Get Updates
Get notified of breaking news, exclusive insights, and must-see stories!

ಮುಟ್ಟಿದ್ರೆ ಸರಿ ಇರಲ್ಲ: ಚೀನಾ ವಿರುದ್ಧ ತೈವಾನ್ ಗರಂ!

ತೈಪೆ: ಚೀನಾ & ತೈವಾನ್ ಘರ್ಷಣೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಚೀನಾ ಸೇನೆ ದ್ವೀಪ ರಾಷ್ಟ್ರದ ಸುತ್ತಲೂ ಬಿಡಾರ ಹೂಡಿ ಎಚ್ಚರಿಸಿದೆ. ಆದರೆ ಇಷ್ಟು ದಿನಗಳ ಕಾಲ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದ ತೈವಾನ್, ಈಗ ದಿಢೀರ್ ಚೀನಾಗೆ ವಾರ್ನಿಂಗ್ ಕೊಟ್ಟಿದೆ. ತೈವಾನ್ ಗಡಿಗೆ ನುಗ್ಗಿರುವ ಚೀನಾ ಡ್ರೋನ್‌ಗಳನ್ನೇ ತೈವಾನ್ ಮೇಲಿನ ಮೊದಲ ದಾಳಿ ಎಂದಿದ್ದಾರೆ ದ್ವೀಪ ರಾಷ್ಟ್ರದ ರಕ್ಷಣಾ ಸಚಿವ.

ಚೀನಾ ತನ್ನ ಸುತ್ತಮುತ್ತಲ ದೇಶಗಳು ಅಮೆರಿಕದ ಸಹವಾಸ ಮಾಡಿದರೆ ಸಹಿಸುವುದಿಲ್ಲ. ಅದ್ರಲ್ಲೂ ತೈವಾನ್ ನಮ್ಮದೇ ಜಾಗ ಎಂದು ಹೇಳಿಕೊಂಡು ಬರುತ್ತಿರುವ ಚೀನಾ, ಅಮೆರಿಕದ ಜೊತೆ ತೈವಾನ್ ಸ್ನೇಹ ಬೆಳೆಸಿದರೆ ಉರಿದು ಬೀಳುತ್ತದೆ. ಆದರೆ ಈ ಬಾರಿ ಕಿತ್ತಾಟ, ಘರ್ಷಣೆ ಜೋರಾಗಿಯೇ ಇದೆ. ಪರಿಣಾಮ ತೈವಾನ್ ಸುತ್ತಲೂ ತನ್ನ ಸೇನೆಯನ್ನ ನಿಯೋಜನೆ ಮಾಡಿ, ಪ್ರತಿ ಕ್ಷಣವೂ ತೈವಾನ್ ಮೇಲೆ ಹದ್ದಿನ ಕಣ್ಣು ಇಟ್ಟು ಕೂತಿದೆ. ಪರಿಣಾಮ ತೈವಾನ್‌ಗೆ ಅಮೆರಿಕ ಬೆಂಬಲ ನೀಡಿದ್ದು, ಎರಡೂ ರಾಷ್ಟ್ರಗಳ ನಡುವೆ ಯುದ್ಧದ ಭೀತಿ ನಿರ್ಮಾಣವಾಗಿದೆ.

Taiwans defence chief Chiu Kuo-cheng warns China about military drill

ತೈವಾನ್ ನೀಡಿತು ಖಡಕ್ ಎಚ್ಚರಿಕೆ!

ಅಂದಹಾಗೆ ಕೆಲ ದಿನಗಳಿಂದ ತೈವಾನ್ ಸುತ್ತಲೂ ಚೀನಾ ಹರಾಡಿಸುತ್ತಿರುವ ಮಾನವ ರಹಿತ ಯುದ್ಧ ವಿಮಾನಗಳು, ಅಂದ್ರೆ ಡ್ರೋನ್ ಭೀತಿ ಸೃಷ್ಟಿಸಿವೆ. ಹೀಗಾಗಿ ತೈವಾನ್‌ನ ರಕ್ಷಣಾ ಸಚಿವ ಚೂ ಕೋ-ಚೆಂಗ್ ಗಂಭೀರ ಮೆಸೇಜ್ ಒಂದನ್ನ ಚೀನಾಗೆ ನೀಡಿ, ಪರೋಕ್ಷವಾಗಿ ಕೆಣಕಿದ್ದಾರೆ. ಈ ಮೂಲಕ ನಮ್ಮ ತಂಟೆಗೆ ಬರಬೇಡಿ ಎಂದು ತೈವಾನ್ ಎಚ್ಚರಿಕೆ ರವಾನಿಸಿದೆ. ತೈವಾನ್ ಜಲಸಂಧಿ ವಿಚಾರದಲ್ಲಿ ಚೀನಾ ಮೂಗು ತೂರಿಸುತ್ತಿರುವುದು ಸರಿ ಬರುವುದಿಲ್ಲ ಎಂದಿದೆ ತೈವಾನ್. ಈ ಕೇಳಿಕೆ ಡ್ರ್ಯಾಗನ್ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ತೈವಾನ್ ಗಡಿಯಲ್ಲಿ ಚೀನಾ ಭಯಂಕರ!

