ಜಯಲಲಿತಾ ಕೇಸ್ ಬಿಟ್ಟುಬಿಡಿ, ಸಿದ್ದುಗೆ ಎನ್ನಾರೈ ತಮಿಳರ ಸಲಹೆ
ನ್ಯೂಯಾರ್ಕ್, ಜೂ.1: ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಅಗತ್ಯಕ್ಕಿಂತ ಹೆಚ್ಚಿನ ಅವಧಿ ಜೈಲಿನಲ್ಲಿ ಕಳೆದಿದ್ದಾರೆ. ಅಕ್ರಮ ಆಸ್ತಿ ಪ್ರಕರಣವನ್ನು ವೃಥಾ ಎಳೆದಾಡುವುದರಲ್ಲಿ ಅರ್ಥವಿಲ್ಲ, ಜಯಲಲಿತಾ ಕೇಸ್ ಬಿಟ್ಟುಬಿಡಿ ಎಂದು ತಮಿಳ್ಸ್ ಫಾರ್ ಒಬಾಮಾ ಎಂಬ ಸಂಘಟನೆ ಕರೆ ನೀಡಿದೆ.
ಜಯಲಲಿತಾ ಅವರಿಗೆ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್ ನ್ಯಾ. ಕುಮಾರಸ್ವಾಮಿ ಅವರನ್ನು ಹಾಡಿಹೊಗಳಿರುವ ಎನ್ನಾರೈ ಸಂಘಟನೆ 'Tamils for Obama' ಈ ಕೇಸ್ ಸುಪ್ರೀಂಕೋರ್ಟ್ ತನಕ ಮತ್ತೊಮ್ಮೆ ಎಳೆದಾಡುವುದು ಅನಗತ್ಯ ಎಂದು ಸಂಘಟನೆ ವಕ್ತಾರರು ಹೇಳಿದ್ದಾರೆ. [ಜಯಲಲಿತಾ ಪ್ರಕರಣ Timeline]

1994ರಲ್ಲಿ ಮಾರ್ಬೆಲ್ ಫ್ಲೋರಿಂಗ್ ಟೈಲ್ಸ್ ಬೆಲೆ ಪ್ರತಿ ಚದರ ಮೀಟರ್ ಗೆ 100ರು ನಷ್ಟಿತ್ತು. ಅದರೆ, ಕಾಲ ಕಳೆದಂತೆ ಈ ಬೆಲೆ ಐದು ಸಾವಿರ ರು ಪ್ರತಿ ಚದರ ಮೀಟರ್ ತನಕ ಏರಿಕೆ ಕಂಡಿದೆ. [ಜಯಾ ಕೇಸ್ : ಇದೇ ವಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ]
ಹೀಗಾಗಿ 1994ರಲ್ಲಿ ಯಾರಾದರೂ ಈಗಿನ ಬೆಲೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ 100 ರು ನಿಂದ 150 ರು ಇದ್ದರೆ ಹೆಚ್ಚು, ಹೀಗಾಗಿ ಜಯಲಲಿತಾ ಅವರ ಅಸ್ತಿ ವಿವರ ಸಲ್ಲಿಕೆ ವ್ಯತ್ಯಾಸ ಇದೇ ಎನ್ನಲಾಗದು.
ತಮಿಳುನಾಡಿನ ಅರ್ಥಿಕ ಪರಿಸ್ಥಿತಿ ಸುಧಾರಣೆ, ಬಡತನ ನಿರ್ಮೂಲನೆಗೆ ಜಯಲಲಿತಾ ಅವರು ಸಾಕಷ್ಟು ಯೋಜನೆ ಕೈಗೊಂಡಿದ್ದಾರೆ. ಶ್ರೀಲಂಕಾದಲ್ಲಿರುವ ತಮಿಳರ ರಕ್ಷಣೆ ಕೂಡಾ ಅವರಿಂದ ಮಾತ್ರ ಸಾಧ್ಯ ಎಂದು ತಮಿಳು ಅಮೆರಿಕನ್ ರಾಜಕೀಯ ಸಂಘಟನೆ ಹೇಳಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಜಯಲಲಿತಾ ವಿರುದ್ಧ ಮೇಲ್ಮನವಿ ಸಲ್ಲಿಸಬಾರದು ಎಂದು ಆಗ್ರಹಿಸಿದೆ. ತಮಿಳ್ಸ್ ಫಾರ್ ಒಬಾಮಾ ವೆಬ್ ಸೈಟ್ ನೋಡಿ.












Click it and Unblock the Notifications