Donald Trump: ಚೀನಾ ಜೊತೆ ಕಿತ್ತಾಟ ಬಿಟ್ಟು ಸ್ನೇಹ ಬೆಸೆಯಲು ಹೊರಟ ಟ್ರಂಪ್!

ಡೊನಾಲ್ಡ್ ಟ್ರಂಪ್ ಇದೀಗ ಸ್ಮಾರ್ಟ್ ಆಗಿ ಯೋಚನೆ ಮಾಡುತ್ತಿದ್ದು, ತಿಕ್ಕಾಟದ ಬದಲಾಗಿ ಶಾಂತಿಯ ಮಾರ್ಗಕ್ಕೆ ಬದಲಾಗುತ್ತಿದ್ದಾರೆ. ಚೀನಾ ಜೊತೆಗೆ ನೇರವಾಗಿ ತೆರಿಗೆ ಯುದ್ಧ ಮಾಡಿ ತಲ್ಲಣ ಎಬ್ಬಿಸಲು ಸಜ್ಜಾಗಿದ್ದ ಡೊನಾಲ್ಡ್ ಟ್ರಂಪ್ ಇದೀಗ ತಮ್ಮ ವರಸೆ ಬದಲಾಯಿಸಿದ್ದಾರೆ. ಅದರಲ್ಲೂ ಒಬ್ಬರ ಮೇಲೆ ಮತ್ತೊಬ್ಬರು ಭಾರಿ ಪ್ರಮಾಣದ ತೆರಿಗೆ ಹೇರಿಕೆ ಮಾಡುತ್ತಿದ್ದರು, ಇದರ ಪರಿಣಾಮ ಜಾಗತಿಕ ಆರ್ಥಿಕತೆ ಮೇಲೆ ಕೂಡ ಭಾರಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇತ್ತು. ಹೀಗಿದ್ದಾಗಲೇ ದೊಡ್ಡ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ.

ಅಷ್ಟಕ್ಕೂ ಅಮೆರಿಕದಲ್ಲಿ ಟ್ರಂಪ್ ಆಡಳಿತ ಬಂದ ನಂತರ ತೆರಿಗೆ ಯುದ್ಧ ಎಂಬ ಹೊಸ ತಿಕ್ಕಾಟ ಶುರುವಾಗಿ ತಲೆನೋವು ಎದುರಾಗಿತ್ತು. ತೆರಿಗೆ ಯುದ್ಧದ ಮುಂದುವರಿದ ಭಾಗವಾಗಿ ಡೊನಾಲ್ಡ್ ಟ್ರಂಪ್ ಸರ್ಕಾರ ಚೀನಾ ವಿರುದ್ಧ ಮತ್ತಷ್ಟು ಸೇಡಿನ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಚೀನಾ ಕೂಡ ಹೆಚ್ಚಿನ ತೆರಿಗೆಯನ್ನ ಹಾಕಿ ದೊಡ್ಡಣ್ಣನಿಗೆ ಶಾಕ್ ಕೊಟ್ಟಿತ್ತು. ಇದೇ ಕಾರಣಕ್ಕೆ ಅಮೆರಿಕ ಕೂಡ ಮತ್ತಷ್ಟು ತೆರಿಗೆ ಹಾಕುತ್ತಿತ್ತು. ಹೀಗೆ ಇಬ್ಬರ ನಡುವೆ ಘೋರವಾಗಿ ನಡೆಯುತ್ತಿದ್ದ ತೆರಿಗೆ ವಾರ್ ಇದೀಗ ಸೈಲೆಂಟ್ ಆಗಿದೆ. ಅಮೆರಿಕ & ಚೀನಾ ಹೊಂದಾಣಿಕೆ ಮಾರ್ಗದಲ್ಲಿ ವ್ಯಾಪಾರ ಮತ್ತು ವಹಿವಾಟು ನಡೆಸಲು ಮುಂದಾಗಿವೆ.

The United States has reduced tariffs on small parcels imported from Chinese companies

ಟ್ರಂಪ್ ಸೈಲೆಂಟ್ ಅಗಿದ್ದು ಯಾಕೆ?

ಚೀನಾ ವಿಚಾರದಲ್ಲಿ ರೊಚ್ಚಿಗೆದ್ದು ಕೂತಿದ್ದ ಡೊನಾಲ್ಡ್ ಟ್ರಂಪ್ ದಿಢೀರ್ ಸೈಲೆಂಟ್ ಆಗಿ, ತೆರಿಗೆ ವಿಚಾರದಲ್ಲಿ ತಣ್ಣಗಾಗಲು ಕಾರಣ ಏನು? ಅನ್ನೋ ಚರ್ಚೆ ನಡೆಯುತ್ತಿದೆ. ಇದಕ್ಕೆಲ್ಲಾ ಉತ್ತರ ಏನು ಅಂದ್ರೆ ಚೀನಾ ಇದೀಗ ಅಮೆರಿಕದ ಉದ್ಯಮಿಗಳಿಗೆ ಅನಿವಾರ್ಯವಾಗಿದೆ. ಈ ಕಾರಣಕ್ಕೆ ಅಮೆರಿಕ ಕೂಡ ಅಳೆದು ತೂಗಿ ಹೊಸ ನಿರ್ಧಾರ ಕೈಗೊಂಡಿದೆ. ಅಕಸ್ಮಾತ್ ಇದೇ ರೀತಿಯಾಗಿ ತೆರಿಗೆ ವಾರ್ ನಡೆದರೆ ಭವಿಷ್ಯದಲ್ಲಿ ದೊಡ್ಡ ನಷ್ಟ ಅಮೆರಿಕಗೆ ಆಗಲಿದೆ, ಹೀಗೆ ಮುಂದೆ ಆಗುವ ಅನಾಹುತ ತಪ್ಪಿಸಲು ಟ್ರಂಪ್ ಹೊಸ ನಿರ್ಧಾರ ಕೈಗೊಂಡಿದ್ದಾರೆ.

ಕೋಪ ಮರೆತ ಡೊನಾಲ್ಡ್ ಟ್ರಂಪ್!

ಚೀನಾ ವಿರುದ್ಧ ಈ ರೀತಿ ಹೆಚ್ಚಿನ ತೆರಿಗೆ ಹಾಕುತ್ತಾ, ಟ್ಯಾಕ್ಸ್ ವಾರ್ ಮಾಡುತ್ತಿರುವುದು ಕೊನೆಗೆ ಅಮೆರಿಕ ಬುಡಕ್ಕೇ ಸಮಸ್ಯೆ ಉಂಟು ಮಾಡುವ ಭಯ ಕಾಡ್ತಿದೆ. ಯಾಕೆ ಅಂದ್ರೆ, ಚೀನಾ ರಫ್ತು ಮಾಡುವ ವಸ್ತುಗಳು ಇಲ್ಲದೆ ಅಮೆರಿಕ ಜೀವನವನ್ನ ನಡೆಸಲು ಆಗಲ್ಲ. ಅಷ್ಟು ಪ್ರಮಾಣದಲ್ಲೇ ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ವಹಿವಾಟುಗಳು ನಡೆಯುತ್ತಾ ಬಂದಿವೆ. ಇಂತಹ ಸಮಯದಲ್ಲಿ ದಿಢೀರ್ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಚೀನಾ ವಿರುದ್ಧ ಕೋಪ ಮರೆತಿದ್ದು ಸ್ನೇಹ ರಾಗ ಹಾಡುತ್ತಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+