ನಾವ್ ರೆಡಿ, ನೀವ್ ರೆಡಿನಾ? ಚೀನಾ ಜೊತೆ ಯುದ್ಧಕ್ಕೆ ಸಿದ್ಧ ಎಂದ ತೈವಾನ್!

ಒಂದ್ಕಡೆ ಕೊರೊನಾ ಕಂಟಕವಿದ್ರೆ, ಹೊಟ್ಟೆ ತುಂಬಿದ ರಾಷ್ಟ್ರಗಳಿಗೆ ಯುದ್ಧದ್ದೇ ಚಿಂತೆಯಾಗಿದೆ. ಈಗ ಯಾರಪ್ಪ ಯುದ್ಧದ ಮಾತಾಡಿದ್ದು ಅಂದ್ರೆ, ಚೀನಾ ಪರಮ ಶತ್ರು ತೈವಾನ್. ಹೌದು ತೈವಾನ್ ಹಾಗೂ ಚೀನಾ ನಡುವಿನ ದ್ವೇಷದ ಬೆಂಕಿ ಧಗಧಗಿಸುತ್ತಿದೆ. ಇದಕ್ಕೆ ಬಲವಾದ ಕಾರಣ ಇದೆ, ಪದೇ ಪದೆ ತೈವಾನ್‌ಗೆ ಸೇರಿರುವ ಜಾಗಕ್ಕೆ ಚೀನಾದ ಮಿಲಿಟರಿ ವಿಮಾನಗಳು ನುಗ್ಗುತ್ತಿವೆ.

ಇಂತಹ ಆರೋಪಗಳನ್ನು ಮಾಡುತ್ತಲೇ ತೈವಾನ್ ರೊಚ್ಚಿಗೆದ್ದಿದೆ. ಇತ್ತೀಚೆಗೆ ತೈವಾನ್‌ ವಿದೇಶಾಂಗ ಸಚಿವರು ಖಾಸಗಿ ಸಂದರ್ಶನ ನೀಡುತ್ತಾ, ನಾವು ಚೀನಾ ಜೊತೆಗೆ ಯದ್ಧಕ್ಕೆ ಸಿದ್ಧವಾಗಬೇಕಿದೆ ಎಂದಿದ್ದರು. ಇದು ಯುದ್ಧದ ಬೆಂಕಿಗೆ ಡೀಸೆಲ್ ಸುರಿದಿತ್ತು. ತೈವಾನ್‌ನ ವಿದೇಶಾಂಗ ಸಚಿವ ಜೋಸೆಫ್ ವೂ ಪ್ರಕಾರ, ಪದೇ ಪದೆ ಚೀನಾ ತೈವಾನ್‌ ಕೆಣಕುವ ಕೆಲಸ ಮಾಡುತ್ತಿದೆ.

ತೈವಾನ್‌ನ ಗಡಿಯಲ್ಲಿ ಯುದ್ಧ ವಿಮಾನ ಹಾರಿಸುತ್ತಿದೆ. ಅಲ್ಲದೆ ಮಿಲಿಟರಿ ಪ್ರಯೋಗಗಳು ನಡೆಯುತ್ತಿರುವ ಕಾರಣ ನಾವು ಯುದ್ಧಕ್ಕೆ ಸಿದ್ಧರಾಗಬೇಕು ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ತೈವಾನ್ ಚೀನಾಗೆ ಎಚ್ಚರಿಕೆ ಸಂದೇಶ ಕೊಟ್ಟಿದೆ. ಇದರ ಜೊತೆಗೆ ಮುಂದೆ ಏನಾಗುತ್ತೋ ಎಂಬ ಭೀತಿಯನ್ನೂ ಹುಟ್ಟುಹಾಕಿದೆ.

ಹಾಗಾದ್ರೆ ಯುದ್ಧ ನಡೆಯುತ್ತಾ..?

ಹಾಗಾದ್ರೆ ಯುದ್ಧ ನಡೆಯುತ್ತಾ..?

