಅಂದ್ರೆ ಮುಖಾಮುಖಿ ಚರ್ಚೆ ನಡೆಸಿದರು. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಂಪ್ರದಾಯದಂತೆ ಈ ರೀತಿ ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ನಿನ್ನೆ ಅಧ್ಯಕ್ಷೀಯ ಚುನಾವಣೆಯ ಕುರಿತು ತಮ್ಮ ತಮ್ಮ ವಾದ ಮಂಡಿಸಿದರು. ಇದೇ ಸಮಯದಲ್ಲಿ ಡೊನಾಲ್ಡ್ ಟ್ರಂಪ್, ಅಮೆರಿಕದಲ್ಲಿ ಬಂದು ನೆಲೆಸಿರುವ ವಲಸಿಗರ ಕುರಿತು ಕೆಟ್ಟದಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಅಂದಹಾಗೆ, ವಲಸಿಗರು ಸಾಕು ಪ್ರಾಣಿಗಳನ್ನೂ ತಿನ್ನುತ್ತಾರೆ. ಡೆಮಾಕ್ರಟ್‌ಗಳು ನವಜಾತ ಶಿಶುಗಳನ್ನು ಕೊಲ್ಲುವುದರ ಪರ ಇದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.
ಕಮಲಾ ಹ್ಯಾರಿಸ್ ಗೆಲುವು ಗ್ಯಾರಂಟಿ?
ಇದರ ಜೊತೆಗೆ ಇಸ್ರೇಲ್ ಬಗ್ಗೆ ಕೂಡ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆ ತಲ್ಲಣ ಸೃಷ್ಟಿಸಿದೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದು ಕಡೆ ಕಮಲಾ ಹ್ಯಾರಿಸ್ ಪರವಾಗಿ ಬೆಂಬಲವು ಕೂಡ ಹೆಚ್ಚಾಗುತ್ತಿದ್ದು, ಡೊನಾಲ್ಡ್ ಟ್ರಂಪ್ ಅವರು ಇದೀಗ ಸೋಲಿಗೆ ಮತ್ತಷ್ಟು ಹತ್ತಿರವೇ ಆಗುತ್ತಿದ್ದಾರೆ ಎನ್ನುತ್ತಿವೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಮೀಕ್ಷೆಗಳು. ಅಮೆರಿಕದ ಜನರು ಸಾವಿರಾರು ಸಮಸ್ಯೆ ಎದುರಿಸುತ್ತಿದ್ದು, ಅವರ ಸಮಸ್ಯೆ ಸರಿ ಮಾಡುವ ನಾಯಕನು ಅಧಿಕಾರಕ್ಕೆ ಬರಬೇಕಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ ಆಗಿದೆ.












Click it and Unblock the Notifications