ತೈವಾನ್ ವಿಚಾರಕ್ಕೆ ಚೀನಾ VS ಅಮೆರಿಕ ಯುದ್ಧ ಗ್ಯಾರಂಟಿ?

ವಾಷಿಂಗ್ಟನ್: ಚೀನಾ & ಅಮೆರಿಕ ಮಧ್ಯೆ ಎಲ್ಲವೂ ಸರಿಯಿಲ್ಲ. ಮುಖ್ಯವಾಗಿ ತೈವಾನ್ ಬಗ್ಗೆ ಅಮೆರಿಕದ ನಿಲುವು ಚೀನಾಗೆ ಸಹಿಸಲು ಆಗ್ತಿಲ್ಲ. ಹಾಗೇ ಅಮೆರಿಕ & ತೈವಾನ್ ವ್ಯಾಪಾರ ಒಪ್ಪಂದದ ಬಳಿಕ ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಯಾವ ಕ್ಷಣದಲ್ಲಿ ಎರಡೂ ದೇಶಗಳು ಯುದ್ಧ ಆರಂಭಿಸುತ್ತವೋ ಎಂಬ ಭೀತಿ ಆವರಿಸಿದೆ.

ಭಾನುವಾರ ಅಮೆರಿಕ ಒಂದು ವಿಡಿಯೋ ರಿಲೀಸ್ ಮಾಡಿ, ಚೀನಾ ಸೇನೆಯ ನೌಕೆ ತಮ್ಮ ನೌಕೆಗೆ ಅಡ್ಡ ಬಂದಿತ್ತು. ಡಿಕ್ಕಿ ಹೊಡೆಯುವಾಗಲೇ ಮಿಸ್ ಆಗಿದೆ ಅಂತಾ ಆರೋಪಿಸಿತ್ತು. ಈ ಘಟನೆ ನಡೆಯುವುದಕ್ಕೂ 3-4 ದಿನಗಳ ಮೊದಲು, ಅಮೆರಿಕ ಸೇನೆ ಯುದ್ಧ ವಿಮಾನ ಹಾರಿಸುತ್ತಿದೆ ಅಂತಾ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾ ವಿಮಾನ ಅಟ್ಯಾಕ್ ಮಾಡಲು ಬಂದಿತ್ತು ಎಂದು ಅಮೆರಿಕ ಆರೋಪಿಸಿತ್ತು. ಹೀಗೆ ಮೇಲಿಂದ ಮೇಲೆ ಚೀನಾ & ಅಮೆರಿಕ ನಡುವೆ ಕಿರಿಕ್ ನಡೆಯುವಾಗಲೇ, ಚೀನಾಗೆ ಎಚ್ಚರಿಕೆ ಕೊಟ್ಟಿದ್ದಾನೆ ದೊಡ್ಡಣ್ಣ (China Taiwan War).

Tensions rise between America & China in Taiwan matter

140 ಮೀಟರ್ ದೂರದಲ್ಲಿ ಮಿಸ್!

ತೈವಾನ್ ಜಲಸಂಧಿ ವಿಚಾರದಲ್ಲಿ ಅಮೆರಿಕ ಜೊತೆ ಚೀನಾ ಪದೇ ಪದೆ ಕಿರಿಕ್ ಮಾಡ್ತಿದೆ. ಈ ಜಾಗ ನಮ್ಮದು ಅಂತಾ ಚೀನಾ ಹೇಳುತ್ತಲೇ ಇದೆ. ಆದ್ರೆ ತೈವಾನ್ ಜಲಸಂಧಿಯ ಬಳಿ ಕೆನಡಾ ಯುದ್ಧನೌಕೆ ಮತ್ತು ಅಮೆರಿಕದ ಯುದ್ಧನೌಕೆ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದವು. ಅಲ್ಲಿಗೆ ದಿಢೀರ್ ಚೀನಾ ನೌಕೆ ಎಂಟ್ರಿ ಕೊಟ್ಟಿದೆ. ಅಲ್ಲದೆ ಅಮೆರಿಕದ ಯುದ್ಧ ನೌಕೆಯನ್ನು ಹಿಂದಿಕ್ಕಿ ಮುಂದೆ ಸಾಗಿದೆ. ಮತ್ತೊಂದ್ಕಡೆ 140 ಮೀಟರ್ ಮುಂದೆ ಸಾಗಿದ್ದಲ್ಲದೆ ಎದುರು ನಿಂತು ಹಠಾತ್ ಅಡ್ಡತಿರುಗಿದೆ ಎಂದು ಅಮೆರಿಕ ಸೇನೆ ಆರೋಪ ಮಾಡುತ್ತಿದೆ. ಆಗ ನಮ್ಮ ಮತ್ತು ಚೀನಾ ಯುದ್ಧನೌಕೆ ಡಿಕ್ಕಿ ಆಗುತ್ತಿದ್ದವು ಎಂಬುದು ಈಗ ಅಮೆರಿಕದ ಆರೋಪ.

