ತಾಲಿಬಾನಿಗಳ ಮದುವೆ: ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಇದೆಂಥಾ ಹಿಂಸೆ!?

ನವದೆಹಲಿ, ಆಗಸ್ಟ್ 13: ಅಫ್ಘಾನಿಸ್ತಾನದಲ್ಲಿ ಸಣ್ಣ ಪುಟ್ಟ ನಗರಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿರುವ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿ ಮೀರಿದೆ. ದೇಶದ ಹಲವೆಡೆ ನಗರಗಳನ್ನು ಸ್ವಾಧೀನಪಡಿಸಿಕೊಂಡ ಉಗ್ರ ಸಂಘಟನೆಯು ತಮ್ಮ ಸಂಘಟನೆಯ ಉಗ್ರರನ್ನು ಮದುವೆ ಆಗುವಂತೆ ಅವಿವಾಹಿತ ಮಹಿಳೆಯರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

Recommended Video

      ತಾಲಿಬಾನ್ ಉಗ್ರರ ಜೊತೆ ಮದುವೆಯಾಗುವಂತೆ ಅಫ್ಘನ್ ಮಹಿಳೆಯರಿಗೆ ಚಿತ್ರಹಿಂಸೆ | Oneindia Kannada

      ಅಫ್ಘಾನಿಸ್ತಾನದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ತಾಲಿಬಾನ್ ಉಗ್ರರು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದಾರೆ. ತಾಲಿಬಾನ್ ಉಗ್ರರ ದಾಳಿಯಿಂದ ಬೆದರಿದ ಸಾರ್ವಜನಿಕರು ಪ್ರಾಣ ರಕ್ಷಿಸಿಕೊಳ್ಳುವುದಕ್ಕಾಗಿ ಕಾಬೂಲ್ ನತ್ತ ಧಾವಿಸುತ್ತಿದ್ದಾರೆ. ಇನ್ನೊಂದು ದಿಕ್ಕಿನಲ್ಲಿ ಮಹಿಳೆಯರ ಮೇಲೆ ಉಗ್ರರ ಕ್ರೌರ್ಯ ಹೆಚ್ಚಾಗುತ್ತಿದೆ.

      "ಅವಿವಾಹಿತ ಮಹಿಳೆಯರು ತಮ್ಮ ಸಂಘಟನೆ ಉಗ್ರರನ್ನು ಮದುವೆಯಾಗುವಂತೆ ತಾಲಿಬಾನ್ ಒತ್ತಡ ಹೇರುತ್ತಿದೆ. ಆ ಮೂಲಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದು, ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ," ದಿ ವಾಲ್ ಸ್ಟ್ರೀಟ್ ಜನರಲ್ ವರದಿ ಮಾಡಿದೆ.

      ಗೆಲುವಿನ ಪ್ರತಿಜ್ಞೆ ಮಾಡಿರುವ ತಾಲಿಬಾನ್ ಉಗ್ರರು

      ಗೆಲುವಿನ ಪ್ರತಿಜ್ಞೆ ಮಾಡಿರುವ ತಾಲಿಬಾನ್ ಉಗ್ರರು

      'ಅಫ್ಘಾನಿಸ್ತಾನದಲ್ಲಿ ಗೆಲುವು ಸಾಧಿಸಿಯೇ ತೀರುತ್ತೇವೆ ಎಂದು ತಾಲಿಬಾನ್ ಉಗ್ರ ಸಂಘಟನೆಯು ಪ್ರತಿಜ್ಞೆ ಮಾಡಿದೆ. ದೇಶದ ಸಾರ್ವಜನಿಕರು ಹಾಗೂ ಭದ್ರತಾ ಪಡೆ ಸಿಬ್ಬಂದಿ ಯಾವುದೇ ರೀತಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ದೇಶವು ಉಗ್ರರ ನಿಯಂತ್ರಣಕ್ಕೆ ಸಿಲುಕದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರದ ಕ್ರಮಗಳು ಆ ರೀತಿಯಲ್ಲಿಲ್ಲ,' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ತಾಲಿಬಾನ್ ವಶಕ್ಕೆ ಪಡೆದಿರು ಪ್ರದೇಶಗಳಲ್ಲಿ ಅವಿವಾಹಿತ ಮಹಿಳೆಯರು ಸಂಘಟನೆಯ ಉಗ್ರರನ್ನು ಮದುವೆ ಆಗುವಂತೆ ಒತ್ತಡ ಹೇರಲಾಗುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ, ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯಲ್ಲಿ ಉಲ್ಲೇಖಿಸಿದ ಅಂಶವನ್ನು ತಾಲಿಬಾನ್ ನಿರಾಕರಿಸಿದೆ.

