ಯುದ್ಧ ನಿಲ್ಲಿಸಲು ರಷ್ಯಾ ಅಧ್ಯಕ್ಷ ಪುಟಿನ್‌ಗೆ ಸಲಹೆ ಕೊಟ್ಟಿದ್ದು ಯಾರು?

ಮಾಸ್ಕೋ: ಎಲ್ಲೆಲ್ಲೂ ರಕ್ತಪಾತ.. ಕಣ್ಣು ಹಾಯಿಸಿದ ಕಡೆಗೆಲ್ಲಾ ಹೆಣಗಳ ರಾಶಿ.. ಇದು ಉಕ್ರೇನ್ ಪರಿಸ್ಥಿತಿ. ರಷ್ಯಾ & ಉಕ್ರೇನ್ ಯುದ್ಧ ಶುರುವಾಗಿ ಇಂದಿಗೆ ಸರಿಯಾಗಿ 480 ದಿನ ಕಳೆದಿದೆ. ಈ ಸಂದರ್ಭದಲ್ಲೇ ಮಹತ್ವದ ಬೆಳವಣಿಗೆ ನಡೆದಿದ್ದು, ರಷ್ಯಾ ಅಧ್ಯಕ್ಷ ಪುಟಿನ್‌ಗೆ ಯುದ್ಧ ನಿಲ್ಲಿಸುವಂತೆ ಖಡಕ್ ಸಲಹೆ ಸಿಕ್ಕಿದೆ. ಹಾಗಾದ್ರೆ ಈ ಸಲಹೆ ಕೊಟ್ಟಿದ್ದು ಯಾರು? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ಕೋಳಿ ಜಗಳದ ರೀತಿ ಶುರುವಾಗಿದ್ದ ರಷ್ಯಾ & ಉಕ್ರೇನ್ ಯುದ್ಧ ಇನ್ನೇನು 500 ದಿನವನ್ನ ಕಂಪ್ಲೀಟ್ ಮಾಡಲಿದೆ. ಹೀಗಾಗಿ ಜಗತ್ತಿನಲ್ಲಿ ಭಯದ ಅಲೆ ಆವರಿಸಿದೆ. ಪುಟಿನ್ ಆಪ್ತರೇ ಈ ಯುದ್ಧದ ಬಗ್ಗೆ ಮಾತನಾಡುತ್ತಾ, ಮುಂದಿನ 10 ವರ್ಷಗಳಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ ಎಂದಿದ್ದರು. ಅಮೆರಿಕ ಕೂಡ ಶಾಂತಿ ಮಾತುಕತೆ ಬದಲಾಗಿ ಉಕ್ರೇನ್‌ಗೆ ಅಸ್ತ್ರಗಳನ್ನ ನೀಡುತ್ತಿದೆ. ಅಮೆರಿಕ & ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿವೆ (Russia Ukraine War). ಈ ಪರಿಸ್ಥಿತಿಯಲ್ಲಿ ಭಾರತವೂ ಸೇರಿ ಜಗತ್ತಿನ ಹಲವು ರಾಷ್ಟ್ರಗಳು ಯುದ್ಧ ನಿಲ್ಲಿಸಲು ಮನವಿ ಮಾಡಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ಆಫ್ರಿಕಾದ ಈ ರಾಷ್ಟ್ರ!

This African country suggested Russia to stop the war against Ukraine

ರಷ್ಯಾ ಸ್ನೇಹಿತನಿಂದ ಹೊಸ ಮನವಿ!

ದಕ್ಷಿಣ ಆಫ್ರಿಕಾ ಯಾರ ಬಳಿಯೂ ಹೆಸರು ಕೆಡಿಸಿಕೊಂಡಿಲ್ಲ. ಎಲ್ಲಾ ರಾಷ್ಟ್ರಗಳ ಜೊತೆಗೆ ಉತ್ತಮ ಸಂಬಂಧ ಹೊಂದಿದೆ. ಅದ್ರಲ್ಲೂ ರಷ್ಯಾ ಜೊತೆ ದಕ್ಷಿಣ ಆಫ್ರಿಕಾಗೆ ಉತ್ತಮವಾದ ಸಂಬಂಧ ಇದೆ. ಹೀಗಿದ್ದರೂ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ರಾಮಪೋಸಾ ಸಲಹೆ ಒಂದನ್ನು ನೀಡಿದ್ದಾರೆ. ನಿನ್ನೆ ರಷ್ಯಾದಲ್ಲಿ ಪುಟಿನ್ ಭೇಟಿ ಮಾಡಿ ಮಾತುಕತೆ ನಡೆಸಿದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ರಾಮಪೋಸಾ, ಯುದ್ಧ ನಿಲ್ಲಿಸಿ. ಶಾಂತಿ ಮಾತುಕತೆ ಮೂಲಕ ಎಲ್ಲಾ ಬಗೆಹರಿಸಿಕೊಳ್ಳಿ ಎಂದಿದ್ದಾರೆ. ಆದರೆ ಇದಕ್ಕೆ ಪುಟಿನ್ ಉತ್ತರ ಹೇಗಿತ್ತು ಗೊತ್ತಾ? ಮುಂದೆ ಓದಿ.

