Get Updates
Get notified of breaking news, exclusive insights, and must-see stories!

ಜೀಸಸ್ ''ಗೇ'' ಎಂದ ನೆಟ್ ಫ್ಲಿಕ್ಸ್ ಚಿತ್ರದ ವಿರುದ್ಧ ಕ್ರೈಸ್ತರ ಕಿಡಿ

ಬೆಂಗಳೂರು, ಡಿಸೆಂಬರ್ 16: "The First Temptation of Christ" ಇದು ಪೋರ್ಚುಗೀಸ್ ಭಾಷೆಯ ಚಿತ್ರವಾಗಿದ್ದು ನೆಟ್ ಫ್ಲಿಕ್ಸ್ ನ ಬ್ರೆಜಿಲ್ ನಿಂದ ಬಿಡುಗಡೆಯಾಗಿದೆ. ಡಿಸೆಂಬರ್ 03ರಂದು ಆನ್ ಲೈನ್ ನಲ್ಲಿ ಕಾಣಿಸಿಕೊಂಡ ಈ ಚಿತ್ರ ಈಗ ವಿಶ್ವದೆಲ್ಲೆಡೆ ಕ್ರೈಸ್ತರನ್ನು ಕೆರಳುವಂತೆ ಮಾಡಿದೆ. ಆಪ್ ಆಧಾರಿತ ವಿಡಿಯೋ, ಚಿತ್ರ ಪ್ರದರ್ಶಿಸುವ ನೆಟ್ ಫ್ಲಿಕ್ಸ್ ನಿಂದ ಈ ಚಿತ್ರವನ್ನು ಕೂಡಲೇ ತೆಗೆದು ಹಾಕುವಂತೆ ಆಗ್ರಹಿಸಿ ಸುಮಾರು 1.5 ಮಿಲಿಯನ್ ಮಂದಿ ಆನ್ ಲೈನ್ ಅಭಿಯಾನ ಆರಂಭಿಸಿದ್ದಾರೆ.

ಜೀಸಸ್ (ಯೇಸು ಕ್ರಿಸ್ತ) ಹಾಗೂ ಆತನ ಗೆಳೆಯ ಓರ್ಲಾಂಡೋ ಇಬ್ಬರು ಸಲಿಂಗಿಗಳಾಗಿದ್ದರು. ಮೇರಿ ಮಾದಕ ವ್ಯಸನಿಯಾಗಿದ್ದಳು ಎಂದು ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರವನ್ನು ತೆಗೆದು ಹಾಕುವಂತೆ ಚೇಂಜ್.ಆರ್ಗ್ ನಲ್ಲಿ ಅಭಿಯಾನ ಆರಂಭಿಸಲಾಗಿದ್ದು, 1,529,504 ಸಹಿ ಬಿದ್ದಿದೆ. ನೆಟ್ ಫ್ಲಿಕ್ಸ್ ಕೂಡಲೇ ಈ ಚಿತ್ರವನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಪೋರ್ಟಾ ಡೋಸ್ ಫಂಡೋಸ್ ಕಾಮಿಡಿ ಸ್ಕೆಚ್ ಗ್ರೂಪಿನಿಂದ ಹೊರ ಬಂದಿರುವ ಈ ಚಿತ್ರದಿಂದ ಕ್ರೈಸ್ತರ ಧಾರ್ಮಿಕ ಭಾವನೆ, ನಂಬಿಕೆಗೆ ಧಕ್ಕೆಯುಂಟಾಗಿದೆ ಎಂದು ಹೇಳಲಾಗಿದೆ.

The First Temptation of Christ: Netflix faces backlash over Gay Jesus, weed-smoking Mary

ಸದ್ಯಕ್ಕೆ ಈ ಚಿತ್ರ ಭಾರತದಲ್ಲಿ ಪ್ರಸಾರದಲ್ಲಿರುವ ನೆಟ್ ಫ್ಲಿಕ್ಸ್ ಆವೃತ್ತಿಯಲ್ಲಿ ಲಭ್ಯವಿಲ್ಲ. ಆದರೂ ಭಾರತೀಯ ಕ್ರೈಸ್ತರ ವಾಯ್ಸ್ ನ ಅಧ್ಯಕ್ಷ ಅಬ್ರಾಹಂ ಮಥಾಯಿ ಈ ಬಗ್ಗೆ ನೆಟ್ ಫ್ಲಿಕ್ಸ್ ಸಿಇಒ ರೀಡ್ ಹೇಸ್ಟಿಂಗ್ಸ್ ಗೆ ಪತ್ರ ಬರೆದು ಇದು ಅಶ್ಲೀಲ, ಅಸಭ್ಯ, ಅನಾಗರಿಕ ಕ್ರಮವಾಗಿದೆ, ಕ್ರೈಸ್ತ ಸಮುದಾಯದ ಭಾವನೆ ಧಕ್ಕೆಯಾಗಿದೆ ಎಂದಿದ್ದಾರೆ. ಬಹಿರಂಗವಾಗಿ ಕ್ರೈಸ್ತರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಸುಮಾರು 16.2 ಮಿಲಿಯನ್ ಯೂಟ್ಯೂಬ್ ಚಂದಾದಾರರನ್ನು ಹೊಂದಿರುವ 9.3 ಮಿಲಿಯನ್ ಹಿಂಬಾಲಕರನ್ನು ಫೇಸ್ಬುಕ್ ನಲ್ಲಿ ಪೋರ್ಟಾ ಡೋಸ್ ಫಂಡೋಸ್ ಕಾಮಿಡಿ ಸ್ಕೆಚ್ ಗ್ರೂಪ್ ಹೊಂದಿದೆ. ಇಷ್ಟೆಲ್ಲ ಗೊಂದಲ, ಗಲಾಟೆಯಾಗುತ್ತಿದ್ದರೂ ನೆಟ್ ಫ್ಲಿಕ್ಸ್ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

READ IN ENGLISH

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+