      ಅಫ್ಘಾನ್ ನಲ್ಲಿ ಬಿಗಿಯಾದ ಬಟ್ಟೆ ಧರಿಸಿದ್ದಕ್ಕೆ ಕೊಲೆ!

      ಅಫ್ಘಾನ್ ನಲ್ಲಿ ಬಿಗಿಯಾದ ಬಟ್ಟೆ ಧರಿಸಿದ್ದಕ್ಕೆ ಕೊಲೆ!

      ಅಫ್ಘಾನಿಸ್ತಾನದ ಉತ್ತರ ಬಾಲ್ಖ್ ಪ್ರಾಂತ್ಯದಲ್ಲಿ ಬಿಗಿಯಾದ ಬಟ್ಟೆ ಧರಿಸಿದರು ಹಾಗೂ ಒಬ್ಬರೇ ಒಬ್ಬ ಪುರುಷರು ನಂಟು ಹೊಂದಿರಲಿಲ್ಲ ಎಂಬ ಕಾರಣಕ್ಕೆ ಯುವತಿಯೊಬ್ಬಳನ್ನು ತಾಲಿಬಾನ್ ಅಮಾನುಷವಾಗಿ ಕೊಂದು ಹಾಕಿದೆ. "ತಾಲಿಬಾನ್ ಉಗ್ರ ಸಂಘಟನೆಯ ಸ್ವಾಧೀನದಲ್ಲಿ ಇರುವ ಸಮರ್ ಕ್ವಾಂದ್ ಗ್ರಾಮದಲ್ಲಿ ಮಹಿಳೆಯನ್ನು ಹತ್ಯೆಗೈಯ್ಯಲಾಗಿದೆ," ಎಂದು ಇತ್ತೀಚಿಗಷ್ಟೇ ಅಫ್ಘಾನಿಸ್ತಾನದ ರೆಡಿಯೋ ಅಜಾದಿ ಸುದ್ದಿ ಸಂಸ್ಥೆಯು ವರದಿ ಮಾಡಿತ್ತು.

      ಪೊಲೀಸರು ನೀಡಿದ ಮಾಹಿತಿ ಪ್ರಕಾರ, ತಾಲಿಬಾನ್ ಉಗ್ರರ ಕೈಗೆ ಸಿಕ್ಕು ಹತ್ಯೆಯಾದ 21 ವರ್ಷದ ಯುವತಿಯನ್ನು ನಜಾನಿನ್ ಎಂದು ಗುರುತಿಸಲಾಗಿದೆ. ಮಜರ್-ಇ-ಶರೀಫ್ ತಲುಪುವುದಕ್ಕಾಗಿ ಮನೆಯಿಂದ ಹೊರಟ ಸಂದರ್ಭದಲ್ಲಿ ಯುವತಿ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ಸಮಯದಲ್ಲಿ ನಜಾನಿನ್ ಬುರ್ಖಾ (ಮುಖ ಮತ್ತು ದೇಹವನ್ನು ಆವರಿಸುವ ಮುಸುಕು) ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತಾಲಿಬಾನ್ ಉಗ್ರ ಸಂಘಟನೆಯ ಅಧೀನದಲ್ಲಿ ಇರುವ ಅಫ್ಘಾನಿಸ್ತಾನದ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಯುವತಿಯನ್ನು ಸಾರ್ವಜನಿಕವಾಗಿ ಉದ್ಯೋಗಕ್ಕೆ ಹೋಗುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಇದರ ಮಧ್ಯೆ ಕೆಲಸಕ್ಕಾಗಿ ಹೊರಟ ಮಹಿಳೆಯ ಮೇಲೆ ದಾಳಿ ನಡೆಸಿ ಹತ್ಯೆಗೈದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

