ಹೊಸ ವರ್ಷಾಚರಣೆ: ಅಳಿಯನನ್ನು ನಿರ್ಲಕ್ಷಿಸಿದ್ದಕ್ಕೆ 6 ಮಂದಿ ಹತ್ಯೆ

ಬ್ಯಾಂಕಾಕ್, ಜನವರಿ 1: ಥೈಲ್ಯಾಂಡ್‌ನಲ್ಲಿ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಹೆಂಡತಿಯ ಕುಟುಂಬದವರು ತನ್ನನ್ನು ಸ್ವಾಗತಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕುಟುಂಬ ಸದಸ್ಯರನ್ನು ಸೇರಿಸಿ ಆರು ಜನರನ್ನು ಅಳಿಯ ಗುಂಡಿಟ್ಟು ಕೊಂಡಿದ್ದಾನೆ.

ಥೈಲ್ಯಾಂಡ್‌ ನ ಸುಚೀಪ್ ಎನ್ನುವ ವ್ಯಕ್ತಿ ಕಂಠಪೂರ್ತಿ ಕುಡಿದು ತನ್ನ ಹೆಂಡತಿ ಕುಟುಂಬದ ಜೊತೆ ಹೊಸ ವರ್ಷಾಚರಣೆಗೆ ಮುಂದಾಗಿದ್ದ, ಈ ಸಂದರ್ಭದಲ್ಲಿ ಹೆಂಡತಿಯ ಮನೆಗೆ ಸುಚೀಪ್ ಪ್ರವೇಶಿಸಿದಾಗ ಯಾರೊಬ್ಬರೂ ಸ್ವಾಗತಿಸಲಿಲ್ಲ, ಇದರಿಂದ ಮುಜಗರ ಹಾಗೂ ಕೋಪಕ್ಕೊಳಗಾದ ಸುಚೀಪ್ ಮದ್ಯದ ಅಮಲಿನಲ್ಲಿ ತನ್ನ ಪಿಸ್ತೂಲ್ ತೆಗೆದು ಗುಂಡು ಹಾರಿಸಿದ್ದಾನೆ.

Thailand man guns down 6 family members at New Year party

ವಿಪರ್ಯಾಸವೆಂದರೆ ಈ ಗುಂಡಿಗೆ ಆತನ 9 ವರ್ಷದ ಮಗ ಹಾಗೂ 6 ವರ್ಷದ ಮಗಳು ಕೂಡ ಬಲಿಯಾಗಿದ್ದಾರೆ. ಪಾರ್ಟಿಯಲ್ಲಿದ್ದ ಇತರ ನಾಲ್ವರನ್ನೂ ಕೊಂದು ಅಂತಿಮವಾಗಿ ತಾನು ಶೂಟ್ ಮಾಡಿಕೊಂಡಿದ್ದಾನೆ.

ಚೆಂಪಾನ್ ಪ್ರದೇಶದಲ್ಲಿ ಇದು ನಡೆದಿದೆ.ಸುಚೀಪ್ ಪಾರ್ಟಿಗೆ ಆಗಮಿಸಿ ಕೇವಲ 10 ನಿಮಿಷದಲ್ಲಿ ಈ ಘಟನೆ ನಡೆದಿದೆ. ಪಾರ್ಟಿ ಬ್ಯೂಟಿ ಪಾರ್ಲರ್ ಒಂದರಲ್ಲಿ ನಡೆಯುತ್ತಿತ್ತು. 47-71 ವರ್ಷದೊಳಗಿರುವ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+