ಏಲಿಯನ್ ದಾಳಿ ಭಯದಲ್ಲಿ ಅಮೆರಿಕ: ಹಸುಗಳ ನಾಲಗೆ ಕಟ್!
ಟೆಕ್ಸಾಸ್: ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಏಲಿಯನ್ ಭೀತಿ ಶುರುವಾಗಿದೆ. ಮೊದಲಿನಿಂದ ಏಲಿಯನ್ಸ್ ಕುರಿತು ಹತ್ತಾರು ಕಥೆಗಳು ಅಮೆರಿಕದಲ್ಲೇ ಹುಟ್ಟಿಕೊಂಡಿದ್ದವು. ಇದೀಗ ದಿಢೀರ್ ಭೀಕರ ಘಟನೆಯೊಂದು ನಡೆದಿದ್ದು, ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ 6 ಹಸುಗಳ ನಾಲಗೆ ಕಟ್ ಮಾಡಲಾಗಿದೆ. ಆದರೆ ಅಲ್ಲಿ ಒಂದೇ ಒಂದು ಹನಿ ರಕ್ತ ಕೂಡ ನೆಲಕ್ಕೆ ಬಿದ್ದಿಲ್ಲ!
There are strange and mysterious cattle deaths being reported across the US. Lately in Texas, longhorns have been found dead and mutilated.
— Tanya Ivany 🇺🇲 (@realivany) April 20, 2023
Mutilated with precise cuts with the exposed side of their face cut along the jaw line and the tongue, completely removed. pic.twitter.com/rAoVBT1FEY
ಹೌದು, ಅಮೆರಿಕ ಸಾಕಷ್ಟು ದೊಡ್ಡ ಭೂಪ್ರದೇಶ ಹೊಂದಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಖಾಲಿ ಖಾಲಿ ಜಾಗ ಕಾಣಸಿಗುತ್ತವೆ. ಹೀಗೆ ಟೆಕ್ಸಾಸ್‌ನ ಗ್ರಾಮೀಣ ಭಾಗದಲ್ಲಿ ವಿಚಿತ್ರ ಘಟನೆ ನಡೆದಿದ್ದು, 6 ಹಸುಗಳ ನಾಲಗೆ ಕತ್ತರಿಸಿ ಅರಣ್ಯ ಪ್ರದೇಶದ ಸಮೀಪದಲ್ಲೇ ಬಿಸಾಡಲಾಗಿದೆ. ಆದರೆ ವಿಚಿತ್ರವೆಂದರೆ ಹಸುಗಳ ನಾಲಗೆ ಕತ್ತರಿಸಿದ್ದರೂ ಒಂದೇ ಒಂದು ಹನಿ ರಕ್ತ ಕೂಡ ನೆಲಕ್ಕೆ ಬಿದ್ದಿಲ್ಲ. ಹೀಗಾಗಿ ಭಯ ಡಬಲ್ ಆಗಿದ್ದು, ರಾತ್ರಿ ವೇಳೆ ಹೊರಗೆ ಬರಲು ಕೂಡ ಭಯಪಡುವ ಸ್ಥಿತಿ ಟೆಕ್ಸಾಸ್ ಹಳ್ಳಿಗಳಲ್ಲಿ ಈಗ ನಿರ್ಮಾಣವಾಗಿದೆ.