      ಮಹಿಳೆಯರ ಮೇಲೆ ದೌರ್ಜನ್ಯ ಎಸಗಿಲ್ಲ ಎಂದ ಸಂಘಟನೆ

      ಮಹಿಳೆಯರ ಮೇಲೆ ದೌರ್ಜನ್ಯ ಎಸಗಿಲ್ಲ ಎಂದ ಸಂಘಟನೆ

      ತಾಲಿಬಾನ್ ಉಗ್ರ ಸಂಘಟನೆಯ ವಕ್ತಾರ ಜಬೀವುಲ್ಲಾ ಮುಜಾಹಿದ್, "ನಮ್ಮ ಸಂಘಟನೆಯು ಯಾವುದೇ ಖೈದಿಗಳನ್ನು ಕೊಂದಿಲ್ಲ. ಏಕೆಂದರೆ ಅದರಿಂದ ಸಂಘಟನೆಯ ತತ್ವಗಳ ಉಲ್ಲಂಘನೆ ಆಗುತ್ತದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ತಾಲಿಬಾನ್ ಮಹಿಳೆಯರನ್ನು ಮದುವೆಗೆ ಒತ್ತಾಯಿಸುತ್ತಿದೆ ಎಂಬ ಆರೋಪಗಳು ಸುಳ್ಳು. ಅಂತಹ ಕ್ರಮಗಳು ಇಸ್ಲಾಂ ನಿಯಮಗಳಿಗೆ ವಿರುದ್ಧವಾಗಿರುತ್ತವೆ ಮತ್ತು ಸಾಂಸ್ಕೃತಿಕ ಸಂಪ್ರದಾಯವನ್ನು ಉಲ್ಲಂಘಿಸುತ್ತವೆ," ಎಂದು ಹೇಳಿದ್ದಾರೆ.

      ತಾಲಿಬಾನ್ ಸಂಘಟನೆ ಎದುರು ಭದ್ರತಾ ಸಿಬ್ಬಂದಿ ಶರಣು!

      ತಾಲಿಬಾನ್ ಸಂಘಟನೆ ಎದುರು ಭದ್ರತಾ ಸಿಬ್ಬಂದಿ ಶರಣು!

      ಅಫ್ಘಾನಿಸ್ತಾನದ ಬದಾಖಾನ್ ಪ್ರಾಂತ್ಯವನ್ನು ವಶಪಡಿಸಿಕೊಂಡ ನಂತರದಲ್ಲಿ ತಾಲಿಬಾನ್ ಸಂಘಟನೆಯ ಹಿರಿಯ ಧಾರ್ಮಿಕ ಅಧಿಕಾರಿಯಾದ ಮೌಲ್ವಿ ಅಬ್ದುಲ್ ಖಾದಿರ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಸರ್ಕಾರದ ಯೋಧರು ತಮ್ಮ ಅಪರಾಧಗಳನ್ನು ಒಪ್ಪಿಕೊಳ್ಳಬೇಕು. ಅಂದಾಗ ಮಾತ್ರ ಇಸ್ಲಾಮಿಕ್ ಎಮೆರೇಟ್ಸ್ ಧ್ವಜದ ಅಡಿಯಲ್ಲಿ ಮುಸ್ಲಿಂರಾಗಿ ಬದುಕುವುದಕ್ಕೆ ಸಾಧ್ಯವಿದೆ," ಎಂದು ಎಚ್ಚರಿಕೆ ನೀಡಿದ್ದರು.

      ಅಫ್ಘಾನಿಸ್ತಾನದ ಹಲವು ನಗರಗಳಲ್ಲಿಲ್ಲಿ ತಾಲಿಬಾನ್ ಹಿಡಿತ

      ಅಫ್ಘಾನಿಸ್ತಾನದ ಹಲವು ನಗರಗಳಲ್ಲಿಲ್ಲಿ ತಾಲಿಬಾನ್ ಹಿಡಿತ

      ತಾಲಿಬಾನ್ ಉಗ್ರ ಸಂಘಟನೆಯು ಅಫ್ಘಾನಿಸ್ತಾನದ ಹಲವು ನಗರಗಳ ಮೇಲೆ ಹಿಡಿತ ಸಾಧಿಸಿಕೊಳ್ಳುತ್ತಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸೇನೆಯು ಸ್ವದೇಶಕ್ಕೆ ಹಿಂತಿರುಗಿದ ಬೆನ್ನಲ್ಲೇ ಅಫ್ಘಾನ್ ನಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದೆ. ಗುರುವಾರವಷ್ಟೇ ದೇಶದ ಅತಿದೊಡ್ಡ ನಗರ ಕಂದಾಹಾರ್ ನಲ್ಲಿ ರಾಜ್ಯಪಾಲದ ಕಚೇರಿ ಮತ್ತು ಇತರೆ ಆಡಳಿತ ಕಚೇರಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ನಗರವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಈವರೆಗೂ ರಾಷ್ಟ್ರದಲ್ಲಿ 12 ಪ್ರಮುಖ ನಗರಗಳ ಮೇಲೆ ತಾಲಿಬಾನ್ ಉಗ್ರ ಸಂಘಟನೆಯು ಹಿಡಿತ ಸಾಧಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+