ಇಸ್ರೇಲ್ ವಿರುದ್ಧ ರಿವೇಂಜ್ ಆರಂಭಿಸಿದ ಇರಾನ್?

ಇರಾನ್ ಈಗ ಸೇಡಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದು, ಇಸ್ರೇಲ್ ವಿರುದ್ಧ ಹೊಸ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಇತ್ತೀಚೆಗೆ ಇರಾನ್ ನೆಲದಲ್ಲೇ ಹಮಾಸ್ ಮುಖ್ಯಸ್ಥನನ್ನು ಹತ್ಯೆ ಮಾಡಿರುವ ಆರೋಪ ಇಸ್ರೇಲ್ ವಿರುದ್ಧ ಕೇಳಿಬಂದಿತ್ತು. ಆ ನಂತರ ಇರಾನ್ ಮತ್ತಷ್ಟು ರೊಚ್ಚಿಗೆದ್ದು ನಿಂತಿದೆ. ಇದೇ ಕಾರಣಕ್ಕೆ, ಇದೀಗ ರಿವೇಂಜ್ ತೆಗೆದುಕೊಳ್ಳಲು ಪರೋಕ್ಷವಾಗಿ ಇರಾನ್ ಮುಂದಾಗಿದ್ದು ಇಸ್ರೇಲ್ ಸೈನಿಕರ ಮಾರಣಹೋಮ ಶುರುವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಇಡೀ ಪ್ರಪಂಚಕ್ಕೆ ಅಗತ್ಯ ಇರುವ ಶಕ್ತಿ ನೀಡುವ ಮಧ್ಯಪ್ರಾಚ್ಯ ಈಗ ಹೊತ್ತಿ ಉರಿಯುತ್ತಿದೆ. ಒಂದು ಕಡೆ ಇಸ್ರೇಲ್ ಸೇನೆ ಇದೀಗ ಗಾಜಾ ಪಟ್ಟಿ ನಗರದ ಮೇಲೆ ದಾಳಿ ಮಾಡುತ್ತಿದೆ, ಮತ್ತೊಂದು ಕಡೆ ಇರಾನ್ & ಇಸ್ರೇಲ್ ಕೂಡ ಭೀಕರ ಯುದ್ಧಕ್ಕೆ ಸಿದ್ಧವಾದಂತೆ ಕಾಣುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವ ಲಕ್ಷಣ ಗೋಚರ ಆಗುತ್ತಿದೆ. ಇಂತಹ ಸಮಯದಲ್ಲೇ ಇರಾನ್ ಇದೀಗ ತನ್ನ ಸೇಡು ತೀರಿಸಿಕೊಳ್ಳಲು ಇಸ್ರೇಲ್ ಸೈನಿಕರನ್ನೇ ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾದರೆ, ಅಸಲಿಗೆ ಇಲ್ಲಿ ಆಗಿದ್ದು ಏನು? ಮುಂದೆ ಓದಿ.

Tensions Have Been Raised Between Israel And Iran After This Incident

ಇಸ್ರೇಲ್ ಸೈನಿಕರ ಮೇಲೆ ದಾಳಿ?

ಇರಾನ್ ವಿರುದ್ಧ ಇಸ್ರೇಲ್ ಪದೇ ಪದೇ ದಾಳಿ ಮಾಡುತ್ತಿದೆ ಎಂಬ ಆರೋಪದ ನಡುವೆಯೇ ಇದೀಗ, ಹಿಜ್ಬುಲ್ಲಾ ಸಂಘಟನೆ ಮೂಲಕ ಇರಾನ್ ಸೇಡು ತೀರಿಸಿಕೊಳ್ಳಲು ಮುಂದಾಗಿದೆಯಾ? ಎಂಬ ಅನುಮಾನ ಮೂಡಿದೆ. ಯಾಕಂದ್ರೆ ಇದೀಗ ಇಸ್ರೇಲ್ ಸೈನಿಕರ ಮೇಲೆ & ಇಸ್ರೇಲ್‌ನ ಸೇನೆ ವಿರುದ್ಧ ಹಿಜ್ಬುಲ್ಲಾ ಸಂಘಟನೆ ದಾಳಿ ಆರಂಭ ಮಾಡಿದ್ದು, ಈ ಮೂಲಕ ಹಮಾಸ್‌ನ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆಗೆ ರಿವೇಂಜ್ ತೆಗೆದುಕೊಳ್ಳುತ್ತಿದೆ ಎಂಬ ಆರೋಪವು ಕೇಳಿಬಂದಿದೆ.

ಯುದ್ಧ ನಿಲ್ಲಿಸಲು ಸರ್ವ ಪ್ರಯತ್ನ

ಒಂದ್ಕಡೆ ಇರಾನ್ & ಇಸ್ರೇಲ್ ನಡುವೆ ಬೆಂಕಿ ಹೊತ್ತಿಕೊಳ್ಳುವ ಮೊದಲು, ಇಸ್ರೇಲ್ ಮತ್ತು ಗಾಜಾ ಪಟ್ಟಿಯ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಿಸಲು ಅಮೆರಿಕ ಪ್ಲಾನ್ ಮಾಡುತ್ತಿದೆ. ಇಸ್ರೇಲ್ & ಗಾಜಾ ನಡುವಿನ ಯುದ್ಧ ನಿಲ್ಲಿಸಿದರೆ ಒಂದಷ್ಟು ಸಮಸ್ಯೆ ತಣ್ಣಗಾಗುತ್ತೆ. ಇದೇ ಕಾರಣಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಇಸ್ರೇಲ್‌ಗೆ ಪ್ರಯಾಣ ಬೆಳೆಸಿದ್ದು, ಶೀಘ್ರದಲ್ಲೇ ಶಾಂತಿ ಮಾತುಕತೆ ಮಾಡಿಸಿ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗಿದೆ. ಜಾಗತಿಕವಾಗಿ ಕೂಡ ಈ ಯುದ್ಧ ಭಾರಿ ದೊಡ್ಡ ಸಮಸ್ಯೆಗೆ ಕಾರಣವಾಗುತ್ತಿದೆ.

ಹೀಗಾಗಿ ಇಸ್ರೇಲ್ & ಗಾಜಾ ಯುದ್ಧಕ್ಕೆ ಬ್ರೇಕ್ ಹಾಕಿ ಶಾಂತಿ ಕಾಪಾಡಿದರೆ ಸಮಸ್ಯೆ ಬಗೆಹರಿಯುತ್ತೆ ಎಂಬ ಚಿಂತನೆ ಇದೆ. ಹೀಗಾಗಿಯೇ ಅಮೆರಿಕ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಆದರೆ ಯುದ್ಧ ನಿಲ್ಲಿಸಲು ಇಸ್ರೇಲ್ ಮತ್ತು ಹಮಾಸ್ ಒಪ್ಪಿಕೊಳ್ಳುತ್ತವಾ? ಎಂಬ ಪ್ರಶ್ನೆ ಕೂಡ ಮೂಡಿದೆ. ಈ ಯುದ್ಧ ನಿಂತ ನಂತರ ಇಸ್ರೇಲ್ & ಇರಾನ್ ನಡುವೆ ಯುದ್ಧ ಶುರುವಾದ್ರೆ ಏನು ಕಥೆ? ಅನ್ನೋ ಭಯ ಕೂಡ ಈಗ ಆವರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+