ನಾವು ರೆಡಿ, ಉಕ್ರೇನ್ ಒಪ್ಪಿಲ್ಲ!

ಹೌದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯುದ್ಧ ನಿಲ್ಲಿಸಲು ಮತ್ತು ಶಾಂತಿ ಮಾತುಕತೆ ನಾವು ಸಿದ್ಧ ಎಂದಿದ್ದಾರೆ. ಆದರೆ ಉಕ್ರೇನ್ ಅಧ್ಯಕ್ಷ ಮಾತುಕತೆಗೆ ಒಪ್ಪುತ್ತಿಲ್ಲ. ಹೀಗಾಗಿಯೇ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಮನವರಿಕೆ ಮಾಡಿದ್ದಾರೆ. ಈ ಮೂಲಕ ಯುದ್ಧ ಇನ್ನಷ್ಟು ದಿನ ಮುಂದುವರಿಯುವ ಮುನ್ಸೂಚನೆ ಸಿಕ್ಕಂತಾಗಿದೆ. ಹಾಗೇ ಉಕ್ರೇನ್ ಜನರಿಗೆ ಸಾವು, ನೋವಿನ ಭೀತಿ ಕೂಡ ಎದುರಾಗಿದೆ. ಆಫ್ರಿಕಾ ರಾಷ್ಟ್ರಗಳು ಈ ವಿಚಾರದಲ್ಲಿ ಒಗ್ಗಟ್ಟಿನಿಂದ ಯುದ್ಧ ನಿಲ್ಲಿಸಲು ಮುಂದಾಗಿವೆ. ಕೆಲವು ದಿನಗಳ ಹಿಂದಷ್ಟೇ ಉಕ್ರೇನ್‌ಗೂ ದಕ್ಷಿಣ ಆಫ್ರಿಕಾ ಅಧ್ಯಕ್ಷ ರಾಮಪೋಸಾ ಭೇಟಿ ನೀಡಿ ಚರ್ಚೆ ನಡೆಸಿದ್ದರು.

3 ಲಕ್ಷ ಕೋಟಿ ರೂಪಾಯಿ ನೆರವು

ಇಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ರಷ್ಯಾ ಮತ್ತು ಉಕ್ರೇನ್ ಯುದ್ಧವೇ ಜಗತ್ತಿನ 3ನೇ ಮಹಾಯುದ್ಧ ಎನ್ನಬಹುದು. ಏಕೆಂದರೆ ಸುದೀರ್ಘ ಯುದ್ಧಕ್ಕೆ ರಷ್ಯಾ ತೊಡೆತಟ್ಟಿ ನಿಂತಿರುವ ಸಂದರ್ಭದಲ್ಲೇ, ನ್ಯಾಟೋ ಮತ್ತು ಅಮೆರಿಕ ಕೂಡ ಉಕ್ರೇನ್ ಬೆನ್ನಿಗೆ ನಿಂತು ಯುದ್ಧಕ್ಕೆ ಸಾಥ್ ಕೊಡಲು ಮುಂದಾಗಿವೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ ಅದೆಷ್ಟು ವರ್ಷ ನಡೆದರೂ ಸಹಾಯ ಸಿಗಲಿದೆ. ಈಗಾಗಲೇ ಅಮೆರಿಕ 3 ಲಕ್ಷ ಕೋಟಿಯಷ್ಟು ನೆರವು ನೀಡಿ ಉಕ್ರೇನ್ ಬೆನ್ನಿಗೆ ನಿಂತಿದೆ. ಮುಂದೆಯೂ ಈ ರೀತಿ ಸಹಾಯ ಮಾಡಲು ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಹೀಗೆ ರಷ್ಯಾ ಮತ್ತು ಉಕ್ರೇನ್ ಪರಿಸ್ಥಿತಿ ಮತ್ತೆ ಬೂದಿ ಮುಚ್ಚಿದ ಕೆಂಡವಾಗಿದೆ. ಹೇಗಾದ್ರೂ ಯುದ್ಧ ನಿಲ್ಲಸಬೇಕು ಅಂತಾ ಆಫ್ರಿಕಾ ದೇಶಗಳ ನಾಯಕರು ಶಪಥ ಮಾಡಿದ್ದರು. ಆದರೆ ಈಗ ಪುಟಿನ್ ಬೇರೆಯದ್ದೇ ವಿವರಣೆ ನೀಡಿದ್ದಾರೆ. ಯುದ್ಧ ನಿಲ್ಲಿಸಲು ನಾವು ಸಿದ್ಧ, ಇಲ್ಲಿ ಉಕ್ರೇನ್ ಮಾತುಕತೆ ಒಪ್ಪದೆ ಇರುವುದೇ ಸಮಸ್ಯೆ ಅಂತಿದ್ದಾರೆ. ಹೀಗಾಗಿ ಯುದ್ಧ ಇನ್ನಷ್ಟು ಕಗ್ಗಂಟಾಗಿ ಪರಿಣಮಿಸುತ್ತಿದ್ದು, ಜನತ್ತು ಮತ್ತಷ್ಟು ವಿನಾಶ ನೋಡಲು ಸಿದ್ಧವಾಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+