Donald Trump: ಡೊನಾಲ್ಡ್ ಟ್ರಂಪ್ ಜೊತೆ ಎಲಾನ್ ಮಸ್ಕ್ ಕಿರಿಕ್, ಟೆಸ್ಲಾ ಕಂಪನಿಗೆ 12 ಲಕ್ಷ ಕೋಟಿ ನಷ್ಟ!
ಡೊನಾಲ್ಡ್ ಟ್ರಂಪ್ & ಎಲಾನ್ ಮಸ್ಕ್ ನಡುವಿನ ಸ್ನೇಹ ಸಂಬಂಧ ಹಾಳಾಗಿ ಹೋಗಿದ್ದು, ಹೀನಾಯ ಪರಿಸ್ಥಿತಿ ಇದೀಗ ಎದುರಾಗಿದೆ. ಡೊನಾಲ್ಡ್ ಟ್ರಂಪ್ & ಎಲಾನ್ ಮಸ್ಕ್ ಇಬ್ಬರೂ ಒಗ್ಗಟ್ಟಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಎದುರಿಸಿ ಎದುರಾಳಿ ಪಡೆಯನ್ನ ಧೂಳ್ ಮಾಡಿದ್ದರು. ಆದರೆ ಟ್ರಂಪ್ ಅವರ ತೆರಿಗೆ ಯುದ್ಧದ ನಂತರ ಇಬ್ಬರ ನಡುವೆ ಭಾರಿ ದೊಡ್ಡ ಕಿರಿಕ್ ಆಗಿ ಇಬ್ಬರೂ ಈಗ ದೂರವಾಗಿದ್ದಾರೆ. ಆದರೆ ಇದರ ನಷ್ಟವನ್ನು ಅನುಭವಿಸಿದ್ದು ಮಾತ್ರ ಟೆಸ್ಲಾ ಕಂಪನಿ!
ಹೌದು, ಡೊನಾಲ್ಡ್ ಟ್ರಂಪ್ ಕೂಡ ಒಬ್ಬ ಉದ್ಯಮಿ ಹಾಗೂ ಎಲಾನ್ ಮಸ್ಕ್ ಕೂಡ ಉದ್ಯಮದ ಮೂಲಕ ಇಡೀ ಜಗತ್ತಿನ ನಂಬರ್ 1 ಶ್ರೀಮಂತ ಆಗಿದ್ದು. ಹೀಗೆ ಇಬ್ಬರು ಹಾಲು & ಜೇನು ರೀತಿ ಇದ್ದರು. ಆದರೆ ದಿಢೀರ್ ಏನಾಯ್ತೋ ಏನೋ ಗೊತ್ತಿಲ್ಲ, ಇಬ್ಬರ ನಡುವೆ ಕಿರಿಕ್ ಶುರುವಾಗಿ ಬಡಿದಾಡುತ್ತಿದ್ದಾರೆ. ಅಲ್ಲದೆ ಟ್ರಂಪ್ ಸಹವಾಸ ನನಗೆ ಬೇಡ ಅಂತಾನೇ ಇದೀಗ ಎಲಾನ್ ಮಸ್ಕ್ ಹೊರಗೆ ಬಂದಿದ್ದಾರೆ. ಇದನ್ನು ಕಂಡು ಕೆರಳಿ ಕೆಂಡವಾಗಿರುವ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ನೀಡಿ ಎಲಾನ್ ಮಸ್ಕ್ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಇದೇ ಕಾರಣಕ್ಕೆ ಇದೀಗ ಎಲಾನ್ ಮಸ್ಕ್ ಅವರ ಕಂಪನಿ ಅಲ್ಲಾಡಿ ಹೋಗಿದೆ.

ಟೆಸ್ಲಾ ಕಂಪನಿಗೆ 12 ಲಕ್ಷ ಕೋಟಿ ನಷ್ಟ!
