New Year 2025: ಬಾಹ್ಯಾಕಾಶದಲ್ಲಿ 16 ಬಾರಿ ಹೊಸ ವರ್ಷಾಚರಣೆಗೆ ಸಾಕ್ಷಿಯಾಗಲಿರುವ ಸುನಿತಾ ವಿಲಿಯಮ್ಸ್!

2024ರ ವರ್ಷ ಕೊನೆಯಾಗಿ 2025ರ ಹೊಸ ವರ್ಷವನ್ನು ಜಗತ್ತು ಅದ್ದೂರಿಯಾಗಿ ಸ್ವಾಗತಿಸುತ್ತಿದೆ. ಭಾರತೀಯ ಕಾಲಮಾನಕ್ಕೆ ಹೋಲಿಕೆ ಮಾಡಿದರೆ ಹಲವು ದೇಶಗಳು ನಮಗಿಂತ ಮೊದಲು ಹೊಸ ವರ್ಷವನ್ನು ಸ್ವಾಗತಿಸಿದರೆ ಇನ್ನೂ ಹಲವು ದೇಶಗಳು ನಮಗಿಂತ ತಡವಾಗಿ ಹೊಸ ವರ್ಷವನ್ನು ಸ್ವಾಗತಿಸುತ್ತವೆ. ಆದರೆ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಸಿಬ್ಬಂದಿ ಬರೋಬ್ಬರಿ 16 ಬಾರಿ ಹೊಸ ವರ್ಷವನ್ನು ಅನುಭವಿಸಲು ಸಜ್ಜಾಗಿದ್ದಾರೆ.

ಭಾರತೀಯ ಮೂಲಕ ಅಮೆರಿಕದ ಗಗನಯಾತ್ರಿ ಸುನೀತ್ ವಿಲಿಯಮ್ಸ್ ಮತ್ತು ಅವರ ಸಿಬ್ಬಂದಿ ಬಾಹ್ಯಾಕಾಶದಲ್ಲಿ 16 ಬಾರಿ ಹೊಸ ವರ್ಷವನ್ನು ಆಚರಿಸಲಿದ್ದಾರೆ. ಬಾಹ್ಯಾಕಾಶ ನೌಕೆ ಭೂಮಿಯ ಸುತ್ತ ಸುತ್ತುತ್ತಿರುವಾಗ 16 ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳಿಗೆ ಅವರು ಸಾಕ್ಷಿಯಾಗಲಿದ್ದಾರೆ. ಭೂಮಿಯಿಂದ 400 ಕಿಮೀ ಎತ್ತರದಲ್ಲಿ ಅವರು 2025ರ ವರ್ಷವನ್ನು ಸ್ವಾಗತಿಸಲಿದ್ದಾರೆ.

sunita williams celebrates new year 16 times in space

ಹಲವು ತಿಂಗಳಿನಿಂದ ಬಾಹ್ಯಾಕಾಶ ವಾಸಿ

ಐಎಸ್‌ಎಸ್‌ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸುನಿತಾ ವಿಲಿಯಮ್ಸ್ 2024ರ ಜೂನ್‌ ತಿಂಗಳಿನಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಎಂಟು ದಿನಗಳ ಕಾಲ ಅವರು ಬಾಹ್ಯಾಕಾಶ ನೌಕೆಯಲ್ಲಿ ಕಾರ್ಯಾಚರಣೆ ಮಾಡಿ ವಾಪಸ್ ಬರಲು ಯೋಜಿಸಲಾಗಿತ್ತು. ಆದರೆ ಅವರು ವಾಪಸ್ ಬರಲು ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ಅವರು ಇನ್ನೂ ಬಾಹ್ಯಾಕಾಶದಲ್ಲಿ ಇರಬೇಕಾದ ಅನಿವಾರ್ಯತೆ ಉಂಟಾಗಿದೆ.

ಅವರನ್ನು ವಾಪಸ್ ಕರೆತರಲು ನಾಸಾ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಆದರೂ ಅವರು ಮಾರ್ಚ್ 2025ರವರೆಗೆ ಬಾಹ್ಯಾಕಾಶದಲ್ಲಿ ಉಳಿಯುವ ಸಾಧ್ಯತೆ ಇದೆ. ಬಾಹ್ಯಾಕಾಶ ನಿಲ್ದಾಣ ಪ್ರತಿ 90 ನಿಮಿಷಗಳಿಗೆ ಇಂದು ಬಾರಿ ಭೂಮಿಯನ್ನು ಸುತ್ತುಹಾಕುವ ಕಾರಣ 16 ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಸಾಕ್ಷಿಯಾಗಲಿದ್ದಾರೆ.

ಬಾಹ್ಯಾಕಾಶದಲ್ಲೇ ಹೊಸ ವರ್ಷ ಆಚರಣೆ ಮಾಡಲು ಸುನೀತಾ ವಿಲಿಯಮ್ಸ್ ಮತ್ತು ಸಿಬ್ಬಂದಿ ಸಜ್ಜಾಗಿದ್ದಾರೆ. ಭೂಮಿಯಿಂದ ಕಳಿಸಿರುವ ವಿಶೇಷ ಊಟ ಸೇರಿದಂತೆ ಅನೇಕ ಚಟುವಟಿಗಳೊಂದಿಗೆ ಹೊಸ ವರ್ಷಾಚರಣೆ ಮಾಡಲಿದ್ದಾರೆ. ವಿಡಿಯೋ ಕರೆ ಮಾಡುವ ಮೂಲಕ ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆ ಸಂಪರ್ಕ ಸಾಧಿಸಲಿದ್ದು ಸಂದೇಶ ವಿನಿಮಯ ಮಾಡಿಕೊಳ್ಳಲಿದ್ದಾರೆ.

ಸುನಿತಾ ವಿಲಿಯಮ್ಸ್ ಇತ್ತೀಚೆಗೆ ಮುಕ್ತಾಯವಾದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಾಹ್ಯಾಕಾಶದಿಂದಲೇ ತಮ್ಮ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಕ್ರಿಸ್‌ಮಸ್ ಮತ್ತು ಹೊಸವರ್ಷಕ್ಕೆ ಕೂಡ ಜನತೆಗೆ ಶುಭಾಶಯ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+