ತೈವಾನ್: 255 ದಿನದಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲು

ಹಾಂಕಾಂಗ್, ಡಿಸೆಂಬರ್ 22: ಜಗತ್ತಿನಾದ್ಯಂತ ಕೊರೊನಾ ವೈರಸ್ ರೂಪಾಂತರದ ಭೀತಿ ಹೆಚ್ಚುತ್ತಿರುವ ನಡುವೆ ಸುಮಾರು 255 ದಿನಗಳಿಂದ ಕೊರೊನಾ ವೈರಸ್‌ ಮುಕ್ತವಾಗಿದ್ದ ತೈವಾನ್ ದೇಶದಲ್ಲಿ ಮೊದಲ ಬಾರಿಗೆ ಸ್ಥಳೀಯವಾಗಿ ಹರಡಿದ ಕೊರೊನಾ ಪಾಸಿಟಿವ್ ಪ್ರಕರಣವೊಂದು ಪತ್ತೆಯಾಗಿದೆ.

ಕೊರೊನಾ ವೈರಸ್ ಪಿಡುಗನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ದೇಶಗಳಲ್ಲಿ ಒಂದೆನಿಸಿರುವ ದ್ವೀಪ ದೇಶದಲ್ಲಿ ಏಪ್ರಿಲ್‌ನಿಂದ ಇದುವರೆಗೂ ಒಂದೇ ಒಂದು ಸ್ಥಳೀಯವಾಗಿ ಹರಡಿದ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿರಲಿಲ್ಲ. ಅನೇಕ ಪ್ರದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಜನರು ಗುಂಪುಗೂಡುತ್ತಿದ್ದರೂ ಎಲ್ಲಿಯೂ ಸೋಂಕು ವರದಿಯಾಗದೆ ಇರುವುದು ಅಚ್ಚರಿ ಮೂಡಿಸಿತ್ತು.

ನ್ಯೂಜಿಲೆಂಡ್‌ನ ಪೈಲಟ್ ಒಬ್ಬರೊಂದಿಗೆ ಸಂಪರ್ಕ ಹೊಂದಿದ್ದ ಸುಮಾರು 30 ವರ್ಷದ ಪ್ರಾಯದ ಮಹಿಳೆಯೊಬ್ಬರಲ್ಲಿ ಭಾನುವಾರ ಸೋಂಕು ಇರುವುದು ಪತ್ತೆಯಾಗಿದೆ. ನ್ಯೂಜಿಲೆಂಡ್‌ನ ಪೈಲಟ್ ತನ್ನ ಜತೆ ಸಂಪರ್ಕ ಹೊಂದಿದ್ದವರು ಮತ್ತು ತಾನು ಭೇಟಿ ನೀಡಿದ ಪ್ರದೇಶಗಳ ಮಾಹಿತಿ ನೀಡಿಲ್ಲ. ಇದು ತೈವಾನ್‌ನ ಸಾಂಕ್ರಾಮಿಕ ಕಾಯಿಲೆ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಆರೋಗ್ಯ ಸಚಿವ ಚೆನ್ ಶಿಹ್ ಹೇಳಿದ್ದಾರೆ.

Taiwan Reported First Local Transmitted Covid-19 Case In 255 Days

ತೈಪೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಪೈಲಟ್ ಭೇಟಿ ನೀಡಿದ್ದು, ಈ ಭಾಗಗಳ ಜನರು ತಮ್ಮ ಆರೋಗ್ಯದ ಬಗ್ಗೆ ನಿಗಾವಹಿಸುವಂತೆ ಸರ್ಕಾರ ಸೂಚನೆ ನೀಡಿದೆ. ಇಲಾಖೆಯ ಅಂಗಡಿ ಸೇರಿದಂತೆ ಅನೇಕ ಕಟ್ಟಡಗಳಿಗೆ ಭೇಟಿ ನೀಡಿದ್ದ ಪೈಲಟ್‌ಗೆ 10,600 ಅಮೆರಿಕನ್ ಡಾಲರ್ ದಂಡ ವಿಧಿಸಲಾಗಿದೆ.

ಆರೋಗ್ಯ ಸಚಿವಾಲಯದ ಪ್ರಕಾರ ಪೈಲಟ್ ಮತ್ತು ಮಹಿಳೆಯು ಡಿ. 7 ರಿಂದ 12ರವರೆಗೆ ಸಂಪರ್ಕದಲ್ಲಿ ಇದ್ದರು. ಆಕೆ ಕೂಡ 167 ಜನರ ಸಂಪರ್ಕಕ್ಕೆ ಬಂದಿದ್ದಳು. ಅವರಲ್ಲಿ 13 ಮಂದಿಯನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ.

ತೈವಾನ್‌ ಏಪ್ರಿಲ್ 12ರಿಂದ ಕೊರೊನಾ ವೈರಸ್ ಸೋಂಕು ಮುಕ್ತವಾಗಿದೆ. ವಿದೇಶದಿಂದ ಬಂದವರಲ್ಲಿ ಮಾತ್ರವೇ ಸೋಂಕು ಪತ್ತೆಯಾಗುತ್ತಿದ್ದು, ವಿದೇಶದಿಂದ ದ್ವೀಪ ರಾಷ್ಟ್ರಕ್ಕೆ ಬರುವ ಪ್ರಯಾಣಿಕರು ಕ್ವಾರೆಂಟೈನ್‌ಗೆ ಒಳಗಾಗುವುದು ಕಡ್ಡಾಯವಾಗಿದೆ. ಪಾಸಿಟಿವ್ ಕಂಡುಬಂದವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗಿದೆ. ಮಂಗಳವಾರದ ವೇಳೆಗೆ ವಿದೇಶದಿಂದ ಬಂದ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 770ಕ್ಕೆ ತಲುಪಿದೆ. ಆದರೆ 255 ದಿನಗಳಲ್ಲಿ ಇದೇ ಮೊದಲ ಬಾರಿಗೆ ಸ್ಥಳೀಯವಾಗಿ ಹರಡಿದ ಸೋಂಕು ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+