ಹೌದು, ಟ್ರಂಪ್ ಅವರ ತೆರಿಗೆ ಕಡಿತ ಮತ್ತು ಖರ್ಚು ಮಸೂದೆ ವಿರುದ್ಧ ಎಲಾನ್ ಮಸ್ಕ್ ರೊಚ್ಚಿಗೆದ್ದು ಕೂತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಇದೇ ವಿಚಾರವಾಗಿ ಎಲಾನ್ ಮಸ್ಕ್ & ಡೊನಾಲ್ಡ್ ಟ್ರಂಪ್ ನಡುವೆ ವಾರ್ ಕೂಡ ಶುರುವಾಗಿತ್ತು. ಹೀಗೆ ಎಲಾನ್ ಮಸ್ಕ್ & ಡೊನಾಲ್ಡ್ ಟ್ರಂಪ್ ತಿಕ್ಕಾಟ ಜೋರಾಗಿದ್ದ ಸಮಯದಲ್ಲೇ, ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ. ಎಲಾನ್ ಮಸ್ಕ್ ಅವರಿಂದ ತುಂಬಾನೇ ನಿರಾಶೆಗೊಂಡಿದ್ದೇನೆ ಅಂತಾ ಕೂಡ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಹಾಗೇ ಟ್ರಂಪ್ ಕೊಟ್ಟ ಮತ್ತೊಂದು ಹೇಳಿಕೆ ಇಡೀ ಎಲಾನ್ ಮಸ್ಕ್ ಉದ್ಯಮ ಅಲ್ಲಾಡಿ ಹೋಗುವಂತೆ ಮಾಡಿದೆ.
ಟ್ರಂಪ್ & ಮಸ್ಕ್ ಯುದ್ಧ ಶುರು?
ಎಲಾನ್ ಮಸ್ಕ್ ಅವರು ಇಡೀ ಜಗತ್ತಿನಲ್ಲಿ ಹಲವು ಉದ್ಯಮ ಹೊಂದಿದ್ದು, ಈ ಪೈಕಿ ಸ್ಟಾರ್‌ಲಿಂಕ್ ಮತ್ತು ರಾಕೆಟ್ ತಯಾರು ಮಾಡುವ ಸಂಸ್ಥೆ ಸ್ಪೇಸ್‌ಎಕ್ಸ್ ಭಾರಿ ದೊಡ್ಡ ಆದಾಯ ತಂದು ಕೊಡುತ್ತಿವೆ. ಆದ್ರೆ ಇದೀಗ ಟ್ರಂಪ್ ಅವರು ಈ ಬಗ್ಗೆ ಪರೋಕ್ಷ ಎಚ್ಚರಿಕೆ ನೀಡಿದ್ದು, ಸ್ಟಾರ್‌ಲಿಂಕ್ ಮತ್ತು ಸ್ಪೇಸ್‌ಎಕ್ಸ್ ವಿರುದ್ಧ ಕ್ರಮದ ಬಗ್ಗೆ ಕೂಡ ಪ್ರಸ್ತಾಪ ಮಾಡಿದ್ದರು. ಹೀಗೆಲ್ಲಾ ಟ್ರಂಪ್ ಹೇಳಿಕೆ ನೀಡಿದ ನಂತರ ಸಂಚಲನ ಸೃಷ್ಟಿಯಾಗಿದ್ದು, ಟೆಸ್ಲಾ ಕಂಪನಿ ಷೇರು ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. ಹೀಗಾಗಿ, ಅಮೆರಿಕದಲ್ಲಿ ಇದೀಗ ಸಂಚಲನ ಸೃಷ್ಟಿಯಾಗಿದೆ. ಅಮೆರಿಕದ ಬಜೆಟ್‌ನಲ್ಲಿ ಶತಕೋಟಿ ಡಾಲರ್ ಹಣವನ್ನು ಉಳಿತಾಯ ಮಾಡಲು ಎಲಾನ್ ಮಸ್ಕ್ ಅವರ ಸಂಸ್ಥೆಗಳಿಗೆ ನೀಡಿರುವ ಸಬ್ಸಿಡಿಯನ್ನು ಮೊದಲು ಕಡಿತ ಮಾಡಬೇಕು ಎನ್ನುವ ರೀತಿ ಟ್ರಂಪ್ ಹೇಳಿದ್ದಾರೆ. ಇದು ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಗೆ ಆಘಾತವನ್ನೇ ನೀಡಿದೆ.












Click it and Unblock the Notifications