ಸಿರಿಯಾದಲ್ಲಿ ವಿಷಕಾರಿ ಅನಿಲ ದಾಳಿಗೆ 58 ಸಾವು
ಈ ದಾಳಿಯ ಹೊಣೆಯನ್ನು ಸಿರಿಯಾ ಸರ್ಕಾರ ಹೊತ್ತುಕೊಂಡಿಲ್ಲ. ಅದು, ತಾನೆಂದಿಗೂ ರಾಸಾಯನಿಕ ಅಸ್ತ್ರಗಳನ್ನು ಉಪಯೋಗಿಸುವುದಿಲ್ಲ ಎಂದು ಅದು ಹೇಳಿದೆ.
ಡಮಸ್ಕಸ್ (ಸಿರಿಯಾ), ಏಪ್ರಿಲ್ 4: ದಂಗೆಕೋರರ ಪ್ರಾಂತ್ಯವಾಗಿರುವ ವಾಯುವ್ಯ ದಿಕ್ಕಿನಲ್ಲಿರುವ ಇಡ್ಲಿಬ್ ನಗರದಲ್ಲಿ ಏಪ್ರಿಲ್ 4ರಂದು ನಡೆದಿರುವ ರಾಸಾಯನಿಕ ದಾಳಿಗೆ ಸುಮಾರು 58 ಜನರು ಸಾವಿಗೀಡಾಗಿ ನೂರಾರು ಜನರು ಅಸ್ವಸ್ಥರಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಅಂದಹಾಗೆ, ಇದು ಉಗ್ರರ ದಾಳಿಯಲ್ಲ. ಆ ನಗರದಲ್ಲಿ ಅಡಗಿರುವ ದಂಗೆಕೋರರ ಮೇಲೆ ನಡೆದ ದಾಳಿ ಎಂದು ಸಿರಿಯಾದಲ್ಲಿರುವ ಮಾನವ ಹಕ್ಕುಗಳ ಪರಿವೀಕ್ಷಣಾ ಸಂಸ್ಥೆ ತಿಳಿಸಿದೆ.

ದಂಗೆಕೋರರ ವಿರುದ್ಧ ರಣಕಹಳೆ ಊದಿರುವ ಸಿರಿಯಾ ಸರ್ಕಾರ, ರಷ್ಯಾ ಸರ್ಕಾರದ ಸಹಯೋಗದೊಂದಿಗೆ ದಂಗೆಕೋರರು ಅಡಗಿರುವ ಸ್ಥಳಗಳನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿವೆ. ಮಂಗಳವಾರ, ಇಡ್ಲಿಬ್ ನಗರದ ಮೇಲೆ ನಡೆದಿರುವ ದಾಳಿಯಲ್ಲಿ ಇದರ ಒಂದು ಭಾಗ ಎಂದು ಹೇಳಲಾಗಿದೆ.
ಆದರೆ, ಈ ದಾಳಿಯ ಹೊಣೆಯನ್ನು ಸಿರಿಯಾ ಸರ್ಕಾರ ಹೊತ್ತುಕೊಂಡಿಲ್ಲ. ಅದು, ತಾನೆಂದಿಗೂ ರಾಸಾಯನಿಕ ಅಸ್ತ್ರಗಳನ್ನು ಉಪಯೋಗಿಸುವುದಿಲ್ಲ ಎಂದು ಅದು ಹೇಳಿದೆ.
ಅದೇನೇ ಇರಲಿ. ದಂಗೆಕೋರರು ಹಾಗೂ ಸರ್ಕಾರದ ನಡುವಿನ ಈ ಸಮರದಿಂದಾಗಿ ನಾಗರಿಕರು ಪ್ರಾಣ ತೆರುವಂತಾಗಿರುವುದು ಮಾತ್ರ ದುರಂತ.












Click it and Unblock the Notifications