ಒಂದೇ ಜಾಗದಲ್ಲಿ ಕೊಲೆ ನಡೆದಿಲ್ಲ!
ಮೊದಲಿಗೆ 6 ಹಸುಗಳ ನಾಲಗೆ ಕತ್ತರಿಸಿ ಅರಣ್ಯ ಪ್ರದೇಶದ ಸಮೀಪದಲ್ಲೇ ಬಿಸಾಡಿರುವ ಸುದ್ದಿ ಕೇಳಿ ಸ್ಥಳೀಯ ಪೊಲೀಸರು ಅಲ್ಲಿಗೆ ಓಡಿದ್ದರು. ಆದರೆ ಈ ವಿಚಾರ ಬಯಲಾಗುತ್ತಿದ್ದಂತೆ ಇದೇ ರೀತಿಯ ಮತ್ತಷ್ಟು ಪ್ರಕರಣ ಬಯಲಾಗಿದೆ. ಟೆಕ್ಸಾಸ್ ರಾಜ್ಯದ ವಿವಿಧ ಹಳ್ಳಿಗಳಲ್ಲಿ ಇದೇ ರೀತಿ ಹಸುಗಳ ನಾಲಗೆ ಕತ್ತರಿಸಿ ಬಿಸಾಡಲಾಗಿದೆ. ಆದರೆ ಅಲ್ಲೂ ಒಂದೇ ಒಂದು ಹನಿ ರಕ್ತ ನೆಲಕ್ಕೆ ಬಿದ್ದಿಲ್ಲ. ಹೀಗಾಗಿ ಈ ಎಲ್ಲಾ ಹತ್ಯೆಗಳ ಹಿಂದೆ ಅಮಾನುಷ ಶಕ್ತಿ ಅಥವಾ ಏಲಿಯನ್ ಕೈವಾಡ ಇದೆ ಎಂಬ ಆತಂಕದಲ್ಲಿ ಅಮೆರಿಕದ ನಿವಾಸಿಗಳು ನಲುಗಿದ್ದಾರೆ.
ಅಮೆರಿಕದ ಅಧಿಕಾರಿಗಳು ಏನಂದ್ರು?
ಪೊಲೀಸ್ ಅಧಿಕಾರಿಗಳು ಈ ಘಟನೆಯ ಬಗ್ಗೆ ಆತಂಕ ಹೊರಹಾಕಿದ್ದಾರೆ. ಅದರಲ್ಲೂ ಹಸುಗಳ ನಾಲಗೆ ಕತ್ತರಿಸಿರುವ ರೀತಿ ನೋಡಿದರೆ ಮೇಲ್ನೋಟಕ್ಕೆ ಇದನ್ನ ಮನುಷ್ಯರು ಮಾಡಿದಂತೆ ಕಾಣುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಅಕಸ್ಮಾತ್ ಹೀಗೆ ಮನುಷ್ಯರೇ ನಾಲಗೆ ಕತ್ತರಿಸಿದ್ದರೆ ರಕ್ತ ಸುರಿಯಬೇಕಿತ್ತು. ಇಲ್ಲ ಕೊಲೆ ಮಾಡಿರುವ ಹಸುಗಳ ಮೇಲೆ ರಕ್ತ ಚೆಲ್ಲಿರಬೇಕಾಗಿತ್ತು. ಆದರೆ ಇದ್ಯಾವುದೂ ನಡೆಯದೇ ಇರುವುದು ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಏಲಿಯನ್ ಭೀತಿ ಜೊತೆಗೆ ದೆವ್ವಗಳ ದಾಳಿ ಅಂತಲೂ ಸುದ್ದಿ ಓಡಾಡುತ್ತಿದೆ.
ಮನುಷ್ಯರು ಓಡಾಡಿದ ಗುರುತೇ ಇಲ್ಲ!
ಹೌದು, ಮೊದಲಿಗೆ ಈ ಪ್ರಕರಣ ಬೆಳಕಿಗೆ ಬಂದಿದ್ದು ಟೆಕ್ಸಾಸ್ ರಾಜ್ಯದ ಮ್ಯಾಡಿಸನ್ ಕೌಂಟಿಯಲ್ಲಿ. ರೈತನೊಬ್ಬ ತನ್ನ 6 ವರ್ಷದ ಹಸುವಿನ ನಾಲಗೆ ಕತ್ತರಿಸಿ ಬಿಸಾಡಿರುವ ಬಗ್ಗೆ ಕಂಪ್ಲೆಂಟ್ ಕೊಟ್ಟಿದ್ದ. ಇದಾದ ಬಳಿಕ ಹಲವು ಜಾಗಗಳಿಂದ ಇದೇ ರೀತಿ ಹತ್ತಾರು ಹಸುಗಳನ್ನ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆದರೆ ಹೀಗೆ ಹಸುಗಳು ಸತ್ತುಬಿದ್ದ ಜಾಗದಲ್ಲಿ ಮನುಷ್ಯರು ಓಡಾಡಿರುವ ಗುರುತೇ ಇಲ್ಲವಂತೆ, ಮನುಷ್ಯನ ಒಂದೇ ಒಂದು ಹೆಜ್ಜೆ ಗುರುತು ಕೂಡ ಪೊಲೀಸರಿಗೆ ಅಲ್ಲಿ ಪತ್ತೆ ಆಗಿಲ್ಲ. ಹೀಗಾಗಿ ಆತಂಕ ತೀವ್ರವಾಗಿದೆ. ಭೂತದ ಕಾಟವೋ ಅಥವಾ ಏಲಿಯನ್ ಕಾಟವೋ ಅಂತಾ ಜನ ಚರ್ಚಿಸುತ್ತಿದ್ದಾರೆ.

ಒಟ್ನಲ್ಲಿ ಅಮೆರಿಕದಲ್ಲಿ ಮತ್ತೆ ಏಲಿಯನ್ ಭೀತಿ ಶುರುವಾಗಿದೆ. ಮೊದಲಿನಿಂದಲೂ ಅಮೆರಿಕದಲ್ಲಿ ಇಂತಹ ಹಲವಾರು ಕಥೆ ಹುಟ್ಟಿಕೊಂಡಿವೆ. ಈಗಲೂ ಅಂತಹದ್ದೇ ಕಥೆ ಇರಬೇಕು ಬಿಡಿ ಅಂತಾ ಕೆಲವರು ಹೇಳುತ್ತಿದ್ದಾರೆ. ಆದರೆ ಈಗ ನಡೆದಿರುವ ಘಟನೆ ಸಾಕಷ್ಟು ಆತಂಕ ಸೃಷ್ಟಿಮಾಡಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಹಸುಗಳನ್ನ ಕೊಲ್ಲಲಾಗುತ್ತಿದೆ. ಆದರೆ ಕೇವಲ ಹಸುಗಳ ನಾಲಗೆಯನ್ನ ಮಾತ್ರ ಕತ್ತರಿಸುತ್ತಿರುವುದು ಸ್ಥಳೀಯ ರೈತರಲ್ಲಿ ಆತಂಕ ಮೂಡಿಸಿದೆ. ಅಮೆರಿಕದ ಪೊಲೀಸರು ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ












Click it and Unblock the Notifications