ವಿಮಾನ ನುಗ್ಗಿಸಿ ಶಾಕ್ ಕೊಟ್ಟಿತ್ತು

ಚೀನಾ ಸೇನೆಗೆ ಸೇರಿದ ಯುದ್ಧ ವಿಮಾನ ಅಮೆರಿಕದ ಯುದ್ಧ ವಿಮಾನದ ಸಮೀಪದಲ್ಲೇ ನುಗ್ಗಿ ಬಂದ ಆರೋಪ ಕಳೆದ ವಾರ ಕೇಳಿಬಂದಿತ್ತು. ಚೀನಾದ ಜಲಗಡಿ ವಿಚಾರದಲ್ಲಿ ಅಮೆರಿಕ ಮೇಲಿಂದ ಮೇಲೆ ಕಿರಿಕ್ ಮಾಡುತ್ತಲೇ ಇದೆ. ಕಳೆದ ವಾರ ಸಾವಿರಾರು ಅಡಿ ಎತ್ತರದಲ್ಲಿ ತನ್ನ RC-135 ಯುದ್ಧ ವಿಮಾನ ಹಾರಿಸಿ ಶಾಕ್ ನೀಡಿತ್ತು ಅಮೆರಿಕ. ಹೀಗೆ ದಕ್ಷಿಣ ಚೀನಾ ಸಮುದ್ರದ ಮೇಲೆ ಅಮೆರಿಕದ ಯುದ್ಧ ವಿಮಾನ ಹಾರಾಟ ನಡೆಸುತ್ತಿರುವುದನ್ನು ಕಂಡ ಚೀನಾ, ಕೂಡಲೇ ಆ ಜಾಗಕ್ಕೆ ತನ್ನ J-16 ಫೈಟರ್ ಜೆಟ್ ಕಳುಹಿಸಿ ಶಾಕ್ ನೀಡಿತ್ತು. ಈ ಜಗಳ ನಡೆದು ಕೇವಲ 2-3 ದಿನ ಕಳೆದಿಲ್ಲ, ಆಗಲೇ ಮತ್ತೊಮ್ಮೆ ಕಿರಿಕ್ ನಡೆದಿದೆ.

ಚೀನಾ ವಿರುದ್ಧ ಯುದ್ಧ ಸಾರುತ್ತಾ ಅಮೆರಿಕ?

ಅಮೆರಿಕ ಸೇನೆ ತೈವಾನ್ ಪರ ನಿಂತಿದೆ. ಚೀನಾ ಅದೇ ವಿಚಾರ ಹಿಡಿದು ತೈವಾನ್ ನಾಯಕರಿಗೆ ಎಚ್ಚರಿಕೆ ನೀಡುತ್ತಿದೆ. ಬೀಜಿಂಗ್ (Beijing) ಪದೇ ಪದೆ ತೈವಾನ್‌ಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಇದೇ ಸಂದರ್ಭದಲ್ಲಿ ತೈವಾನ್‌ಗೆ ಅಮೆರಿಕ ಸಹಾಯ ಮಾಡುತ್ತಾ, ವ್ಯಾಪಾರದಲ್ಲಿ ಒಪ್ಪಂದ ಮಾಡಿಕೊಳ್ಳುತ್ತಿದೆ. ಈ ಕಾರಣಕ್ಕೆ ಚೀನಾ ಮೈಕೊಡವಿ ನಿಂತು, ಅಮೆರಿಕ ಸೇನೆ ವಿರುದ್ಧ ಜಗಳಕ್ಕೆ ಬರುತ್ತಿದೆ. ಇದೇ ವೇಳೆ ಅಮೆರಿಕ ಕೂಡ ಎಚ್ಚರಿಕೆ ಸಂದೇಶ ನೀಡುತ್ತಿದೆ. ಹೀಗಾಗಿ ಅಮೆರಿಕ ಮತ್ತು ಚೀನಾ ನಡುವೆ ಭೀಕರ ಯುದ್ಧ ನಡೆಯುತ್ತಾ? ಅನ್ನೋ ಡೌಟ್ ಇಡೀ ಜಗತ್ತಿನಾದ್ಯಂತ ಶುರುವಾಗಿದೆ.

Tensions rise between America & China in Taiwan matter

ಒಟ್ನಲ್ಲಿ ಈ ವಿಚಾರದಲ್ಲಿ ಯಾರದ್ದು ತಪ್ಪೋ, ಯಾರದ್ದು ಸರಿಯೋ ಗೊತ್ತಿಲ್ಲ. ಆದರೆ ಈ ಸಂದರ್ಭದಲ್ಲಿ ಯುದ್ಧ ಬೇಡ ಅನ್ನೋದೆ ಜಗತ್ತಿನ ನಿರ್ಧಾರ. ಯಾಕಂದ್ರೆ ಕೊರೊನಾ ಕಂಟಕದಿಂದ ಜಗತ್ತು ಈಗ ತಾನೆ ಸುಧಾರಿಸಿಕೊಳ್ಳುತ್ತಿದೆ. ತೀವ್ರ ಆರ್ಥಿಕ ಸಂಕಷ್ಟ ಕೂಡ ಜಗತ್ತನ್ನು ಕಾಡುತ್ತಿದೆ. ಈ ಹೊತ್ತಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧವು ಆರಂಭ ಆಗಿದೆ. ಪರಿಸ್ಥಿತಿ ಹೀಗಿದ್ದಾಗ ಚೀನಾ ಮತ್ತು ಅಮೆರಿಕ ಕೂಡ ಜಗಳಕ್ಕೆ ನಿಂತರೆ ಪ್ರಪಂಚದ ಭವಿಷ್ಯ ಏನಾಗಬೇಡ? ಅನ್ನೋದೆ ಸಾಮಾನ್ಯ ಜನರ ಪ್ರಶ್ನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+