ತೈವಾನ್ ವಿದೇಶಾಂಗ ಸಚಿವರ ಮಾತು ಕೇಳಿದ್ರೆ ಯುದ್ಧ ನಡೆದೇ ಹೋಗುತ್ತಾ? ಎಂಬ ಪ್ರಶ್ನೆಗಳು ಕಾಡೋದು ಸಹಜ. ಆದ್ರೆ ಒಂದು ವಿಚಾರ ಸ್ಪಷ್ಟವಾಗಿ ತಿಳಿಯಬೇಕಿದೆ. ಆಧುನಿಕ ಜಗತ್ತು ನಿಂತಿರುವುದು ಅಭಿವೃದ್ಧಿ ಮೇಲೆ. ಅಭಿವೃದ್ಧಿ ಎಂಬುದು 'ವ್ಯಾಪಾರ' ಎಂಬುದರ ಪರ್ಯಾಯ ಪದ. ಈಗಿನ ಸ್ಥಿತಿ ನೋಡಿದರೆ ಚೀನಾ-ತೈವಾನ್ ಯುದ್ಧಕ್ಕೆ ಸಿದ್ಧವಾಗಿಲ್ಲ. ಇದಕ್ಕೆ ಕಾರಣ ನೂರಾರು, ಅದ್ರಲ್ಲೂ ಕೊರೊನಾ ಹೊಡೆತದಿಂದ ಸುಧಾರಿಸಿಕೊಳ್ಳಲು ಇಬ್ಬರಿಗೂ ಸಾಕಷ್ಟು ಸಮಯ ಅಗತ್ಯವಿದೆ. ಪರಿಸ್ಥಿತಿ ಹೀಗಿರುವಾಗ ಯುದ್ಧಕ್ಕೆ ಎರಡೂ ರಾಷ್ಟ್ರಗಳು ಸಿದ್ಧವಿಲ್ಲ..! ಆದ್ರೆ ಚೀನಾಗೆ ಎಚ್ಚರಿಕೆ ನೀಡುವ ಸಲುವಾಗಿ ತೈವಾನ್ ಸಚಿವರು ಹೀಗೆ ಹೇಳಿರಬಹುದು ಅಂತಿದ್ದಾರೆ ತಜ್ಞರು.

ತೈವಾನ್ ಜೊತೆ ಕಿರಿಕ್ ಯಾಕೆ..?

ತೈವಾನ್ ಜೊತೆ ಕಿರಿಕ್ ಯಾಕೆ..?

ಆರಂಭದಲ್ಲಿ ತೈವಾನ್ ಡಚ್ಚರ ವಸಾಹತಾಗಿತ್ತು. ನಂತರ ಜಪಾನ್ ಆಡಳಿತ ಮಾಡಿತ್ತು. 2ನೇ ಮಹಾಯುದ್ಧದ ಬಳಿಕ ಚೀನಾದ ರಾಷ್ಟ್ರೀಯವಾದಿ ಪಕ್ಷದ ಚಿಯಾಂಗ್ ಕೈ-ಶೇಕ್ ಅಧ್ಯಕ್ಷರಾದರು. 1949ರಲ್ಲಿ ಅಂತರ್ಯುದ್ಧ ನಡೆದಾಗ ಮಾವೋ ನೇತೃತ್ವದ ಕಮ್ಯುನಿಸ್ಟ್ ಸೇನೆ ಚಿಯಾಂಗ್ ಪಡೆಯನ್ನು ಹೊರದಬ್ಬಿತ್ತು. ತನ್ನ ಬೆಂಬಲಿಗರ ಜೊತೆ ಚಿಯಾಂಗ್ ಬಂದು ಸೇರಿದ್ದು ಇದೇ ತೈವಾನ್ ಅನ್ನು. ಮಾವೋ ವಶದಲ್ಲಿದ್ದ ಚೀನಾ ಮುಖ್ಯ ಭೂಭಾಗ ಕಮ್ಯೂನಿಸ್ಟರಿಗೆ ನೆಲೆ ಕೊಟ್ಟಿದ್ದರೆ, ತೈವಾನ್ 'ರಿಪಬ್ಲಿಕ್ ಆಫ್ ಚೀನಾ' ಆಗಿ ಉಳಿಯಿತು. ಬಳಿಕ ಚೀನಾ ಹಾಗೇ ತೈವಾನ್ ಮಧ್ಯೆ ನಿರಂತರ ಘರ್ಷಣೆಗಳು ನಡೆದಿದ್ದವು. ಇದು ಈಗಲೂ ಮುಂದುವರಿದಿದೆ.