ಚೀನಾ ತೈವಾನ್ ಗಡಿಗೆ ನುಗ್ಗಿಸುತ್ತಿರುವ ಪ್ರತಿಯೊಂದು ಡ್ರೋನ್ ಕೂಡ ವಿನಾಶಕಾರಿಯಾಗಿದೆ. ಈ ಹಿಂದೆ ಎಸ್‌ಯು-30, ಎರಡು ಜೆ-16 ಮತ್ತು ಟಿಬಿ-001 ರವಾನಿಸಿತ್ತು. ನಂತರ Z-9 ಹೆಲಿಕಾಪ್ಟರ್‌ ಹಾರಾಡಿಸಿ ಭಯಹುಟ್ಟಿಸಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ BZK-005 ಡ್ರೋನ್‌ಗಳ ಪರಿಚಯ ಮಾಡಿಸಿತ್ತು. ಚೀನಾ ಬಳಿ ಇರುವ ಈ ಡ್ರೋನ್ ಎಷ್ಟು ಬಲಶಾಲಿ ಎಂದರೆ, ಸಾಮಾನ್ಯ ಡ್ರೋನ್‌ಗಳಿಂತ ಅತಿಹೆಚ್ಚು ದೂರ ಒಂದೇ ಬಾರಿಗೆ ಕ್ರಮಿಸುವ ಸಾಮರ್ಥ್ಯ ಹೊಂದಿದ್ದು, ಇದು ತೈವಾನ್ ಜನರ ನಿದ್ದೆಗೆಡಿಸಿದೆ.

Taiwans defence chief Chiu Kuo-cheng warns China about military drill

ತೈವಾನ್ ಬಗ್ಗೆ ಚೀನಾ ರಿಯಾಕ್ಷನ್ ಹೇಗಿರುತ್ತೆ?

ರಷ್ಯಾ & ಉಕ್ರೇನ್ ಒಬ್ಬರಿಗೊಬ್ಬರು ಬಾಂಬ್ ಎಸೆಯುತ್ತಾ ಶೆಲ್ ದಾಳಿ ಮಾಡುತ್ತಾ ವಿನಾಶದ ಮುನ್ಸೂಚನೆ ನೀಡುತ್ತಿವೆ. ಇತ್ತ ತೈವಾನ್ ಮತ್ತು ಚೀನಾ ಗಡಿಯಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. ಅದೇ ಸಮಯಕ್ಕೆ ತೈವಾನ್ ಕೂಡ ಚೀನಾ ವಿರುದ್ಧ ಹೇಳಿಕೆ ನೀಡಿ ಗಮನಸೆಳೆದಿದೆ. ಮೊದಲೇ ಆಕ್ರೋಶ ಹೊರಹಾಕುತ್ತಿರುವ ಚೀನಾ ತೈವಾನ್ ನೀಡಿರುವ ಈ ಹೇಳಕೆಗೆ ಯಾವ ರೀತಿ ರಿಯಾಕ್ಷನ್ ಕೊಡಲಿದೆ ಎಂಬುದನ್ನ ಕಾದು ನೋಡಬೇಕು. ಆದರೆ ಚೀನಾ ಮತ್ತೊಂದು ಯುದ್ಧಕ್ಕೆ ಸಿದ್ಧವಾಗಿರುವುದು ಸತ್ಯ ಎನ್ನುತ್ತಿದ್ದಾರೆ ತಜ್ಞರು.

ಎಲ್ಲವನ್ನೂ ಅಳೆದು, ತೂಗಿ ಹೇಳುವುದಾರೆ ಚೀನಾ ಯುದ್ಧಕ್ಕೆ ಸಿದ್ಧ ಎಂದರೆ ನಾವು ಕೂಡ ಯುದ್ಧಕ್ಕೆ ತಯಾರಿ ನಡೆಸಿದ್ದೇವೆ ಎಂಬ ರೀತಿ ತೈವಾನ್ ರಕ್ಷಣಾ ಸಚಿವ ಮಾತನಾಡಿದ್ದಾರೆ. ತೈವಾನ್ ಈ ಹೇಳಿಕೆ ನೀಡುವುದರ ಹಿಂದೆ ಅಮೆರಿಕದ ಧೈರ್ಯ ಕೂಡ ಇರಬಹುದು. ಯಾಕಂದ್ರೆ ಅಮೆರಿಕದ ಬೆಂಬಲ ಇಲ್ಲದೆ ತೈವಾನ್ ಇಷ್ಟು ಖಡಕ್ ಹೇಳಿಕೆ ನೀಡಲು ಸಾಧ್ಯವಿಲ್ಲ. ಆದರೆ ತೈವಾನ್ ಈಗ ನೀಡಿರುವ ಹೇಳಿಕೆ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನ ಕಾದು ನೋಡಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+