Burqa Ban: ‘ಹಿಜಾಬ್’ ನಿಷೇಧಿಸಿದ ಸ್ವಿಸ್ ಸರ್ಕಾರ, ಯಾವೆಲ್ಲಾ ದೇಶದಲ್ಲಿ ‘ಬುರ್ಖಾ’ ಬ್ಯಾನ್?
ಕರ್ನಾಟಕದಲ್ಲಿ ಹಿಜಾಬ್ ಬ್ಯಾನ್ ಮಾಡಿದ್ದಾಗ ಈ ಸುದ್ದಿ ಜಗತ್ತಿನ ಮೂಲೆ ಮೂಲೆಯಲ್ಲಿ ಸದ್ದು ಮಾಡಿತ್ತು. ದೇಶದ ವಿವಿಧೆಡೆ ಈ ವಿಚಾರಕ್ಕೆ ಪ್ರತಿಭಟನೆ ಕೂಡ ಆರಂಭವಾದವು. ಆದರೆ ಇಲ್ಲೊಂದು ದೇಶ ದಿಢೀರ್ ಹಿಜಾಬ್ ಬ್ಯಾನ್ ಮಾಡಿದೆ. ಅರೆ ಯಾವುದು ಆ ದೇಶ ಅಂದ್ರಾ? ಅದೊಂದೇ ದೇಶವಲ್ಲ, ಪ್ರಪಂಚದಲ್ಲಿ ಹಲವು ದೇಶಗಳು 'ಬುರ್ಖಾ' ಬ್ಯಾನ್ ಮಾಡಿವೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
'ಬುರ್ಖಾ' ಅಥವಾ 'ಹಿಜಾಬ್' ನಿಷೇಧ ವಿಚಾರ ಭಾರತದಲ್ಲಿ ಸಾಕಷ್ಟು ಚರ್ಚೆಗೆ ವೇದಿಕೆ ಒದಗಿಸಿದೆ. ಅದ್ರಲ್ಲೂ ರಾಜಕೀಯ ಪಕ್ಷಗಳು ಇದೇ ವಿಚಾರಕ್ಕೆ ಫೈಟಿಂಗ್ ಕೂಡ ಮಾಡಿವೆ. ಪರಿಸ್ಥಿತಿ ಹೀಗಿದ್ದಾಗ ಈಗಾಗಲೇ ಜಗತ್ತಿನ ಹತ್ತಾರು ದೇಶಗಳು 'ಹಿಜಾಬ್' ಅಥವಾ ಬುರ್ಖಾ ಹಾಕುವುದನ್ನು ಬ್ಯಾನ್ ಮಾಡಿದೆ. ಇದೀಗ ಹೊಸದಾಗಿ ಸ್ವಿಜರ್‌ಲ್ಯಾಂಡ್ ಕೂಡ ಹಿಜಾಬ್ ಬ್ಯಾನ್ ಮಾಡಿದ ದೇಶಗಳ ಪಟ್ಟಿಗೆ ಸೇರಿದೆ. ಹಾಗಾದರೆ ಯಾವೆಲ್ಲಾ ದೇಶದಲ್ಲಿ ಹಿಜಾಬ್‌ಗೆ ನಿಷೇಧ ಹೇರಲಾಗಿದೆ? ಸ್ವಿಜರ್‌ಲ್ಯಾಂಡ್ ಬುರ್ಖಾ ಬ್ಯಾನ್ ಮಾಡಿದ್ದೇಕೆ?

ಸ್ವಿಜರ್‌ಲ್ಯಾಂಡ್ ಬುರ್ಖಾ ಬ್ಯಾನ್ ಸ್ಟೋರಿ
ಸಾಮಾನ್ಯವಾಗಿ ಮುಂದುವರಿದ ದೇಶಗಳಲ್ಲಿ ಅಭಿವೃದ್ಧಿಗಾಗಿ ಮಾತ್ರ ಒತ್ತು ನೀಡಲಾಗುತ್ತೆ. ಅದರಲ್ಲೂ ದೇಶಕ್ಕೆ ಅಗತ್ಯ ಇರುವ ಯಾವುದೆ ಕಠಿಣ ನಿರ್ಧಾರ ಕೈಗೊಳ್ಳಲು ಪಾಶ್ಚಿಮಾತ್ಯ ರಾಷ್ಟ್ರಗಳು ಹಿಂದೆ ಮುಂದೆ ಯೋಚಿಸುವುದಿಲ್ಲ. ಹೀಗೆ ಇದೀಗ ಸ್ವಿಜರ್‌ಲ್ಯಾಂಡ್ ಬುರ್ಖಾ ಬ್ಯಾನ್ ಮಾಡಿದೆ. ಆದರೆ ದಿಢೀರ್ ಹೀಗೆ ಬುರ್ಖಾ ಬ್ಯಾನ್ ಮಾಡಿದ್ದು ಏಕೆ ಎಂಬುದಕ್ಕೆ ಸ್ಪಷ್ಟ ಉತ್ತರ ನೀಡಿಲ್ಲವಾದರೂ, ಭಾರಿ ಬಹುಮತದಿಂದ 'ಹಿಜಾಬ್' ಬ್ಯಾನ್ ನಿರ್ಧಾರವು ಸಿಸ್ ಸಂಸತ್‌ನಲ್ಲಿ ಅಂಗೀಕಾರವಾಗಿದೆ.
