ಕೊರೊನಾ ಸೋಂಕು ಮೆದುಳಿನ ಮೇಲೂ ಪರಿಣಾಮ ಬೀರಬಲ್ಲದು
ಕೊರೊನಾ ಸೋಂಕು ಕೇವಲ ಶ್ವಾಸಕೋಶ, ಹೃದಯದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ ಎಂಬುದನ್ನು ಅಧ್ಯಯನದ ವರದಿಯೊಂದು ತಿಳಿಸಿದೆ.
ಕೊರೊನಾ ಸೋಂಕು ಶ್ವಾಸಕೋಶ, ಹೃದಯ ಹಾಗೂ ಮೆದುಳಿನ ಮೇಲೆ ಕೂಡ ಪರಣಾಮ ಬೀರಬಲ್ಲದು ಎಂಬುದು ತಿಳಿದುಬಂದಿದೆ.
ಸೋಂಕು ಮೆದುಳನ್ನು ಕೂಡ ಹೈಜಾಕ್ ಮಾಡುತ್ತದೆ. ಸೆಪ್ಟೆಂಬರ್ 8 ರಂದು ಪಬ್ಲಿಷ್ ಆದ ವರದಿಯಲ್ಲಿ ಸಾರ್ಸ್ ಕೋವ್ 2 ನೇರವಾಗಿ ಮೆದುಳಿನ ಕೋಶಗಳು ಹಾಗೂ ನರಕೋಶಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲದೆ ಬೇರೆ ಬೇರೆ ರೀತಿಯಲ್ಲಿ ಮೆದುಳನ್ನು ನಿಷ್ಕ್ರಿಯಗೊಳಿಸುತ್ತದೆ.

ಸಾಕಷ್ಟು ಮಂದಿ ರೋಗಿಗಳನ್ನು ಪರೀಕ್ಷಿಸಲಾಗುತ್ತಿದ್ದು, ಯಾವ ಹಂತದಲ್ಲಿರುವ ರೋಗಿಗಳ ಮೆದುಳಿನ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ. ಹಾಗೆಯೇ ಸೋಂಕು ತಗುಲಿ ಎಷ್ಟು ದಿನದ ಬಳಿಕ ಮೆದುಳಿನ ಮೇಲ ಇದು ದುಷ್ಪರಿಣಾಮ ಬೀರಬಲ್ಲದು ಎಂಬ ಅಧ್ಯಯನ ಇನ್ನೂ ನಡೆಯುತ್ತಿದೆ.
ಕೊರೊನಾ ಸೋಂಕಿನಿಂದ ಮೃತಪಟ್ಟ ಮೂವರ ಮೆದುಳಿನಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಕೊರೊಣಾ ಸೋಂಕಿಗೆ ತುತ್ತಾಗಿರುವ ಇಲಿಯ ಮೇಲೆ ಪ್ರಯೋಗ ನಡೆಸಲಾಗಿದೆ. ಇದು ಮೆದುಳಿನ ಅಂಗಾಂಶಗಳ ಮೇಲೆ ಪರಿಣಾಮ ಬೀರುವುದು ಸಾಬೀತಾಗಿದೆ.
ಇಲಿಗಳ ಮೇಲೆ ನಡೆದ ಸಂಶೋಧನೆಯಲ್ಲಿ ಸೋಂಕು ಮೆದುಳಿಗೆ ತಗುಲುವುದು ಸಾಬೀತಾಗಿದೆ. ಆದರೆ ಎಲ್ಲಾ ಮಾನವನ ಕೊರೊನಾ ಪ್ರಕರಣಗಳಲ್ಲೂ ಇದೇ ರೀತಿ ಆಗಬಹುದು ಎಂಬುದಿನ್ನೂ ಸಾಬೀತಾಗಿಲ್ಲ.
ಮನುಷ್ಯನಿಗೆ ವಾಸನೆ ಗ್ರಹಿಕೆ ಮತ್ತು ರುಚಿಯನ್ನು ಕಳೆದುಕೊಳ್ಳುವ ರೀತಿಯಲ್ಲಿಯೇ ಶ್ವಾಸಕೋಶದ ಮೂಲಕ ವೈರಸ್ ಮೆದುಳನ್ನೂ ತಲುಪಬಹುದು ಎಂದು ಲೈವ್‌ಸೈನ್ಸ್ ವರದಿ ಮಾಡಿದೆ.












Click it and Unblock the Notifications