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ

ತೈವಾನ್ ಚೀನಾದಷ್ಟು ದೊಡ್ಡ ದೇಶವಲ್ಲ, ಆದರೂ ತೈವಾನ್ ಗಂಡೆದೆ ಮೆಚ್ಚಲೇಬೇಕು. ತನ್ನದೇ ಸರ್ಕಾರ ಹೊಂದಿರುವ ತೈವಾನ್‌ನಲ್ಲಿ 2.40 ಕೋಟಿ ಜನ ವಾಸಿಸುತ್ತಿದ್ದಾರೆ. ಇಲ್ಲಿ ಕೆಲ ದಶಕಗಳ ಹಿಂದೆ ರಾಜಕೀಯ ಸ್ಥಿರತೆ ಇರಲಿಲ್ಲ. 2 ದಶಕಗಳಿಂದ ಈಚೆಗೆ ಅಂದರೆ 1996ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದೆ. ಅದಕ್ಕೂ ಮೊದಲು ಹಲವು ದೇಶಗಳು, ಇದೇ ತೈವಾನ್‌ನ ಹರಿದು-ಹಂಚಿ ಆಳ್ವಿಕೆ ನಡೆಸಿದ್ದವು. ಹೀಗೆ ಕಮ್ಯುನಿಸ್ಟ್ ಚೀನಾ ಪಕ್ಕದಲ್ಲೇ ತೈವಾನ್ ಪ್ರಜಾಪ್ರಭುತ್ವ ದೇಶವಾಗಿ ಬೆಳೆದು ನಿಂತಿದೆ. ಇದು ಸಹಜವಾಗಿಯೇ ಎರಡೂ ರಾಷ್ಟ್ರಗಳ ನಡುವೆ ಘರ್ಷಣೆಗೆ ಕಾರಣವಾಗಿದೆ. ಆಗಾಗ ಅಮೆರಿಕ ತೈವಾನ್ ವಿಚಾರದಲ್ಲಿ ಚೀನಾಗೆ ಎಚ್ಚರಿಕೆ ನೀಡುವುದು ದ್ವೇಷ ಹೆಚ್ಚಾಗುವಂತೆ ಮಾಡುತ್ತಿದೆ.

ಬದಲಾವಣೆ ತಂದಿದ್ದೇ ‘ಮಿಸ್ಟರ್ ಡೆಮಾಕ್ರಸಿ’

ಬದಲಾವಣೆ ತಂದಿದ್ದೇ ‘ಮಿಸ್ಟರ್ ಡೆಮಾಕ್ರಸಿ’

ಲೀ ಟೆಂಗ್ ಹೂಯಿ ಇರದೇ ಇದ್ದಿದ್ದರೆ ತೈವಾನ್‌ ಸ್ವಾಭಿಮಾನದ ಉಳಿವಿನ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ. ಏಕೆಂದರೆ ಇಷ್ಟೊತ್ತಿಗೆ ಹಾಂಕಾಂಗ್ ರೀತಿಯಲ್ಲೇ ತೈವಾನ್ ಕೂಡ ಚೀನಾ ಪಾಲಾಗುತ್ತಿತ್ತು. ಆದರೆ ತೈವಾನ್‌ನ 'ಮಿಸ್ಟರ್ ಡೆಮಾಕ್ರಸಿ' ಎಂದು ಕರೆಸಿಕೊಳ್ಳುವ ಲೀ ಟೆಂಗ್ ಹೂಯಿ, 90ರ ದಶಕದಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆ ತಂದರು. ಇವರ ಪರಿಶ್ರಮದಿಂದ 1996ರಲ್ಲಿ ತೈವಾನ್ ಪೂರ್ಣ ಪ್ರಜಾಪ್ರಭುತ್ವದತ್ತ ತಿರುಗಿತು. 1996ರಲ್ಲಿ ನಡೆದ ತೈವಾನ್‌ನ ಮೊಟ್ಟಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಲೀ ಗೆದ್ದರು. ಈ ಮೂಲಕ ಚೀನಾಗೆ ಸರಿಯಾಗೇ ಬುದ್ಧಿ ಕಲಿಸಿದ್ದವರು ಲೀ. ಆದರೆ 97 ವರ್ಷದ ಲೀ ಜುಲೈ 30ರಂದು ನಿಧನರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+