'ಹಿಜಾಬ್' ಹಾಕಿದರೆ ಭಾರಿ ದಂಡ
ಅಷ್ಟಕ್ಕೂ ಸ್ವಿಜರ್‌ಲ್ಯಾಂಡ್ ಬಲಪಂಥೀಯ ಆಡಳಿತದ ಪೀಪಲ್ಸ್ ಪಾರ್ಟಿ ಈಗಾಗಲೇ ಬುರ್ಖಾ ಬ್ಯಾನ್ ಮಾಡಲು 2021ರಲ್ಲೇ ಸ್ವಿಸ್ ಸಂಸತ್ ಮೇಲ್ಮನೆಯಲ್ಲಿ ಅಂಗೀಕಾರ ಪಡೆದಿತ್ತು. ಹೀಗೆ ಕೆಳಮನೆಯಲ್ಲಿ ಕೂಡ ಇದೀಗ ಬಿಲ್ ಪಾಸ್ ಆಗಿದೆ. 151-29ರ ವ್ಯತ್ಯಾಸದಲ್ಲಿ 'ಹಿಜಾಬ್' ಬ್ಯಾನ್ ಮಾಡುವ ನಿರ್ಧಾರಕ್ಕೆ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಇನ್ನುಮುಂದೆ ಸ್ವಿಜರ್‌ಲ್ಯಾಂಡ್‌ನ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿದರೆ 1,000 ಸ್ವಿಸ್ ಫ್ರಾಂಕ್ಸ್ ಅಂದರೆ ಅಮೆರಿಕನ್ ಡಾಲರ್ ಲೆಕ್ಕದಲ್ಲಿ ಸುಮಾರು 1,100 ಡಾಲರ್ ದಂಡ ಬೀಳಲಿದೆ. ಭಾರತದ ರೂಪಾಯಿಗೆ ಇದನ್ನ ಕನ್ವರ್ಟ್ ಮಾಡಿ ಹೇಳುವುದಾದರೆ ಸುಮಾರು 91 ಸಾವಿರ ರೂಪಾಯಿ ದಂಡ.
ಇನ್ನು ಸ್ವಿಜರ್‌ಲ್ಯಾಂಡ್ ಸರ್ಕಾರದ ಈ ನಿರ್ಧಾರಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಾಗೇ ಸ್ವಿಸ್ ಸರ್ಕಾರ ಬೇಕು ಅಂತಾ ಈ ಕೆಲಸ ಮಾಡಿದೆ ಎಂಬ ಆರೋಪವನ್ನು ಮಾಡಲಾಗಿದೆ. ಆದ್ರೆ ಬೇರೆ ಬೇರೆ ದೇಶದಲ್ಲೂ 'ಹಿಜಾಬ್' ಅಥವಾ 'ಬುರ್ಖಾ' ಬ್ಯಾನ್ ಮಾಡಿರುವ ಬಗ್ಗೆ ಉದಾಹರಣೆ ನೀಡಿರುವ ಸ್ವಿಜರ್‌ಲ್ಯಾಂಡ್ ಸರ್ಕಾರ ತನ್ನ ಕ್ರಮವನ್ನ ಸಮರ್ಥಿಸಿಕೊಂಡಿದೆ. ಹಾಗಾದ್ರೆ ಯಾವ ಯಾವ ದೇಶಗಳಲ್ಲಿ ಬುರ್ಖಾ ಬ್ಯಾನ್ ಆಗಿದೆ ಗೊತ್ತಾ? ಹಿಜಾಬ್ ಬ್ಯಾನ್ ಮಾಡಿರುವ ದೇಶಗಳ ಸಂಪೂರ್ಣ ಪಟ್ಟಿ ಇಲ್ಲಿದೆ, ಮಾಹಿತಿಗಾಗಿ ಮುಂದೆ ಓದಿ.
'ಬುರ್ಖಾ' ಬ್ಯಾನ್ ಮಾಡಿದ ದೇಶಗಳು
1). ಫ್ರಾನ್ಸ್
2). ಚೀನಾ
3). ಬೆಲ್ಜಿಯಮ್
4). ಡೆನ್ಮಾರ್ಕ್
5). ಶ್ರೀಲಂಕಾ
6). ಜರ್ಮನಿ
7). ಆಸ್ಟ್ರಿಯಾ
8). ಬಲ್ಗೇರಿಯಾ
9). ನೆದರ್ಲ್ಯಾಂಡ್
10). ನಾರ್ವೆ
11). ಸ್ವೀಡನ್
12). ರಿಪಬ್ಲಿಕ್ ಆಫ್ ಕಾಂಗೋ












Click it and Unblock the Notifications