ಅಮೆರಿಕ ವಿವಿ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿಯ ಶೂಟೌಟ್

Student shot to death on US South Carolina State university campus
ಆರೆಂಜ್ ಬರ್ಗ್, ಜ.25: ಅಮೆರಿಕ ವಿವಿಯಲ್ಲಿ ವಿದ್ಯಾರ್ಥಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ವಿದ್ಯಾರ್ಥಿಯನ್ನು ವಿಶ್ವವಿದ್ಯಾಲಯದ ಆವರಣದ ಹೊರಭಾಗದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

South Carolina State University ಆಡಳಿತವರ್ಗದ ಪ್ರಕಾರ ಶುಕ್ರವಾರ ಮಧ್ಯಾಹ್ನ ಈ ಹತ್ಯೆ ನಡೆದಿದೆ. ಘಟನೆಯ ನಂತರ ಕ್ಯಾಂಪಸ್ಸಿನಿಂದ ಓಡಿಹೋದ ನಾಲ್ವರು ದುಷ್ಕರ್ಮಿಗಳಿಗಾಗಿ ಪೊಲೀಸರು ಬೇಟೆಯಾರಂಭಿಸಿದ್ದಾರೆ.

'ನನ್ನ ವಿದ್ಯಾರ್ಥಿಗಳ ರಕ್ಷಣೆಯ ಹೊಣೆ ನನ್ನದಾಗಿತ್ತು. ಆದರೆ ದುರ್ದೈವ ಈ ವಿದ್ಯಾರ್ಥಿಯ ಹತ್ಯೆ ನಡೆದುಹೋಗಿದೆ. ಅವನು ನಿಜಕ್ಕೂ ಒಳ್ಳೆಯ ಸ್ಟೂಡೆಂಟ್ ಆಗಿದ್ದ' ಎಂದು South Carolina State University ಅಧ್ಯಕ್ಷ ಥಾಮಸ್ ಎಲ್ಸೆ ಕಂಬನಿ ಮಿಡಿದಿದ್ದಾರೆ.

South Carolina State ವಿಶ್ವವಿದ್ಯಾಲಯ ಸುರಕ್ಷಿತವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಸೇಫ್ ಆಗಿದ್ದಾರೆ. ಆದರೂ ದುರ್ಘಟನೆ ನಡೆದುಹೋಗಿದೆ. ಹತ್ಯೆಗೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಹೇಳಿರುವ ವಿಶ್ವವಿದ್ಯಾಲಯದ ಕ್ಯಾಂಪಸ್ ಪೊಲೀಸರು ಹತ್ಯೆಗೀಡಾದ ವಿದ್ಯಾರ್ಥಿಯ ಹೆಸರನ್ನು ಬಹಿರಂಗಪಡಿಸಿಲ್ಲ.

South Carolina State ವಿಶ್ವವಿದ್ಯಾಲಯವು ಚರಿತ್ರಾರ್ಹ ಶಿಕ್ಷಣ ಸಂಸ್ಥೆ. ಸುಮಾರು 3,200 ಕಪ್ಪು ಜನಾಂಗದ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇದು ಕೊಲಂಬಿಯಾದಿಂದ 64 ಕಿಮೀ ದೂರದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+